newsfirstkannada.com

×

ಕೇಂದ್ರ ಸರ್ಕಾರದಿಂದ ಮಹತ್ವದ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅಬ್ಬಬ್ಬಾ! ಸಂಬಳ ಮಾತ್ರ ₹1.52 ಲಕ್ಷದಿಂದ ₹2.7 ಲಕ್ಷ

Share :

Published August 18, 2024 at 3:27pm

Update August 18, 2024 at 3:34pm

    ಯಾವ್ಯಾವ ಸಚಿವಾಲಯಗಳಲ್ಲಿ ಹುದ್ದೆ ಖಾಲಿ ಇವೆ ಗೊತ್ತಾ..?

    ಕೇಂದ್ರ ಸರ್ಕಾದಿಂದ ಹುದ್ದೆಗಳಿಗೆ ಅರ್ಜಿ ಆಹ್ವಾನ, ಅಪ್ಲೇ ಮಾಡಿ

    ಸರ್ಕಾರದ ಈ ಉದ್ಯೋಗ ಪಡೆಯಲು ಮಾನದಂಡಗಳೇನು?

ನವದೆಹಲಿ: ಕೇಂದ್ರ ಸರ್ಕಾರದ ಸಚಿವಾಲಯಗಳಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಅರ್ಜಿಗಳನ್ನು ಆಹ್ವಾನ ಮಾಡಿದೆ. ಈ ಹುದ್ದೆಗಳಿಗೆ ಸ್ಯಾಲರಿ ಪ್ರತಿ ತಿಂಗಳು 1.52 ಲಕ್ಷ ರೂ.ಗಳಿಂದ 2.7 ಲಕ್ಷ ರೂಪಾಯಿಗಳವರೆಗೆ ಇರುತ್ತದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ರೈಲ್ವೆ ಇಲಾಖೆಯಿಂದ ಸಾವಿರಕ್ಕೂ ಅಧಿಕ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಅಪ್ಲೇ ಮಾಡಲು ಕೊನೆ ದಿನಾಂಕ..?

ಕೇಂದ್ರ ಸರ್ಕಾರದ ಗೃಹ, ಹಣಕಾಸು, ಸ್ಟೀಲ್​ ಸಚಿವಾಲಯಗಳಲ್ಲಿ ಖಾಲಿ ಇರುವ 10 ಜಂಟಿ ಕಾರ್ಯದರ್ಶಿ ಹುದ್ದೆಗಳು, ಕೃಷಿ ಮತ್ತು ರೈತರ ಕಲ್ಯಾಣ, ನಾಗರಿಕ ವಿಮಾನಯಾನ, ಮಾಹಿತಿ ಮತ್ತು ಪ್ರಸಾರದಂತಹ ಇತರೆ ಸಚಿವಾಲಯಗಳಲ್ಲಿ ಖಾಲಿ ಇರುವ 35 ನಿರ್ದೇಶಕ/ಉಪ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಆಸಕ್ತರು ಈ ಹುದ್ದೆಗಳಿಗೆ ಸೆಪ್ಟೆಂಬರ್ 17ರ ಒಳಗಾಗಿ ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಅರ್ಜಿಗಳನ್ನು ಹಾಕಬಹುದು.

ಇದನ್ನೂ ಓದಿ: ಖಾಲಿ ಇರೋ ಜಾಬ್​ಗಳಿಗೆ ಆಯಿಲ್ ಇಂಡಿಯಾ ಲಿಮಿಟೆಡ್​ ಅರ್ಜಿ ಆಹ್ವಾನ.. ನೀವು ಟ್ರೈ ಮಾಡಿ..!

ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ತಜ್ಞರನ್ನು ಸರ್ಕಾರದ ಪ್ರಮುಖ ಸಚಿವಾಲಯಗಳಲ್ಲಿ ನೇಮಕ ಮಾಡಿಕೊಂಡು ಕೆಲಸ ಪ್ರಾಮುಖ್ಯತೆ ಹೆಚ್ಚಿಸುವುದು ಇದರ ಉದ್ದೇಶವಾಗಿದೆ. 2018ರಿಂದ ಕೇಂದ್ರ ಸರ್ಕಾರ ಈ ಪ್ರಕ್ರಿಯೆ ಪ್ರಾರಂಭ ಮಾಡಿದೆ. ಸದ್ಯದ ಹುದ್ದೆಗಳನ್ನು ಗುತ್ತಿಗೆ ಆಧಾರದ (ಕಾಂಟ್ರಾಕ್ಟ್ ಬೇಸ್) ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.

ಸ್ಯಾಲರಿ ಎಷ್ಟು ಇರುತ್ತದೆ..?

  • ಜಂಟಿ ಕಾರ್ಯದರ್ಶಿಗೆ ಪ್ರತಿ ತಿಂಗಳಿಗೆ 2.7 ಲಕ್ಷ ರೂ.ಗಳು
  • ನಿರ್ದೇಶಕ ಹುದ್ದೆಗೆ ಪ್ರತಿ ತಿಂಗಳಿಗೆ 2.3 ಲಕ್ಷ ರೂ.ಗಳು
  • ಉಪ ಕಾರ್ಯದರ್ಶಿ ಹುದ್ದೆಗೆ ಪ್ರತಿ ತಿಂಗಳಿಗೆ 1.52 ಲಕ್ಷ ರೂ.ಗಳು

ಜಂಟಿ ಕಾರ್ಯದರ್ಶಿ ಹುದ್ದೆಗೆ ಯಾವ ಅರ್ಹತೆ ಇರಬೇಕು..?

ತಂತ್ರಜ್ಞಾನ, ಮ್ಯಾನೇಜ್​ಮೆಂಟ್, ಪಬ್ಲಿಕ್ ಪಾಲಿಸಿ, ಡೆವಲಪ್​​ಮೆಂಟ್ ಸ್ಟಡೀಸ್, ಅರ್ಥಶಾಸ್ತ್ರ, ಲಿಬರಲ್ ಆರ್ಟ್ಸ್​ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರಬೇಕು. 15 ವರ್ಷ ಕೆಲಸ ಮಾಡಿರುವ ಅನುಭವ ಇರಬೇಕು. ಜೊತೆಗೆ 10 ವರ್ಷ ನಾಯಕತ್ವದ ಸ್ಥಾನ ವಹಿಸಿರಬೇಕು. ಇನ್ನು ವಿಶೇಷ ಚೇತನರಿಗೂ ಇದರಲ್ಲಿ ಅವಕಾಶ ನೀಡಲಾಗಿದೆ. 15 ಹುದ್ದೆಗಳಿಗೂ ಅದಕ್ಕೆ ಬೇಕಾದ ಅರ್ಹತೆ ಪಡೆದಿರಬೇಕು.

ನಿರ್ದೇಶಕ/ ಉಪ ಕಾರ್ಯದರ್ಶಿ ಹುದ್ದೆಗೆ ಯಾವ ಅರ್ಹತೆ ಇರಬೇಕು..?

ಎಂ.ಎಸ್ಸಿಯಲ್ಲಿ ಮಣ್ಣಿ ಸಂರಕ್ಷಣೆ ಮತ್ತು ವಾಟರ್ ಮ್ಯಾನೇಜ್​ಮೆಂಟ್ ಅಥವಾ ಎನ್ವಿರ್​​ಮೆಂಟಲ್ ಸೈನ್ಸ್ ಅಥವಾ ಪದವಿಯಲ್ಲಿ ಅಗ್ರಿಕಲ್ಚರಲ್ ಇಂಜಿನಿಯರಿಂಗ್ ಅನ್ನು ಪಡೆದಿರಬೇಕು. ಸರ್ಕಾರಕ್ಕೆ ಸಂಬಂಧಿಸಿದ ಸಾರ್ವಜನಿಕ ಸಂಸ್ಥೆಗಳಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿರೋ ಅನುಭವ ಇರಬೇಕು. ಉಪ ಕಾರ್ಯದರ್ಶಿ ಹುದ್ದೆಗೆ 7 ವರ್ಷ ಅನುಭವ ಇದ್ದರೆ ಸಾಕು. 35 ಹುದ್ದೆಗಳಿಗೂ ಅದಕ್ಕೆ ಬೇಕಾದ ಅರ್ಹತೆ ಪಡೆದಿರಬೇಕು.

ಇದನ್ನೂ ಓದಿ: SSLC, ಪಿಯುಸಿ ಪಾಸ್​ ಆದವರಿಗೆ ಗುಡ್​​ನ್ಯೂಸ್​.. ಸರ್ಕಾರಿ ಹುದ್ದೆಗೆ ಅರ್ಜಿ ಆಹ್ವಾನ, ಸ್ಯಾಲರಿ ಎಷ್ಟು?

ಈಗಾಗಲೇ ಈ ಸಂಬಂಧದ 63 ಹುದ್ದೆಗಳ ನೇಮಕಾತಿಗಳನ್ನು ಮಾಡಲಾಗಿದ್ದು 35 ಖಾಸಗಿ ಕ್ಷೇತ್ರದಿಂದ 57 ಅಧಿಕಾರಿಗಳು ವಿವಿಧ ಸಚಿವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇಂದ್ರ ಸರ್ಕಾರದಿಂದ ಮಹತ್ವದ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅಬ್ಬಬ್ಬಾ! ಸಂಬಳ ಮಾತ್ರ ₹1.52 ಲಕ್ಷದಿಂದ ₹2.7 ಲಕ್ಷ

https://newsfirstlive.com/wp-content/uploads/2024/08/JOB_NEWS_1.jpg

Load More