SSLC, PUC ಆದವರಿಗೆ ಯುಸಿಐಎಲ್​​ನಲ್ಲಿ ಉದ್ಯೋಗ ಅವಕಾಶ.. ಈ ತಿಂಗಳ ಒಳಗೆ ಅರ್ಜಿ ಸಲ್ಲಿಸಿ

author-image
Bheemappa
Updated On
SSLC, PUC ಆದವರಿಗೆ ಯುಸಿಐಎಲ್​​ನಲ್ಲಿ ಉದ್ಯೋಗ ಅವಕಾಶ.. ಈ ತಿಂಗಳ ಒಳಗೆ ಅರ್ಜಿ ಸಲ್ಲಿಸಿ
Advertisment
  • ಅಭ್ಯರ್ಥಿಗಳು ಈ ಕೆಲಸಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ..?
  • ಇನ್ನೆರಡು ದಿನ ಮಾತ್ರ ಬಾಕಿ ಇದೆ, ಇದರ ಒಳಗೆ ಅಪ್ಲೇ ಮಾಡಿ
  • ಯಾವ್ಯಾವ ಉದ್ಯೋಗಗಳನ್ನು ನೇಮಕಾತಿ ಮಾಡಲಾಗುತ್ತಿದೆ?

ಯುರೇನಿಯಂ ಕಾರ್ಪೋರೇಷನ್‌ ಆಫ್ ಇಂಡಿಯಾ ಲಿಮಿಟೆಡ್​ (ಯುಸಿಐಎಲ್) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ಈ ಎಲ್ಲ ಉದ್ಯೋಗಗಳು ಕೇಂದ್ರ ಸರ್ಕಾರದಡಿ ಬರುವುದರಿಂದ ತಿಂಗಳ ಸ್ಯಾಲರಿ ಸೇರಿ ಇತರೆ ಸವಲತ್ತುಗಳು ಉತ್ತಮ ಮಟ್ಟದಲ್ಲಿ ಬಂದು ಉದ್ಯೋಗಿಗಳನ್ನ ತಲುಪುತ್ತವೆ. ಸಂಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡುತ್ತಿರುವ ಕಾರಣ ಆಸಕ್ತಿ ಇರುವವರಿಂದ ಅರ್ಜಿ ಆಹ್ವಾನಿಸಿದೆ.

ಇಲಾಖೆಯು ಈಗಾಗಲೇ ಅಧಿಸೂಚನೆ ರಿಲೀಸ್ ಮಾಡಲಾಗಿದ್ದು ಅರ್ಜಿಗಳನ್ನು ಸ್ವೀಕಾರ ಮಾಡಲಾಗುತ್ತಿದೆ. ಆದರೆ ಅಭ್ಯರ್ಥಿಗಳು ಈ ಉದ್ಯೋಗಗಳಿಗೆ ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು. ಇದಕ್ಕೆ ಬೇಕಾದ ಎಲ್ಲ ಮಾಹಿತಿ ಇಲ್ಲಿದೆ. ಇನ್ನೆರಡು ದಿನ ಮಾತ್ರ ಉಳಿದಿದ್ದು ಹೀಗಾಗಿ ಕೊನೆಯ ದಿನಾಂಕದ ಒಳಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.

ಹುದ್ದೆಗಳ ಹೆಸರು ಹಾಗೂ ಎಷ್ಟು ಹುದ್ದೆಗಳು?
ವೈಂಡಿಂಗ್ ಇಂಜಿನ್ ಚಾಲಕ, ಮೈನಿಂಗ್ ಮೇಟ್ ಸಿ, ಬ್ಲಾಸ್ಟರ್ ಬಿ

ವೈಂಡಿಂಗ್ ಇಂಜಿನ್ ಚಾಲಕ- 10
ಮೈನಿಂಗ್ ಮೇಟ್ ಸಿ- 64
ಬ್ಲಾಸ್ಟರ್ ಬಿ- 08

ಒಟ್ಟು ಹುದ್ದೆಗಳು- 82 ಇವೆ.

ಇದನ್ನೂ ಓದಿ: ಮೆಟ್ರೋ ರೈಲ್ವೆ ಇಲಾಖೆಯಲ್ಲಿ ನುರಿತ ಅಭ್ಯರ್ಥಿಗೆ ಉದ್ಯೋಗ.. ಪದವಿ ಆಗಿರಬೇಕು, ಸ್ಯಾಲರಿ ಲಕ್ಷ ಲಕ್ಷ!

publive-image

ಶೈಕ್ಷಣಿಕ ಅರ್ಹತೆ
ಎಸ್​ಎಸ್​ಎಲ್​ಸಿ, ದ್ವಿತೀಯ ಪಿಯುಸಿ ಪೂರ್ಣಗೊಳಿಸಿರಬೇಕು

ವಯಸ್ಸಿನ ಮಿತಿ
18 ರಿಂದ 35 ವರ್ಷಗಳು

ಅರ್ಜಿ ಶುಲ್ಕ- 500 ರೂಪಾಯಿ
ಎಸ್‌ಬಿಐ ಬ್ರ್ಯಾಂಚ್‌ಗಳಲ್ಲಿ ಡಿಡಿ ಮಾಡಿ

ಅಭ್ಯರ್ಥಿಗಳು ವೆಬ್‌ಸೈಟ್‌ www.uraniumcorp.in ಗೆ ಭೇಟಿ ನೀಡಿ ಅರ್ಜಿ ಪ್ರತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಬಳಿಕ ಅರ್ಜಿ ಪ್ರತಿಯನ್ನು ಭರ್ತಿ ಮಾಡಿ ಅರ್ಜಿ, ಡಿಡಿ ರಶೀದಿ ಸೇರಿ ಎಲ್ಲ ದಾಖಲೆಗಳನ್ನು (ಜೆರಾಕ್ಸ್​) ಲಗತ್ತಿಸಿ ಈ ವಿಳಾಸಕ್ಕೆ ಅಂಚೆ ಅಥವಾ ಕೊರಿಯರ್ ಅಥವಾ ನೇರವಾಗಿ ಸಲ್ಲಿಸಬಹುದು.

ವಿಳಾಸ- ಡೆಪ್ಯೂಟಿ ಜನರಲ್ ಮ್ಯಾನೇಜರ್, ಯುರೇನಿಯಂ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್, ಪಿಒ ಜಾದುಗಢ್​ ಮೈನ್ಸ್‌, ಸಿಂಗ್ಭೂಮ್ ಈಸ್ಟ್‌, ಜಾರ್ಖಂಡ್ -832102.

ಕೊನೆ ದಿನಾಂಕ ಯಾವಾಗ?
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- 30 ನವೆಂಬರ್ 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment