ಯುರೇನಿಯಂ ಕಾರ್ಪೋರೇಷನ್‌ ಆಫ್ ಇಂಡಿಯಾದಲ್ಲಿ ಉದ್ಯೋಗ ನೇಮಕಾತಿ.. ಅಂತಿಮ ದಿನಾಂಕ?

author-image
Bheemappa
Updated On
ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್​ನಿಂದ ಅರ್ಜಿ ಆಹ್ವಾನ.. 10ನೇ ಕ್ಲಾಸ್ ಆಗಿದ್ರೆ ಸಾಕು
Advertisment
  • ಕೆಲಸ ಹುಡುಕುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶ
  • ಆಫ್​ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
  • ಈ ಉದ್ಯೋಗಗಳಿಗೆ ಬೇಕಾದ ಎಲ್ಲ ಮಾಹಿತಿ ಇಲ್ಲಿ ಇದೆ

ಯುರೇನಿಯಂ ಕಾರ್ಪೋರೇಷನ್‌ ಆಫ್ ಇಂಡಿಯಾ ಲಿಮಿಟೆಡ್​ನಲ್ಲಿ (ಯುಸಿಐಎಲ್) ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡುತ್ತಿದ್ದು ಅರ್ಹ ಹಾಗೂ ಆಸಕ್ತಿ ಇರುವವರು ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು. ಇವೆಲ್ಲ ಕೇಂದ್ರ ಸರ್ಕಾರಿ ಉದ್ಯೋಗಗಳು ಆಗಿದ್ದು ಉತ್ತಮವಾದ ಸಂಬಳ ಕೂಡ ಇರುತ್ತದೆ.

ಅಭ್ಯರ್ಥಿಗಳು ಈ ಉದ್ಯೋಗಗಳಿಗೆ ಆಫ್​ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬೇಕು. ಇದಕ್ಕೆ ಬೇಕಾದ ಎಲ್ಲ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಈಗಾಗಲೇ ಅಧಿಸೂಚನೆ ರಿಲೀಸ್ ಮಾಡಲಾಗಿದ್ದು ಅರ್ಜಿಗಳನ್ನು ಸ್ವೀಕಾರ ಮಾಡಲಾಗುತ್ತಿದೆ. ಕೊನೆಯ ದಿನಾಂಕ, ಶುಲ್ಕ, ವಿದ್ಯಾರ್ಹತೆ, ಆಯ್ಕೆ ಪ್ರಕ್ರಿಯೆ ಈ ಕೆಳಗಿನಂತಿದೆ.

ಶೈಕ್ಷಣಿಕ ಅರ್ಹತೆ

ಎಸ್​ಎಸ್​ಎಲ್​ಸಿ, ದ್ವಿತೀಯ ಪಿಯುಸಿ ಪೂರ್ಣಗೊಳಿಸಿರಬೇಕು

ಇದನ್ನೂ ಓದಿ: BOB; ಖಾಲಿ ಉದ್ಯೋಗಗಳ ಭರ್ತಿಗೆ ಅರ್ಹರಿಂದ ಅರ್ಜಿ ಅಹ್ವಾನ.. ಇಂದೇ ಅಪ್ಲೇ ಮಾಡಿ!

publive-image

ಹುದ್ದೆಗಳ ಹೆಸರು ಹಾಗೂ ಎಷ್ಟು ಹುದ್ದೆಗಳು?

ವೈಂಡಿಂಗ್ ಇಂಜಿನ್ ಚಾಲಕ, ಮೈನಿಂಗ್ ಮೇಟ್ ಸಿ, ಬ್ಲಾಸ್ಟರ್ ಬಿ

  • ವೈಂಡಿಂಗ್ ಇಂಜಿನ್ ಚಾಲಕ- 10
  • ಮೈನಿಂಗ್ ಮೇಟ್ ಸಿ- 64
  • ಬ್ಲಾಸ್ಟರ್ ಬಿ- 08

ಒಟ್ಟು ಹುದ್ದೆಗಳು- 82 ಇವೆ.

ವಯಸ್ಸಿನ ಮಿತಿ
18 ರಿಂದ 35 ವರ್ಷಗಳು

ಅರ್ಜಿ ಶುಲ್ಕ- 500 ರೂಪಾಯಿ
ಎಸ್‌ಬಿಐ ಬ್ರ್ಯಾಂಚ್‌ಗಳಲ್ಲಿ ಡಿಡಿ ಮಾಡಿ

ಈ ದಿನಾಂಕ ನೆನಪಿಡಿ
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- 30 ನವೆಂಬರ್ 2024

ಅಭ್ಯರ್ಥಿಗಳು ವೆಬ್‌ಸೈಟ್‌ http://www.uraniumcorp.in ಗೆ ಭೇಟಿ ನೀಡಿ ಅರ್ಜಿ ಪ್ರತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಬಳಿಕ ಅರ್ಜಿ ಪ್ರತಿಯನ್ನು ಭರ್ತಿ ಮಾಡಿ ಅರ್ಜಿ, ಡಿಡಿ ರಶೀದಿ ಸೇರಿ ಎಲ್ಲ ದಾಖಲೆಗಳನ್ನು (ಜೆರಾಕ್ಸ್​) ಲಗತ್ತಿಸಿ ಈ ವಿಳಾಸಕ್ಕೆ ಅಂಚೆ ಅಥವಾ ಕೊರಿಯರ್ ಅಥವಾ ನೇರವಾಗಿ ಸಲ್ಲಿಸಬಹುದು.

ವಿಳಾಸ- ಡೆಪ್ಯೂಟಿ ಜನರಲ್ ಮ್ಯಾನೇಜರ್, ಯುರೇನಿಯಂ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್, ಪಿಒ ಜಾದುಗಢ್​ ಮೈನ್ಸ್‌, ಸಿಂಗ್ಭೂಮ್ ಈಸ್ಟ್‌, ಜಾರ್ಖಂಡ್ -832102.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment