/newsfirstlive-kannada/media/post_attachments/wp-content/uploads/2025/04/UPI-Down.jpg)
ದೇಶಾದ್ಯಂತ ಇಂದು UPI, ಪೇಟಿಎಂ, ಫೋನ್ಪೇ, ಗೂಗಲ್ ಪೇ ಸೇವೆಯಲ್ಲಿ ತೊಂದರೆಯಾಗಿದೆ. ಆನ್‌ಲೈನ್ ಪೇಮೆಂಟ್ ನಂಬಿಕೊಂಡಿದ್ದವರು ಪರದಾಟ ನಡೆಸುವಂತಾಗಿದ್ದು, ಜೇಬಲ್ಲಿ ಹಣ ಇಟ್ಟುಕೊಂಡು ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಇಂದು ಬೆಳಗ್ಗೆಯಿಂದಲೇ ಆನ್‌ಲೈನ್ ಪೇಮೆಂಟ್ ಮಾಡುವ UPI ಸರ್ವೀಸ್ನಲ್ಲಿ ಅಡಚಣೆ ಆಗಿದೆ. ಸುಮಾರು 1 ಗಂಟೆಗೂ ಹೆಚ್ಚು ಕಾಲ ಈ ತೊಂದರೆ ಕಾಣಿಸಿಕೊಂಡಿದ್ದು, ಜೇಬಲ್ಲಿ ದುಡ್ಡಿಲ್ಲದ ಗ್ರಾಹಕರು ಹಣಕ್ಕಾಗಿ ಪರದಾಡುವಂತಾಗಿದೆ. ದೇಶಾದ್ಯಂತ ಆರ್ಥಿಕ ವ್ಯವಹಾರದ ಮೇಲೆ ಇದು ಪರಿಣಾಮ ಬೀರಿದೆ.
ಇದನ್ನೂ ಓದಿ: ಸಾಲ ಪಡೆದವರಿಗೆ RBI ಸಿಹಿ ಸುದ್ದಿ.. ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲದ EMI ಕಡಿಮೆ!
ಸಕಾಲಕ್ಕೆ ಪೇಟಿಎಂ, ಫೋನ್ಪೇ, ಗೂಗಲ್ ಪೇ ಕೆಲಸ ಮಾಡದ ಹಿನ್ನೆಲೆಯಲ್ಲಿ ಹಲವಾರು ಜನ ತಮಗಾದ ತೊಂದರೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. X ನಲ್ಲಿ UPI ಸರ್ವರ್ ಡೌನ್ ಅನ್ನೋ ಟ್ಯಾಗ್‌ನಲ್ಲಿ ನೆಟ್ಟಿಗರು ಪೋಸ್ಟ್ ಮಾಡುತ್ತಿದ್ದಾರೆ.
ಕೆಲವೇ ಗಂಟೆಯಲ್ಲಿ 1,168ಕ್ಕೂ ಹೆಚ್ಚು ದೂರು ಸಲ್ಲಿಸಲಾಗಿದೆ. ಅದರಲ್ಲಿ ಗೂಗಲ್ ಪೇ, ಪೇಟಿಎಂ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
UPIDown ಕಾರಣವೇನು?
UPI ಸರ್ವರ್ ಡೌನ್ ಆದ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಈ ಬಗ್ಗೆ ಸ್ಪಷ್ಟನೆ ನೀಡಿದೆ. UPI ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾಗಶಃ UPI ವಹಿವಾಟು ಕುಸಿತವಾಗಿದೆ. ನಾವು ಆದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ. ಈ ಅಡಚಣೆಗಾಗಿ ಗ್ರಾಹಕರಲ್ಲಿ ವಿಷಾಧಿಸುತ್ತೇವೆ ಎಂದು NPCI ತಿಳಿಸಿದೆ.
ಈಗಂತೂ ಪ್ರತಿಯೊಬ್ಬರು UPI ಮೂಲಕ ಹಣ ಪಾವತಿ ಮಾಡುವ ಅಭ್ಯಾಸ ರೂಡಿಸಿಕೊಂಡಿದ್ದಾರೆ. ಇದಕ್ಕಾಗಿ ಆನ್‌ಲೈನ್ ಪೇಮಂಟ್ ವೇದಿಕೆಗಳಾದ ಪೇಟಿಎಂ, ಫೋನ್ಪೇ, ಗೂಗಲ್ ಪೇಯನ್ನ ಬಳಸಲಾಗುತ್ತಿದೆ. ಇವುಗಳ ಅವಲಂಬಿತರಾಗಿರುವುದರಿಂದ ಸಾಕಷ್ಟು ಮಂದಿ ತಮ್ಮ ಜೇಬಿನಲ್ಲಿ ಹಣ ಇಟ್ಟುಕೊಳ್ಳುವುದನ್ನೇ ಬಿಟ್ಟಿದ್ದಾರೆ. ಇದೀಗ ದಿಢೀರ್ ಸಮಸ್ಯೆ ಎದುರಾಗಿರುವುದರಿಂದ ಜೇಬಲ್ಲಿ ದುಡ್ಡು ಇಲ್ಲದೇ ಪರದಾಡುವಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ