PhonePe, Google Pay ಬಳಕೆದಾರರೇ ಎಚ್ಚರ! UPI ಪೇಮೆಂಟ್​ ದಿಢೀರ್​ ಸ್ಥಗಿತ

author-image
Ganesh Nachikethu
Updated On
ಡೆಬಿಟ್ ಕಾರ್ಡ್ ಇಲ್ಲದೆಯೂ ನೀವು UPI ಪಿನ್ ಬದಲಾಯಿಸಬಹುದು.. ಅದು ಹೇಗೆ..?
Advertisment
  • ಮಧ್ಯಾಹ್ನದಿಂದ ವರ್ಕ್​ ಆಗುತ್ತಲೇ ಇಲ್ಲ UPI ಪೇಮೆಂಟ್​
  • UPI ಅಪ್ಲಿಕೇಶನ್ಸ್​ಗೆ ಲಿಂಕ್ ಮಾಡಿರೋ ಗ್ರಾಹಕರೇ ಅಲರ್ಟ್
  • ನೀವು PhonePe, Google Pay ಬಳಸುತ್ತಿದ್ದೀರಾ?

ಸಾಮಾನ್ಯವಾಗಿ ಎಲ್ಲರೂ ಫೋನ್‌ ಪೇ (PhonePe) ಮತ್ತು ಗೂಗಲ್ ಪೇ (Google Pay) ನಂತಹ ಯುಪಿಐ ಅಪ್ಲಿಕೇಶನ್ಸ್​ ಬಳಸುತ್ತಿದ್ದಾರೆ. ಈಗ ಎಲ್ಲಾ ಗ್ರಾಹಕರಿಗೂ ಯುಪಿಐ ಪೇಮೆಂಟ್​​ ಸಮಸ್ಯೆ ಆಗಿದೆ. HDFC, ಆಕ್ಸಿಸ್​​, ಎಸ್​ಬಿಐ ಸೇರಿದಂತೆ ಎಲ್ಲಾ ಬ್ಯಾಂಕ್​ಗಳು ಯುಪಿಐ ಪೇಮೆಂಟ್​​ ಸರ್ವರ್​ ಡೌನ್​​ ಆಗಿದೆ​. ಇದರ ಪರಿಣಾಮ ಯಾವ ಪೇಮೆಂಟ್​ ಮಾಡಲು ಸಾಧ್ಯವಾಗುತ್ತಿಲ್ಲ.

ಇಂದು ಕೆಲವು ಗಂಟೆಗಳಿಂದ UPI ಪೇಮೆಂಟ್​ ವರ್ಕ್​ ಆಗುತ್ತಲೇ ಇಲ್ಲ. ಮಧ್ಯಾಹ್ನ 2.30 ರಿಂದಲೇ ತಾತ್ಕಾಲಿಕವಾಗಿ ಸೇವೆ ಸ್ಥಗಿತ ಆಗಿದೆ. ತುರ್ತು ವ್ಯವಸ್ಥೆ ನಿರ್ವಹಣೆ ಸಂಬಂಧ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಎಲ್ಲರೂ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ.


">March 26, 2025


">March 26, 2025

ಮಧ್ಯಾಹ್ನದಿಂದಲೇ ಎಲ್ಲಾ ಬ್ಯಾಂಕ್‌ಗೆ ಲಿಂಕ್ ಮಾಡಲಾದ UPI ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಯಾರಿಗೂ ಫೋನ್ ಪೇ ಮತ್ತು ಗೂಗಲ್ ಪೇ ಮೂಲಕ ಹಣ ವರ್ಗಾಯಿಸಲು ಸಾಧ್ಯವಾಗುತ್ತಿಲ್ಲ.

UPI ಅಪ್ಲಿಕೇಶನ್‌ನಲ್ಲಿ ಎರಡು ಅಥವಾ ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಿದ್ರೂ ಸುಲಭವಾಗಿ ಹಣ ಪಾವತಿಸಲು ಆಗುತ್ತಿಲ್ಲ. ಯಾರಿಗಾದ್ರೂ ಹಣ ಕಳಿಸೋ ಮುನ್ನ ಜಾಗೃತೆ ವಹಿಸಿ.

ಇದನ್ನೂ ಓದಿ:ಬಿಜೆಪಿಯಿಂದ ಉಚ್ಚಾಟನೆ; ನನ್ನ ಹೋರಾಟ ನಿಲ್ಲಲ್ಲ ಎಂದ ಯತ್ನಾಳ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment