/newsfirstlive-kannada/media/post_attachments/wp-content/uploads/2024/08/JOB_NEWS_1.jpg)
ನವದೆಹಲಿ: ಕೇಂದ್ರ ಸರ್ಕಾರದ ಸಚಿವಾಲಯಗಳಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಅರ್ಜಿಗಳನ್ನು ಆಹ್ವಾನ ಮಾಡಿದೆ. ಈ ಹುದ್ದೆಗಳಿಗೆ ಸ್ಯಾಲರಿ ಪ್ರತಿ ತಿಂಗಳು 1.52 ಲಕ್ಷ ರೂ.ಗಳಿಂದ 2.7 ಲಕ್ಷ ರೂಪಾಯಿಗಳವರೆಗೆ ಇರುತ್ತದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ:ರೈಲ್ವೆ ಇಲಾಖೆಯಿಂದ ಸಾವಿರಕ್ಕೂ ಅಧಿಕ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಅಪ್ಲೇ ಮಾಡಲು ಕೊನೆ ದಿನಾಂಕ..?
ಕೇಂದ್ರ ಸರ್ಕಾರದ ಗೃಹ, ಹಣಕಾಸು, ಸ್ಟೀಲ್ ಸಚಿವಾಲಯಗಳಲ್ಲಿ ಖಾಲಿ ಇರುವ 10 ಜಂಟಿ ಕಾರ್ಯದರ್ಶಿ ಹುದ್ದೆಗಳು, ಕೃಷಿ ಮತ್ತು ರೈತರ ಕಲ್ಯಾಣ, ನಾಗರಿಕ ವಿಮಾನಯಾನ, ಮಾಹಿತಿ ಮತ್ತು ಪ್ರಸಾರದಂತಹ ಇತರೆ ಸಚಿವಾಲಯಗಳಲ್ಲಿ ಖಾಲಿ ಇರುವ 35 ನಿರ್ದೇಶಕ/ಉಪ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಆಸಕ್ತರು ಈ ಹುದ್ದೆಗಳಿಗೆ ಸೆಪ್ಟೆಂಬರ್ 17ರ ಒಳಗಾಗಿ ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಅರ್ಜಿಗಳನ್ನು ಹಾಕಬಹುದು.
ಇದನ್ನೂ ಓದಿ: ಖಾಲಿ ಇರೋ ಜಾಬ್ಗಳಿಗೆ ಆಯಿಲ್ ಇಂಡಿಯಾ ಲಿಮಿಟೆಡ್ ಅರ್ಜಿ ಆಹ್ವಾನ.. ನೀವು ಟ್ರೈ ಮಾಡಿ..!
ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ತಜ್ಞರನ್ನು ಸರ್ಕಾರದ ಪ್ರಮುಖ ಸಚಿವಾಲಯಗಳಲ್ಲಿ ನೇಮಕ ಮಾಡಿಕೊಂಡು ಕೆಲಸ ಪ್ರಾಮುಖ್ಯತೆ ಹೆಚ್ಚಿಸುವುದು ಇದರ ಉದ್ದೇಶವಾಗಿದೆ. 2018ರಿಂದ ಕೇಂದ್ರ ಸರ್ಕಾರ ಈ ಪ್ರಕ್ರಿಯೆ ಪ್ರಾರಂಭ ಮಾಡಿದೆ. ಸದ್ಯದ ಹುದ್ದೆಗಳನ್ನು ಗುತ್ತಿಗೆ ಆಧಾರದ (ಕಾಂಟ್ರಾಕ್ಟ್ ಬೇಸ್) ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.
ಸ್ಯಾಲರಿ ಎಷ್ಟು ಇರುತ್ತದೆ..?
- ಜಂಟಿ ಕಾರ್ಯದರ್ಶಿಗೆ ಪ್ರತಿ ತಿಂಗಳಿಗೆ 2.7 ಲಕ್ಷ ರೂ.ಗಳು
- ನಿರ್ದೇಶಕ ಹುದ್ದೆಗೆ ಪ್ರತಿ ತಿಂಗಳಿಗೆ 2.3 ಲಕ್ಷ ರೂ.ಗಳು
- ಉಪ ಕಾರ್ಯದರ್ಶಿ ಹುದ್ದೆಗೆ ಪ್ರತಿ ತಿಂಗಳಿಗೆ 1.52 ಲಕ್ಷ ರೂ.ಗಳು
ಜಂಟಿ ಕಾರ್ಯದರ್ಶಿ ಹುದ್ದೆಗೆ ಯಾವ ಅರ್ಹತೆ ಇರಬೇಕು..?
ತಂತ್ರಜ್ಞಾನ, ಮ್ಯಾನೇಜ್ಮೆಂಟ್, ಪಬ್ಲಿಕ್ ಪಾಲಿಸಿ, ಡೆವಲಪ್ಮೆಂಟ್ ಸ್ಟಡೀಸ್, ಅರ್ಥಶಾಸ್ತ್ರ, ಲಿಬರಲ್ ಆರ್ಟ್ಸ್ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರಬೇಕು. 15 ವರ್ಷ ಕೆಲಸ ಮಾಡಿರುವ ಅನುಭವ ಇರಬೇಕು. ಜೊತೆಗೆ 10 ವರ್ಷ ನಾಯಕತ್ವದ ಸ್ಥಾನ ವಹಿಸಿರಬೇಕು. ಇನ್ನು ವಿಶೇಷ ಚೇತನರಿಗೂ ಇದರಲ್ಲಿ ಅವಕಾಶ ನೀಡಲಾಗಿದೆ. 15 ಹುದ್ದೆಗಳಿಗೂ ಅದಕ್ಕೆ ಬೇಕಾದ ಅರ್ಹತೆ ಪಡೆದಿರಬೇಕು.
ನಿರ್ದೇಶಕ/ ಉಪ ಕಾರ್ಯದರ್ಶಿ ಹುದ್ದೆಗೆ ಯಾವ ಅರ್ಹತೆ ಇರಬೇಕು..?
ಎಂ.ಎಸ್ಸಿಯಲ್ಲಿ ಮಣ್ಣಿ ಸಂರಕ್ಷಣೆ ಮತ್ತು ವಾಟರ್ ಮ್ಯಾನೇಜ್ಮೆಂಟ್ ಅಥವಾ ಎನ್ವಿರ್ಮೆಂಟಲ್ ಸೈನ್ಸ್ ಅಥವಾ ಪದವಿಯಲ್ಲಿ ಅಗ್ರಿಕಲ್ಚರಲ್ ಇಂಜಿನಿಯರಿಂಗ್ ಅನ್ನು ಪಡೆದಿರಬೇಕು. ಸರ್ಕಾರಕ್ಕೆ ಸಂಬಂಧಿಸಿದ ಸಾರ್ವಜನಿಕ ಸಂಸ್ಥೆಗಳಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿರೋ ಅನುಭವ ಇರಬೇಕು. ಉಪ ಕಾರ್ಯದರ್ಶಿ ಹುದ್ದೆಗೆ 7 ವರ್ಷ ಅನುಭವ ಇದ್ದರೆ ಸಾಕು. 35 ಹುದ್ದೆಗಳಿಗೂ ಅದಕ್ಕೆ ಬೇಕಾದ ಅರ್ಹತೆ ಪಡೆದಿರಬೇಕು.
ಇದನ್ನೂ ಓದಿ: SSLC, ಪಿಯುಸಿ ಪಾಸ್ ಆದವರಿಗೆ ಗುಡ್ನ್ಯೂಸ್.. ಸರ್ಕಾರಿ ಹುದ್ದೆಗೆ ಅರ್ಜಿ ಆಹ್ವಾನ, ಸ್ಯಾಲರಿ ಎಷ್ಟು?
ಈಗಾಗಲೇ ಈ ಸಂಬಂಧದ 63 ಹುದ್ದೆಗಳ ನೇಮಕಾತಿಗಳನ್ನು ಮಾಡಲಾಗಿದ್ದು 35 ಖಾಸಗಿ ಕ್ಷೇತ್ರದಿಂದ 57 ಅಧಿಕಾರಿಗಳು ವಿವಿಧ ಸಚಿವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ