UPSC ಪಾಸ್ ಮಾಡಿದ ಚಂಬಲ್ ಡಾಕು ಮೊಮ್ಮಗ.. ಇವರ ಸಾಧನೆ ಸ್ಟೋರಿ ಕೇಳಿದ್ರೆ ನೀವು ಶಾಕ್ ಆಗ್ತೀರಾ!

author-image
Bheemappa
Updated On
UPSC ಪಾಸ್ ಮಾಡಿದ ಚಂಬಲ್ ಡಾಕು ಮೊಮ್ಮಗ.. ಇವರ ಸಾಧನೆ ಸ್ಟೋರಿ ಕೇಳಿದ್ರೆ ನೀವು ಶಾಕ್ ಆಗ್ತೀರಾ!
Advertisment
  • ಅಜ್ಜ ಮಾಡುತ್ತಿದ್ದ ದರೋಡೆಗಳಿಂದ ಈಗಲೂ ನೋವಿನಲ್ಲಿದ್ದ ಕುಟುಂಬ
  • ತಂದೆ ದರೋಡೆಗಳನ್ನು ಮಾಡುತ್ತಿದ್ದರೂ ಮಗ ಓದುವುದನ್ನು ಬಿಡಲಿಲ್ಲ
  • ಪ್ರತಿಷ್ಠತಿ ಕಂಪನಿಯಲ್ಲಿ ವರ್ಷಕ್ಕೆ ₹88 ಲಕ್ಷ ಸಂಬಳ ಪಡೆಯುತ್ತಿದ್ದ ದೇವ್

ಮೊನ್ನೆ ಮೊನ್ನೆ 2024ರ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್​​ಸಿ)ದ ಫಲಿತಾಂಶ ಬಿಡುಗಡೆ ಆಗಿದೆ. ಇಡೀ ದೇಶಕ್ಕೆ ಯುವತಿ ಶಕ್ತಿ ದುಬೆ ಅವರು ಮೊದಲ ಶ್ರೇಣಿ ಪಡೆದಿದ್ದಾರೆ. ಆರ್.ರಂಗ ಮಂಜು ಅವರು 24ನೇ ಶ್ರೇಣಿ ಪಡೆದು ಕರ್ನಾಟಕಕ್ಕೆ ಟಾಪರ್ ಆಗಿದ್ದಾರೆ. ಇದರ ಜೊತೆಗೆ ಒಂದು ಕಾಲದಲ್ಲಿ ದರೋಡೆ, ವಂಚನೆ ಮಾಡ್ತಿದ್ದವನ ಮೊಮ್ಮಗ ಇಂದು ಯುಪಿಎಸ್​​ಸಿ ಪರೀಕ್ಷೆಯಲ್ಲಿ ಕೊನೆ ಪ್ರಯತ್ನದಲ್ಲಿ ಉತ್ತೀರ್ಣರಾಗಿ ಯಶಸ್ಸು​ ಕಂಡಿದ್ದಾರೆ.

publive-image

ಮಧ್ಯಪ್ರದೇಶದ ಗ್ವಾಲಿಯರ್​ನ ದೇವ್ ತೋಮರ್ ಸದ್ಯ ಯುಪಿಎಸ್​​ಸಿ ಪರೀಕ್ಷೆಯಲ್ಲಿ 629ನೇ ರ್ಯಾಂಕ್ ಪಡೆದು ದೇಶದ ಉನ್ನತ ಹುದ್ದೆ ಪಡೆಯಲಿದ್ದಾರೆ. ದೇವ್ ತೋಮರ್ ಅವರ ಅಜ್ಜ ಮಾಡಿದಂತ ದರೋಡೆಗಳಿಂದ ಅವರ ಕುಟುಂಬ ಇಂದಿಗೂ ನೋವನ್ನು ಅನುಭವಿಸುತ್ತಿದೆ. ಆ ಕುಟುಂಬದಿಂದ ಏನನ್ನು ಮಾಡಲು ಆಗಲ್ಲ ಎಂದು ಜನರು ಚುಚ್ಚಿ ಮಾತಾಡುತ್ತಿದ್ದರು. ಸದ್ಯ ಇಂತಹ ಮಾತುಗಳನ್ನು ಮೊಮ್ಮಗ ದೇವ್ ತೋಮರ್ ಮೆಟ್ಟಿ ನಿಂತಿದ್ದಾರೆ.

ದೇವ್ ತೋಮರ್ ಅವರ ಅಜ್ಜ ರಾಮ್​ಗೋವಿಂದ ಸಿಂಗ್ ತೋಮರ್​ ಒಂದು ಕಾಲದಲ್ಲಿ ಮಧ್ಯಪ್ರದೇಶದ ಚಂಬಲ್ ಏರಿಯಾದಲ್ಲಿ ಕುಖ್ಯಾತ ಡಕಾಯಿತ ಆಗಿದ್ದನು. ಹಣ, ಚಿನ್ನ ಹಾಗೂ ಮೌಲ್ಯಯುತ ವಸ್ತುಗಳಿಗಾಗಿ ಜನರನ್ನು ಹಿಂಸಿಸುತ್ತಿದ್ದನು. ತಂದೆ ವಂಚನೆ, ಮೋಸದಂತ ಕೆಲಸ ಮಾಡಿದರೂ ಮಗ ಬಲ್ವೀರ್​​ ಸಿಂಗ್ ತೋಮರ್ ಶಿಕ್ಷಣ ಮುಂದುವರೆಸಿ ಸಂಸ್ಕೃತದಲ್ಲಿ ಪಿಹೆಚ್​ಡಿ ಪಡೆದು ಕಾಲೇಜುವೊಂದಕ್ಕೆ ಪ್ರಾಂಶುಪಾಲರಾಗಿದ್ದರು. ಇವರ ಮಗ ಹಾಗೂ ಡಕಾಯಿತ ರಾಮ್​ಗೋವಿಂದನ ಮೊಮ್ಮಗ, ದೇವ್ ತೋಮರ್ ಇಂದು ಯುಪಿಎಸ್​​ಸಿ ಯಶಸ್ವಿಯಾಗಿದ್ದಾರೆ.

ನೆದರ್​ಲ್ಯಾಂಡ್​ನಲ್ಲಿ ಮುಖ್ಯ ಕಚೇರಿ ಇರುವ ಫಿಲಿಪ್ಸ್​ ಕಂಪನಿಯಲ್ಲಿ ದೇವ್ ತೋಮರ್ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದರು. ವರ್ಷಕ್ಕೆ 88 ಲಕ್ಷ ರೂಪಾಯಿಗಳ ಸಂಭಾವನೆ ಪಡೆಯುತ್ತಿದ್ದರು. ಈ ಕೆಲಸದ ಜೊತೆಯೇ 2019 ರಿಂದ ದೇವ್ ತೋಮರ್ ಯುಪಿಎಸ್​​ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಆದರೆ ಸತತ ಪ್ರಯತ್ನಗಳಿಂದಾಗಿ ಇಂದು ಕೊನೆಯ ಹಂತದ ಪ್ರಯತ್ನದಲ್ಲಿ ಫಲ ಕಂಡುಕೊಂಡಿದ್ದಾರೆ. ಜೊತೆಗೆ ಅವರ ಕುಟುಂಬದ ಮೇಲಿದ್ದ ಕಪ್ಪು ಚುಕ್ಕೆಗೆ ಬಿಗ್ ಬ್ರೇಕ್ ಹಾಕಿ ಶಿಕ್ಷಣದಿಂದ ಸಕ್ಸಸ್​ ಆಗಿದ್ದಾರೆ.

ಇದನ್ನೂ ಓದಿ: ಹಣೆಯ ಬೊಟ್ಟು, ಕೈ ಬಳೆ ನೋಡಿ ಗುಂಡಿಟ್ರು.. ಶಿವಮೊಗ್ಗದಲ್ಲಿ ಕರಾಳತೆ ಬಿಚ್ಚಿಟ್ಟ ಮಂಜುನಾಥ್ ಮಗ ಅಭಿ ಜೈ!

publive-image

ಒಂದು ಕಾಲದಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನ ಮಾಡುತ್ತಿದ್ದ ಕುಟುಂಬದಿಂದ ಬಂದವರು ಇಂದು ಉನ್ನತ ಉದ್ಯೋಗ ಪಡೆಯುವ ಸಾಲಿನಲ್ಲಿ ನಿಂತಿದ್ದಾರೆ. ಯುಪಿಎಸ್​ಸಿಯಲ್ಲಿ 629ನೇ ರ್ಯಾಂಕ್ ಪಡೆದು ಯಶಸ್ಸಿನ ಹಾದಿ ಕಂಡುಕೊಂಡಿದ್ದಾರೆ. ಈ ಬಗ್ಗೆ ಮತನಾಡಿರುವ ದೇವ್ ಅವರು ತನ್ನ ಸಕ್ಸಸ್​​ ಎಲ್ಲವನ್ನು ತಂದೆ, ತಂದೆಯಿಂದ ಪಡೆದಿದ್ದು ಎಂದು ಹೇಳಿ ಎಲ್ಲರ ಮೆಚ್ಚುಗೆಗೆ ಕಾರಣರಾಗಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment