/newsfirstlive-kannada/media/post_attachments/wp-content/uploads/2025/04/Karnataka-UPSC-EXAM-Result-1.jpg)
ಬೆಂಗಳೂರು: 2024ನೇ ಸಾಲಿನ ಟಾಪರ್ ಪಟ್ಟಿಯನ್ನು ಕೇಂದ್ರ ಲೋಕಸೇವಾ ಆಯೋಗ (UPSC) ಇಂದು ಬಿಡುಗಡೆ ಮಾಡಿದೆ. ಪ್ರಯಾಗ್‌ರಾಜ್‌ನ ಶಕ್ತಿ ದುಬೆ ಅವರು 2024ರ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. 1009 ಅಭ್ಯರ್ಥಿಗಳಲ್ಲಿ ಕರ್ನಾಟಕ ರಾಜ್ಯದ ಇಬ್ಬರು ಟಾಪ್ 50 RANKನಲ್ಲಿ ಸ್ಥಾನ ಪಡೆದಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗವು ಇಂದು ಪ್ರಕಟಿಸಿದ ಫಲಿತಾಂಶದಲ್ಲಿ ಕರ್ನಾಟಕದಿಂದ 29 ಅಭ್ಯರ್ಥಿಗಳು UPSC ಸೇವೆಗೆ ಆಯ್ಕೆ ಆಗಿದ್ದಾರೆ. 2024ನೇ ಸಾಲಿನಲ್ಲಿ ಇಂಡಿಯಾ ಫಾರ್ IAS ಅಕಾಡೆಮಿಗೆ 20 Rankಗಳು ಲಭಿಸಿವೆ.
UPSC ಟಾಪ್ 50ರಲ್ಲಿ ರಾಜ್ಯದ ಆರ್. ರಂಗ ಮಂಜುಗೆ 24ನೇ RANK ಸಿಕ್ಕಿದೆ. ರಂಗ ಮಂಜು ಅವರು ಇನ್ಸೈಟ್ IAS ವಿದ್ಯಾರ್ಥಿ ಆಗಿದ್ದಾರೆ. ಸಚಿನ್ ಬಸವರಾಜ್ ಗುತ್ತೂರ್ಗೆ 41ನೇ ಟಾಪರ್ ಆಗಿದ್ದಾರೆ.
ಅಕ್ಕ IAS ಅಕಾಡೆಮಿಯಲ್ಲಿ ಈ ಬಾರಿ ಒಟ್ಟು 8 ಅಭ್ಯರ್ಥಿಗಳು UPSC ಪಾಸ್ ಮಾಡಿದ್ದಾರೆ.
ಇದನ್ನೂ ಓದಿ: UPSC ಟಾಪರ್ ಶಕ್ತಿ ದುಬೆ ಯಾರು.. ಇವರ ವಿದ್ಯಾಭ್ಯಾಸ ಹೇಗಿತ್ತು? ಸಾಧನೆಯ ಗುಟ್ಟೇನು?
ಕರ್ನಾಟಕದ ಟಾಪರ್‌ಗಳ ಪಟ್ಟಿ!
ಆರ್. ರಂಗ ಮಂಜು - 24
ಬಸವರಾಜ್ ಗುತ್ತೂರ್ - 41
ಬಿಎಂ ಮೇಘನಾ - 425
ಭರತ್ ಸಿ ಯಾರಂ - 567
ಡಾ. ಭಾನುಪ್ರಕಾಶ್ - 523
ನಿಖಿಲ್ ಎಂಆರ್- 724
ಟಿ. ವಿಜಯ್ ಕುಮಾರ್ - 894
ಹನುಮಂತಪ್ಪ ನಂದಿ - 910
ಮೋಹನ್ ಪಾಟೀಲ್ - 984
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ