/newsfirstlive-kannada/media/post_attachments/wp-content/uploads/2025/07/DVG_UPS_2.jpg)
ದಾವಣಗೆರೆ: ಮನೆಯಲ್ಲಿ ಯುಪಿಎಸ್ (Uninterruptible Power Supply) ಸ್ಫೋಟಗೊಂಡು ಇಬ್ಬರು ಕೊನೆಯುಸಿರೆಳೆದಿದ್ದು ಇನ್ನು ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದಾವಣಗೆರೆ ನಗರದ ಕಾಯಿಪೇಟೆಯಲ್ಲಿ ಕುಮಾರ್ ಜೈನ್ (36) ಹಾಗೂ ವಿಮಲಾಬಾಯಿ (68) ಪ್ರಾಣ ಕಳೆದುಕೊಂಡವರು. ಇವರು ಕಾಯಿಪೇಟೆಯಲ್ಲಿರುವ ಬಿಜೆಪಿಯ ಮಾಜಿ ಕಾರ್ಪೋರೇಟರ್ ರುದ್ರಮುನಿ ಅವರ ಮನೆಯಲ್ಲಿ ಇದ್ದರು. ರಾತ್ರಿ ಸಂದರ್ಭದಲ್ಲಿ ಎಲ್ಲರೂ ಮಲಗಿರುವಾಗ ಯುಪಿಎಸ್ ದೊಡ್ಡ ಮಟ್ಟದಲ್ಲಿ ಸ್ಫೋಟಗೊಂಡಿದೆ.
ಇದನ್ನೂ ಓದಿ:ಶಿವಮೊಗ್ಗ; ಪದವಿ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿ ಹೃದಯಾಘಾತದಿಂದ ನಿಧನ
ಇದರಿಂದ ರಾತ್ರಿ ಮನೆಯಲ್ಲಿ ದಟ್ಟ ಹೊಗೆ ಆವರಿಸಿ ಬಿಟ್ಟಿದೆ. ಹೀಗಾಗಿ ಒಳಗಿದ್ದವರಿಗೆ ಉಸಿರಾಟದ ತೊಂದರೆ ಆಗಿದೆ. ಆದರೂ ಮನೆಯಲ್ಲಿದ್ದ ಆರು ಜನರ ಪೈಕಿ ನಾಲ್ವರು ದಟ್ಟ ಹೊಗೆಯಲ್ಲಿ ಹೊರಗಡೆ ಓಡಿ ಬಂದಿದ್ದಾರೆ. ಉಳಿದ ಇಬ್ಬರು ಆಚೆ ಬರಲು ಆಗದೇ ದಟ್ಟವಾದ ಹೊಗೆಯಿಂದ ಉಸಿರಾಡಲು ಆಗದೇ ಜೀವ ಬಿಟ್ಟಿದ್ದಾರೆ. ಇನ್ನು ಈ ಸಂಬಂಧ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ