ಉರ್ಫಿ ಜಾವೇದ್ ಬ್ಯೂಟಿ ಹೇಗಿತ್ತು.. ತನ್ನ ಸೌಂದರ್ಯ, ತಾನೇ ಕೆಡಿಸಿಕೊಂಡಳಾ..?

author-image
Bheemappa
Updated On
ಉರ್ಫಿ ಜಾವೇದ್ ಬ್ಯೂಟಿ ಹೇಗಿತ್ತು.. ತನ್ನ ಸೌಂದರ್ಯ, ತಾನೇ ಕೆಡಿಸಿಕೊಂಡಳಾ..?
Advertisment
  • ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್​ ಹೊಂದಿರುವ ಉರ್ಫಿ
  • ತನ್ನ ಬ್ಯೂಟಿಯಿಂದಲೇ ಯುವಕರ ಕಣ್ ಸೆಳೆಯುವ ಬ್ಯೂಟಿ
  • ವಿಡಿಯೋವನ್ನ ನೋಡಿದ ನೆಟ್ಟಿಗರು ಉರ್ಫಿ ಬಗ್ಗೆ ಕಾಮೆಂಟ್ಸ್

ಉರ್ಫಿ ಜಾವೇದ್ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುವ ಸುಂದರಿ. ವಿಧ ವಿಧವಾದ ಉಡುಪುಗಳನ್ನು ಧರಿಸಿ, ತನ್ನ ಮೈಮಾಟದಿಂದಲೇ ಯುವಕರ ಕಣ್ ಸೆಳೆಯುವ ಬ್ಯೂಟಿ. ಸಾಮಾಜಿಕ ಜಾಲತಾಣದಲ್ಲಿ ಉರ್ಫಿ ತನ್ನದೇ ಆದ ಕ್ರೇಜ್ ಸೆಟ್ ಮಾಡಿರುವ ಚೆಲುವೆ. ಇದೀಗ ಈ ಬ್ಯೂಟಿ, ಇನ್ನಷ್ಟು ಬ್ಯೂಟಿಫುಲ್ ಕಾಣಲು ತುಟಿಗಳಿಗೆ ಇಂಜೆಕ್ಷನ್​ ಮಾಡಿಕೊಂಡಿದ್ದಾಳೆ.

publive-image

ತನ್ನ ಇನ್​ಸ್ಟಾದಲ್ಲಿ ಈ ಸಂಬಂಧ ವಿಡಿಯೋವೊಂದನ್ನ ಉರ್ಫಿ ಜಾವೇದ್ ಶೇರ್ ಮಾಡಿಕೊಂಡಿದ್ದು ತನ್ನ ತುಟಿಗಳಿಗೆ ಇಂಜೆಕ್ಷನ್​ ತೆಗೆದುಕೊಳ್ಳುತ್ತಿದ್ದಾರೆ. ತುಟಿಗಳು ದಪ್ಪವಾಗಿರುವ ಕಾರಣ ಅವುಗಳನ್ನು ತೆಳ್ಳಗೆ ಮಾಡಲು ಈ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ. ಇದು ಮೂರು ವಾರಗಳವರೆಗೆ ಇಡಿಯಬಹುದು. ನಾನು ಯಾವ ರೀತಿ ಕಾಣುತ್ತಿದ್ದೇನೆ ಎಂದು ವಿಡಿಯೋವೊಂದನ್ನು ಉರ್ಫಿ ಶೇರ್ ಮಾಡಿದ್ದಾರೆ.

ವಿಡಿಯೋದಲ್ಲಿ ಉರ್ಫಿ ಜಾವೇದ್ ಇಂಜೆಕ್ಷನ್ ಮಾಡಿಸಿಕೊಳ್ಳುತ್ತಿದ್ದಾರೆ. ಇಂಜೆಕ್ಷನ್​ ಬಳಿಕ ಉರ್ಫಿಯ ತುಟಿಗಳು ಫುಲ್ ದಪ್ಪವಾಗಿ ಊದಿಕೊಂಡಿವೆ. ಜೊತೆಗೆ ಮುಖ ಕೂಡ ದೊಡ್ಡದಾಗಿ ಊದಿಕೊಂಡಿದೆ. ಯಾವಾಗಲೂ ತನ್ನ ಅಂದದಿಂದಲೇ ಕಣ್ಮನ ಸೆಳೆಯುತ್ತಿದ್ದ ಮುಂಬೈ ನಗರದ ಬೆಡಗಿ ಈಗ ಚಿಕಿತ್ಸೆಗೆ ಒಳಗಾಗಿರುವ ವಿಡಿಯೋ ಹಂಚಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಇದನ್ನೂ ಓದಿ: ಭಾರೀ ದುರಂತ; 280 ಪ್ರಯಾಣಿಕರಿದ್ದ ಬಾರ್ಸಿಲೋನಾ ಶಿಪ್​ಗೆ ಬೆಂಕಿ.. 3 ನಿಧನ, 130 ಪ್ರಯಾಣಿಕರು ನಾಪತ್ತೆ

publive-image

ಇನ್ನು ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಉರ್ಫಿಗೆ ಬಗ್ಗೆ ಕಾಮೆಂಟ್ಸ್ ಮಾಡುತ್ತಿದ್ದಾರೆ. ಇಂತಹ ವಿಡಿಯೋಗಳನ್ನು ಹಂಚಿಕೊಳ್ಳಲು ಧೈರ್ಯಬೇಕು ಎಂದಿದ್ದಾರೆ. ಇನ್ನೊಬ್ಬರು ಯಾರು ಏನು ಬೇಕಾದರೂ ಮಾಡುವುದಕ್ಕೆ ಅವರವರ ಆಯ್ಕೆಗೆ ಬಿಟ್ಟಿದ್ದು ಎಂದು ಕಾಮೆಂಟ್​​ನಲ್ಲಿ ಹೇಳಿದ್ದಾರೆ. ಸದ್ಯ ಉರ್ಫಿ ಅಂತೂ ಬೇರೆ ರೀತಿಯೇ ಕಾಣಿಸಿರುವುದು ಪಕ್ಕಾ.!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment