/newsfirstlive-kannada/media/post_attachments/wp-content/uploads/2025/01/UPI-ID-TRANSACTIONS.jpg)
ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ವ್ಯವಸ್ಥೆಯಲ್ಲಿ ಆಗಸ್ಟ್ 1ರಿಂದ ಹಲವು ಬದಲಾವಣೆಗಳು ಜಾರಿಗೆ ಬರಲಿವೆ. ಫೋನ್‌ಪೇ, ಗೂಗಲ್ ಪೇ, ಪೇಟಿಎಂ ಮುಂತಾದ ಯುಪಿಐ ಆ್ಯಪ್ಗಳನ್ನು ದಿನನಿತ್ಯ ಬಳಸುವವರಿಗೆ ಈ ನಿಯಮ ಅನ್ವಯವಾಗುತ್ತದೆ.
ಇದನ್ನೂ ಓದಿ:ತಪ್ಪಿದ ಭಾರೀ ಅನಾಹುತ.. 173 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ -ಮುಂದೆ ಏನಾಯ್ತು..?
ಬ್ಯಾಲೆನ್ಸ್ ತಿಳಿಯಲು ಮಿತಿ (Limit to know the balance: ಪ್ರತಿ ಯುಪಿಐ ಌಪ್ನಲ್ಲಿ ಕೆಲ ಬಳಕೆದಾರರು ಪದೇ ಪದೇ ತಮ್ಮ ಬ್ಯಾಲೆನ್ಸ್ ಚೆಕ್ ಮಾಡುತ್ತಲೇ ಇರುತ್ತಾರೆ. ಈಗ ಬಳಕೆದಾರರು ದಿನಕ್ಕೆ 50ಕ್ಕಿಂತ ಹೆಚ್ಚು ಬಾರಿ ಯುಪಿಐನಲ್ಲಿ ಬ್ಯಾಲೆನ್ಸ್ ಚೆಕ್ ಮಾಡುವಂತಿಲ್ಲ. ಒಂದು ವೇಳೆ ಬಳಕೆದಾರರು 2 ಌಪ್ಗಳನ್ನು ಬಳಸುತ್ತಿದ್ದರೆ, ಒಂದು ಌಪ್ನಲ್ಲಿ 50 ಬಾರಿ ಸೇರಿದಂತೆ ಒಟ್ಟು 100 ಬಾರಿ ಬ್ಯಾಲೆನ್ಸ್ ಚೆಕ್ ಮಾಡಬಹುದು. ಈ ಮೂಲಕ ಸರ್ವರ್ ಮೇಲಿನ ಒತ್ತಡ ಕಡಿಮೆ ಆಗುತ್ತದೆ.
ಆಟೋಪೇಗೆ ನಿಗದಿತ ಸಮಯ (Autopay scheduled time): ನೆಟ್ಫ್ಲಿಕ್ಸ್, ಯೂಟ್ಯೂಬ್ ಸಬ್ಸ್ಕ್ರಿಪ್ಶನ್, ಮ್ಯೂಚುವಲ್ ಫಂಡ್, ಎಸ್ಐಪಿ, ಇಎಂಐ, ಯುಟಿಲಿಟಿ ಬಿಲ್ ಮುಂತಾದವುಗಳಿಗೆ ಸಂಬಂಧಿಸಿದ ಆಟೋಪೇ ವಹಿವಾಟು ಇನ್ನೂ ಮುಂದೆ ನಿಗದಿತ ಸಮಯದ ಸ್ಲಾಟ್ಗಳಲ್ಲಿ ಮಾತ್ರ ನಡೆಯಲಿದೆ. ಬೆಳಿಗ್ಗೆ 10ರ ಮೊದಲು, ಮಧ್ಯಾಹ್ನ 1ರಿಂದ ಸಂಜೆ 5ರವರೆಗೆ, ರಾತ್ರಿ 9.30ರ ನಂತರ ಮಾತ್ರ ಇನ್ನು ಮುಂದೆ ಆಟೋಪೇ ನಡೆಯಲಿದೆ. ಇದರಿಂದಾಗಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಮತ್ತು ಸಂಜೆ 5 ರಿಂದ ರಾತ್ರಿ 9.30ರವರೆಗಿನ ಪೀಕ್ ಅವರ್ನಲ್ಲಿ ಸರ್ವರ್ ಮೇಲಿನ ಒತ್ತಡ ಕಡಿಮೆಯಾಗಲಿದೆ.
ವಹಿವಾಟು ಸ್ಟೇಟರ್ ಚೆಕಿಂಗ್ (Transaction status checking): ವಹಿವಾಟು ವಿಫಲವಾದರೆ ಬಳಕೆದಾರ ದಿನಕ್ಕೆ ಕೇವಲ 3 ಬಾರಿ ಮಾತ್ರ ಸ್ಟೇಟಸ್ ಚೆಕ್ ಮಾಡಬಹುದು. ಮತ್ತು ಪ್ರತಿ ಚೆಕಿಂಗ್ನ ನಡುವೆ ಕನಿಷ್ಠ 90 ಸೆಕೆಂಡ್ ಅಂತರ ಇರಬೇಕು. ಇದರಿಂದ ಸರ್ವರ್ ಮೇಲಿನ ಒತ್ತಡ ಕಡಿಮೆಯಾಗಲಿದೆ.
ಪೇಮೆಂಟ್ ರಿವರ್ಸಲ್ಗೆ ಮಿತಿ (Limit on payment reversal): ಬಳಕೆದಾರ 30 ದಿನಗಳಲ್ಲಿ ಕೇವಲ 10 ಬಾರಿ ಪೇಮೆಂಟ್ ರಿವರ್ಸಲ್ ವಿನಂತಿ ಸಲ್ಲಿಸಬಹುದು. ಒಬ್ಬನೇ ವ್ಯಕ್ತಿ ಅಥವಾ ಸಂಸ್ಥೆಗೆ 5 ಬಾರಿ ಮಾತ್ರ ರಿವರ್ಸಲ್ಗೆ ಕೋರಿಕೆ ಸಲ್ಲಿಸಬಹುದು.
ರಿಸೀವರ್ನ ಬ್ಯಾಂಕ್ ಹೆಸರು ಡಿಸ್ಪ್ಲೇ (Receiver's bank name display): ಈ ತಿಂಗಳ ಆರಂಭದಿಂದ ಜಾರಿಯಲ್ಲಿರುವ ನಿಯಮದಂತೆ, ಹಣ ಕಳುಹಿಸುವ ಮೊದಲು ರಿಸೀವರ್ನ ಬ್ಯಾಂಕ್ನ ಹೆಸರು ಡಿಸ್ಪ್ಲೇ ಆಗುತ್ತದೆ. ಇದು ತಪ್ಪು ಖಾತೆಗೆ ಹಣ ಕಳುಹಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಈ ಬದಲಾವಣೆಗಳು ಆಟೋಮ್ಯಾಟಿಕ್ ಆಗಿ ಯುಪಿಐ ಌಪ್ಗಳಲ್ಲಿ ಅನುಷ್ಠಾನಕ್ಕೆ ಬರಲಿವೆ. ಇದಕ್ಕಾಗಿ ಬಳಕೆದಾರರು ಏನೂ ಮಾಡುವ ಅವಶ್ಯಕತೆ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ