Advertisment

ಏಪ್ರಿಲ್ 1 ರಿಂದ ಗ್ರಾಹಕರ UPI ಸೇವೆ ಬಂದ್​.. ನಿಮ್ಮದೂ ಆಗಿರಬಹುದು ಎಚ್ಚೆತ್ತುಕೊಳ್ಳಿ..!

author-image
Gopal Kulkarni
Updated On
ಸಿಕ್ಕ ಸಿಕ್ಕಲ್ಲಿ ನೆಟ್ ಬ್ಯಾಂಕಿಂಗ್ ಮಾಡೋ ಮುನ್ನ ಎಚ್ಚರ; ಸೈಬರ್​ ಖದೀಮರ ಕ್ರಿಮಿನಲ್ ಐಡಿಯಾ ಬಯಲಿಗೆ!
Advertisment
  • ಏಪ್ರಿಲ್ 1 ರಿಂದ ಕೆಲವು ಗ್ರಾಹಕರಿಗೆ ಶಾಕ್ ಕೊಡಲಿದೆ ಯುಪಿಐ
  • ನಿಷ್ಕ್ರಿಯಗೊಂಡಿರುವ ನಂಬರ್​ಗಳಿಗೆ ಯುಪಿಐ ಸೇವೆ ಬಂದ್​
  • ಯುಪಿಐ ಸೇವೆ ಮುಂದುವರಿಯಲು ನೀವು ಏನು ಮಾಡಬೇಕು ?

ಕೆಲವು ನಂಬರ್​​ಗಳಿಗೆ ಏಪ್ರಿಲ್ 1 ರಿಂದ ಯುಪಿಐ ಸೇವೆಯ ಸೌಲಭ್ಯಗಳು ಇರುವುದಿಲ್ಲ. ಸುದೀರ್ಘ ಕಾಲದಿಂದ ಕಾರ್ಯನಿರ್ವಹಿಸಿದಿರುವ ಮತ್ತು ಇನ್ ಆ್ಯಕ್ಟಿವ್ ಇರುವ ನಂಬರ್​ಗಳಿಗೆ ಏಪ್ರಿಲ್ 1 ರಿಂದ ಯುಪಿಐ ಸೇವೆಗಳು ಬಂದ್ ಆಗಲಿವೆ.

Advertisment

ದಿ ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ, ದೇಶದ ಎಲ್ಲಾ ಬ್ಯಾಂಕ್ ಹಾಗೂ ಪೇಮೆಂಟ್ ಸರ್ವಿಸ್ ಪ್ರೊವೈಡರ್ಸ್​ಗೆ ಈ ಒಂದು ಸೂಚನೆಯನ್ನು ನೀಡಿದೆ. ಇಂತಹ ನಂಬರ್​ಗಳನ್ನು ಕೂಡಲೇ ಡಿ ಲಿಂಕ್​ ಮಾಡಿ ಆರ್ಥಿಕ ವಂಚನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಕೂಡಲೇ ಯುಪಿಐ ಬಳಕೆದಾರರು ತಮ್ಮ ಬ್ಯಾಂಕ್ ರಿಜಿಸ್ಟರ್ ನಂಬರ್​ಗಳನ್ನು ಖಚಿತಪಡಿಸಿಕೊಂಡು ಅದನ್ನು ಆ್ಯಕ್ಟಿವ್ ಆಗಿ ಇಟ್ಟುಕೊಂಡು ಈ ಸಮಸ್ಯೆಯಿಂದ ಕೂಡಲೇ ದೂರಾಗಬೇಕೆಂದು ಕೂಡ ಸೂಚನೆ ನೀಡಲಾಗಿದೆ

ಈ ದಿಢೀರ್ ಬದಲಾವಣೆ ಏಕೆ?
ನಿಷ್ಕ್ರೀಯಗೊಂಡ ಮೊಬೈಲ್​ ನಂಬರ್​ಗಳು ಯುಪಿಐ ಜೊತೆ ಲಿಂಕ್ ಆಗಿರುವುದರಿಂದ ಭದ್ರತಾ ಅಪಾಯ ಹೆಚ್ಚು ಇರುತ್ತದೆ. ಯಾವಾಗ ಮೊಬೈಲ್ ನಂಬರ್ ಬಳಕೆದಾರರು ತಮ್ಮ ನಂಬರ್ ಅನ್ನು ಬದಲಾಯಿಸುತ್ತಾರೋ ಅಥವಾ ಬ್ಯಾಂಕ್ ಜೊತೆ ಲಿಂಕ್ ಇರುವ ನಂಬರ್​ ಅನ್ನು ನಿಷ್ಕ್ರೀಯಗೊಳಿಸುತ್ತಾರೊ ಆಗ ಅದು ದುರುಪಯೋಗವಾಗುವ ಸಾಧ್ಯತೆ ತುಂಬಾ ಇರುತ್ತದೆ. ಹಣಕಾಸು ವರ್ಗಾವಣೆಗಳಲ್ಲಿ ಅನೇಕ ರೀತಿಯ ವಂಚನೆಗಳು ಮೋಸಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂಗಳಿಗೆ ಕೂಡಲೇ ನಿಷ್ಕ್ರೀಯಗೊಂಡಿರುವ ನಂಬರ್​​ಗಳನ್ನು ತಮ್ಮ ಸೇವೆಯಿಂದ ತೆಗೆದು ಹಾಕುವಂತೆ ಎನ್​ಪಿಸಿಐ ಸೂಚನೆ ನೀಡಿದೆ

ಇದನ್ನೂ ಓದಿ:ಹೊಸ ಸ್ಮಾರ್ಟ್​ ಫೋನ್ ಪರಿಚಯಿಸಿದ ಗೂಗಲ್; ಭಾರತದಲ್ಲಿ ಎಷ್ಟು ರೂಪಾಯಿಗೆ ಸಿಗುತ್ತೆ Pixel 9a?

Advertisment

ಏಪ್ರಿಲ್ 1ರಿಂದ ಬ್ಯಾಂಕ್ ಹಾಗೂ ಪಿಎಸ್​ಪಿಎಸ್​ ಡಿಆ್ಯಕ್ಟಿವ್, ಇನ್​ಆ್ಯಕ್ಟಿವ್ ಆಗಿರುವ ನಂಬರ್​ಗಳನ್ನು ಯುಪಿಐ ಸೇವೆಯಿಂದ ತೆಗೆದು ಹಾಕಲು ತೀರ್ಮಾನ ಮಾಡಿವೆ.

ಸೇವೆಯನ್ನು ಬಂದ್ ಮಾಡುವ ಮೊದಲು ಮೊಬೈಲ್​ ನಂಬರ್ ಬಳಕೆದಾರರಿಗೆ ಒಂದು ನೋಟಿಫಿಕೇಷನ್ ಕಳುಹಿಸಲಾಗುತ್ತದೆ.

ಸೂಚನೆ ನೀಡಿದ ಬಳಿಕವೂ ಮೊಬೈಲ್ ನಂಬರ್ ನಿಷ್ಕ್ರೀಯವಾಗಿಯೇ ಇದ್ದರೆ. ಅದನ್ನು ಯುಪಿಐ ಸೇವೆಯ ಲಿಸ್ಟ್​ನಿಂದ ತೆಗೆದು ಹಾಕಲಾಗುತ್ತದೆ.

Advertisment

ಬಳಕೆದದಾರರು ಕೂಡಲೇ ತಮ್ಮ ನಂಬರ್​ನ್ನು ಅಪ್​ಡೇಟ್ ಮಾಡಿಕೊಳ್ಳುವ ಮೂಲಕ ಹಾಗೂ ಯುಪಿಐ ರಿಸ್ಟೋರ್ ಮಾಡಿಕೊಳ್ಳುವ ಮೂಲಕ ಕೊನೆಯ ದಿನಾಂಕಕ್ಕೂ ಮೊದಲು ತಮ್ಮ ಸೇವೆಯನ್ನು ಯಥಾಸ್ಥಿತಿಯಲ್ಲಿ ಕಾದಿಟ್ಟುಕೊಳ್ಳಬಹುದು.

ಯಾರಿಗೆಲ್ಲಾ ಪರಿಣಾಮ ಬೀರಲಿದೆ ಹೊಸ ನಿಯಮ ?
ಮೊಬೈಲ್​ ನಂಬರ್​ನ್ನು ಚೆಂಜ್ ಮಾಡಿ ಅದನ್ನು ಬ್ಯಾಂಕ್​ನಲ್ಲಿ ಅಪ್​ಡೇಟ್ ಮಾಡದೇ ಇರುವ ಬಳಕೆದಾರರು

ತಮ್ಮ ನಂಬರ್ ನಿಷ್ಕ್ರೀಯೆಯಲ್ಲಿದ್ದರೂ ಕೂಡ ಕಾಲ್​ ಸೇವೆಯಾಚೆ, ಎಸ್ಎಂಎಸ್ ಹಾಗೂ ಬ್ಯಾಂಕ್​ ನೋಟಿಫಿಕೇಷನ್​ಗಳಿಗೋಸ್ಕರ ಸುದೀರ್ಘ ಕಾಲದಿಂದ ಉಪಯೋಗಿಸ್ಪಡುತ್ತಿರುವ ನಂಬರ್​ಗಳು

Advertisment

ಬೇರೆ ಯಾರದೋ ಹೆಸರಿನಲ್ಲಿರುವ ನಂಬರ್​ನ್ನು ಉಪಯೋಗಿಸುತ್ತಿರುವ ಬಳಕೆದಾರರು.

ಇದನ್ನೂ ಓದಿ:Land Of Roti ಎಂದು ಯಾವ ರಾಜ್ಯವನ್ನು ಕರೆಯಲಾಗುತ್ತದೆ? ಎಷ್ಟು ಬಗೆಯ ರೋಟಿಗಳು ಇಲ್ಲುಂಟು?

ಯುಪಿಐ ಆ್ಯಕ್ಟಿವ್ ಆಗಿ ಇಟ್ಟುಕೊಳ್ಳುವುದು ಹೇಗೆ?
ನಿಮ್ಮ ನಂಬರ್​ ಇನ್ನೊಬ್ಬರಿಗೆ ಕಾಲ್ ಮಾಡುವಷ್ಟು ಹಾಗೂ ಮೆಸೇಜ್ ಕಳುಹಿಸುವಷ್ಟು ಆ್ಯಕ್ಟಿವ್ ಇದೆಯಾ ಚೆಕ್ ಮಾಡಿಕೊಳ್ಳಿ

ಬ್ಯಾಂಕ್​​ನ ಎಸ್​ಎಂಎಸ್ ಅಲರ್ಟ್ ಮತ್ತು ಒಟಿಪಿಗಳು ಸರಿಯಾಗಿ ಬರುತ್ತಿವೆಯಾ ಎಂದು ಖಚಿತ ಪಡಿಸಿಕೊಳ್ಳಿ

Advertisment

ಯುಪಿಐ ಜೊತೆ ಲಿಂಕ್ ಹೊಂದಿರುವ ನಿಮ್ಮ ನಂಬರ್​ ಅನ್ನು ನೆಟ್ ಬ್ಯಾಂಕಿಂಗ್, ಯುಪಿಐ ಆ್ಯಪ್ಸ್​, ಎಟಿಎಂ ಅಥವಾ ಬ್ಯಾಂಕ್​ಗೆ ವಿಸಿಟ್ ಮಾಡಿ ಅಪ್​ಡೇಟ್ ಮಾಡಿಕೊಳ್ಳಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment