/newsfirstlive-kannada/media/post_attachments/wp-content/uploads/2024/09/JOBS_GOVT_NEW.jpg)
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ)ವು ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಹಾಗೂ ಇತರೆ ಉದ್ಯೋಗಗಳಿಗೆ ಅರ್ಜಿಗಳನ್ನು ಸ್ವೀಕಾರ ಮಾಡುತ್ತಿದೆ. ಯಾರಿಗೆ ಈ ಉದ್ಯೋಗದ ಅವಶ್ಯಕತೆ ಇದೆಯೋ ಅಂತಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಶಾರ್ಟ್ ಲಿಸ್ಟ್ ಮಾಡಿ ಅಭ್ಯರ್ಥಿಗಳ ಗುರುತಿಸಲಾಗುತ್ತದೆ. ಇವರನ್ನು ಬಳಿಕ ಸಂದರ್ಶನಕ್ಕೆ ಕರೆಯಲಾಗುತ್ತದೆ.
ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಹಾಗೂ ಇತರೆ ಉದ್ಯೋಗಗಳಿಗೆ ಯುಪಿಎಸ್ಸಿ ಇಲಾಖೆಯ ಅರ್ಹತಾ ಮಾನದಂಡಗಳೇನು, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ, ಅಂತಿಮ ದಿನಾಂಕ ಸೇರಿದಂತೆ ಪ್ರಮುಖ ಮಾಹಿತಿ ಇಲ್ಲಿ ನೀಡಲಾಗಿದೆ. ಹೀಗಾಗಿ ಅಭ್ಯರ್ಥಿಗಳು ಕೊನೆವರೆಗೂ ಈ ಲೇಖನವನ್ನು ಗಮನಿಸಬೇಕು.
ಹುದ್ದೆಗಳ ವಿವರ ಈ ಕೆಳಕಂಡಂತೆ ಇದೆ
ಅಪಾಯಕಾರಿ ಸರಕುಗಳ ಇನ್ಸ್‌ಪೆಕ್ಟರ್- 3 ಉದ್ಯೋಗಗಳು
ಸಹಾಯಕ ಪ್ರಾಧ್ಯಾಪಕ ಹುದ್ದೆಗಳು- 33 ಉದ್ಯೋಗಗಳು
ಇದನ್ನೂ ಓದಿ:SSLC, ITI, BE ಮುಗಿಸಿದವ್ರಿಗೆ ಗುಡ್ನ್ಯೂಸ್.. 9,970 ಹುದ್ದೆಗಳಿಗೆ ಅರ್ಜಿ ಆಹ್ವಾನ
ಶೈಕ್ಷಣಿಕ ಅರ್ಹತೆ
- ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ
- ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET) ಅಥವಾ UGC ಅಥವಾ CSIR ನಡೆಸಿದ ಪಾಸ್ ಆಗಿರಬೇಕು
- ಪಿಎಚ್‌ಡಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ಅರ್ಜಿ ಶುಲ್ಕ ಎಷ್ಟು?
ಮಹಿಳೆಯರು, ಎಸ್‌ಸಿ, ಎಸ್‌ಟಿ ಹಾಗೂ ಅಂಗವೈಕಲ್ಯ ಅಭ್ಯರ್ಥಿಗಳಿಗೆ ವಿನಾಯಿತಿ ಇದೆ
ಎಲ್ಲ ಅಭ್ಯರ್ಥಿಗಳು 25 ರೂಪಾಯಿ ಪಾವತಿಸಬೇಕು
ಆಯ್ಕೆ ಪ್ರಕ್ರಿಯೆ-
- ಅಭ್ಯರ್ಥಿಗಳು ಅರ್ಜಿಗಳಲ್ಲಿ ಒದಗಿಸಿದ ವಿವರಗಳ ಆಧಾರಿಸಿ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ
- ಅರ್ಜಿಯಲ್ಲಿ ಅರ್ಹತಾ ಮಾನದಂಡ ಪೂರೈಸುವವರನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುತ್ತೆ
- ಅಭ್ಯರ್ಥಿ ಶಾರ್ಟ್ ಲಿಸ್ಟ್ಗೆ ಅರ್ಹತೆ ಪಡೆದ್ರೆ ಮಾತ್ರ ಸಲ್ಲಿಸಿದ ದಾಖಲೆ ಪರಿಶೀಲಿಸಲಾಗುತ್ತದೆ
- ಸಂದರ್ಶನದಲ್ಲಿ ಪರ್ಫಾಮೆನ್ಸ್ ಮತ್ತು ಪರಿಶೀಲಿಸಿದ ರುಜುವಾತುಗಳ ಆಧಾರದ ಮೇಲೆ ಆಯ್ಕೆ
ಅಭ್ಯರ್ಥಿಗಳು ಸಂದರ್ಶನಕ್ಕೆ ಹೋಗುವಾಗ ಮೂಲ ದಾಖಲೆ ಹಾಗೂ ಎಲ್ಲ ಪ್ರಮಾಣ ಪತ್ರ ಹೊಂದಿರಬೇಕು. ಸೆಲ್ಫ್ ಅಟಿಸ್ಟೇಡ್ ಮಾಡಿರುವ ಜೆರಾಕ್ಸ್ ಪ್ರತಿಗಳನ್ನು ಹಾಜರು ಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಪರಿಶಿಲನೆ ಮಾಡಬೇಕು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ- 27 ಮಾರ್ಚ್ 2025
ಈ ವೆಬ್ಸೈಟ್ಗೆ ಭೇಟಿ ನೀಡಿ ಅಪ್ಲೇ ಮಾಡಿ-https://upsc.gov.in/
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ