ದಿಢೀರ್​ ಮತದಾರರ ಪಟ್ಟಿ ಪರಿಷ್ಕರಣೆ.. ಚುನಾವಣಾ ಆಯೋಗದ ಕ್ರಮಕ್ಕೆ ಕಾಂಗ್ರೆಸ್, TMC ವಿರೋಧವೇಕೆ?

author-image
Veena Gangani
Updated On
ಬಿಹಾರ: ಮತದಾರರ ಪಟ್ಟಿ ಪರಿಷ್ಕರಣೆಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್..!
Advertisment
  • ಬಾಂಗ್ಲಾದೇಶಿ ವೋಟರ್​ಗಳಿಗೆ ಬಿಸಿ ಮುಟ್ಟಿಸಲು ಸಜ್ಜಾದ ಆಯೋಗ
  • ವಿದೇಶಿಯರು ಅಕ್ರಮವಾಗಿ ಭಾರತದಲ್ಲಿ ಮತ ಚಲಾಯಿಸುತ್ತಿದ್ದಾರಾ?
  • ಮತದಾರರ ಪಟ್ಟಿ ಪರಿಷ್ಕರಣೆಯಿಂದ ಏನೇನು ಬದಲಾವಣೆಯಾಗುತ್ತೆ?

ನಮ್ಮ ದೇಶದ ನಾಗರಿಕರಲ್ಲದವರೇ, ಚುನಾವಣಾ ಐ.ಡಿ. ಕಾರ್ಡ್ ಪಡೆದು ಅಕ್ರಮವಾಗಿ ಮತ ಚಲಾಯಿಸುತ್ತಿದ್ದಾರೆ ಎಂಬ ಆರೋಪ ಬಲವಾಗಿದೆ. ಬಾಂಗ್ಲಾದೇಶಿಯರು ಸೇರಿದಂತೆ ವಿದೇಶಿಯರು ಭಾರತದಲ್ಲಿ ಎಲೆಕ್ಷನ್ ಐ.ಡಿ. ಕಾರ್ಡ್ ಹೊಂದಿದ್ದಾರೆ ಎಂಬ ಆರೋಪ ಇದೆ. ಈ ಸಮಸ್ಯೆ ನಿವಾರಣೆಗೆ ಕೇಂದ್ರ ಚುನಾವಣಾ ಆಯೋಗ ಈಗ ಹೊಸ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ಗುಡ್​​ನ್ಯೂಸ್​​; KRS ಡ್ಯಾಂ ಐತಿಹಾಸಿಕ ದಾಖಲೆಗೆ ಕೇವಲ ಒಂದೇ 1 ಅಡಿ ಮಾತ್ರ ಬಾಕಿ

publive-image

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣಾ ಆಂದೋಲನ ಹಮ್ಮಿಕೊಂಡಿದೆ. ಇದನ್ನು ಬಿಹಾರದಲ್ಲಿ ಮೊದಲನೇಯದಾಗಿ ಪೈಲಟ್ ಪ್ರಾಜೆಕ್ಟ್ ಆಗಿ ಜಾರಿಗೊಳಿಸುತ್ತಿದೆ. ಬಿಹಾರದಲ್ಲಿ ಈ ವರ್ಷದ ಅಂತ್ಯದಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಬಿಹಾರದಿಂದಲೇ ಮತದಾರರ ಪಟ್ಟಿ ಪರಿಷ್ಕರಣೆಗೆ ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣಾ ಆಂದೋಲನದಡಿ ಹಾಲಿ ಇರುವ ಮತದಾರರು ಹಾಗೂ ಹೊಸ ಮತದಾರರು ತಮ್ಮ ಜನ್ಮಸ್ಥಳ ಹಾಗೂ ಹುಟ್ಟಿನ ದಾಖಲೆಯನ್ನು ಸಲ್ಲಿಸಬೇಕು. 1987ರ ಜುಲೈಗಿಂತ ಮುಂಚೆ ಹುಟ್ಟಿದವರು ಹುಟ್ಟಿನ ದಾಖಲೆ ಅಂದ್ರೆ, ಜನನ ಪ್ರಮಾಣ ಪತ್ರ ಹಾಗೂ ಜನ್ಮ ಸ್ಥಳದ ದಾಖಲೆ, ಪೋಷಕರಲ್ಲಿ ಒಬ್ಬರ ಜನ್ಮ ಸ್ಥಳದ ದಾಖಲೆಯನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. 1987ರ ಜುಲೈನಿಂದ ಡಿಸೆಂಬರ್ 2004ರವರೆಗೆ ಹುಟ್ಟಿದವರು ಈ ದಾಖಲೆಗಳನ್ನು ಸಲ್ಲಿಸಬೇಕು. ಒಂದು ತಿಂಗಳೊಳಗೆ ಈ ದಾಖಲೆ ಸಲ್ಲಿಸದೇ ಇದ್ದರೇ, ಮತದಾರರ ಪಟ್ಟಿಯಿಂದ ಅಂಥವರ ಹೆಸರುಗಳನ್ನು ತೆಗೆದು ಹಾಕಲಾಗುತ್ತೆ. ಕೇಂದ್ರ ಚುನಾವಣಾ ಆಯೋಗದ ಈ ತೀರ್ಮಾನಕ್ಕೆ ಕಾಂಗ್ರೆಸ್, ಬಿಹಾರದ ಆರ್‌.ಜೆ.ಡಿ. ಹಾಗೂ ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

[caption id="attachment_129390" align="alignnone" width="800"]election commissioner Shri Gyanesh Kumar election commissioner Shri Gyanesh Kumar[/caption]

ಪಶ್ಚಿಮ ಬಂಗಾಳದ ಟಿಎಂಸಿ ವಕ್ತಾರ, ಸಂಸದ ಡೇರಿಕ್ ಒಬ್ರಿಯನ್ ಅವರು ಕೇಂದ್ರ ಚುನಾವಣಾ ಆಯೋಗದ ತೀರ್ಮಾನಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಟಿಎಂಸಿ ಪಕ್ಷ ಕೇಂದ್ರ ಚುನಾವಣಾ ಆಯೋಗವು ಸಂವಿಧಾನಿಕ ಸಂಸ್ಥೆಯಾಗಿರುವುದರಿಂದ ಇದರ ಬಗ್ಗೆ ಹೆಚ್ಚಿನ ಗೌರವ ಹೊಂದಿದೆ. ಆದ್ರೆ, ಸಂವಿಧಾನಿಕ ಸಂಸ್ಥೆ, ಬಿಜೆಪಿ ಪಕ್ಷದ ಶಾಖಾ ಕಚೇರಿಯಾಗಿ ಪರಿವರ್ತನೆಯಾಗಬಾರದು. ದಿಢೀರ್ ಈಗ ಏಕೆ ಈ ಮತದಾರರ ಪಟ್ಟಿ ಪರಿಷ್ಕರಣಾ ಆಂದೋಲನ ನಡೆಸಲಾಗುತ್ತಿದೆ? ಇದಕ್ಕೆ ನಮ್ಮ ಬಳಿ ಸಾಕ್ಷಿ ಇದೆ. ಬಿಜೆಪಿಯ ಅಂತರಿಕ ಸರ್ವೇ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷವು 46 ರಿಂದ 49 ಸ್ಥಳಗಳನ್ನು ಅಸೆಂಬ್ಲಿ ಚುನಾವಣೆಯಲ್ಲಿ ಪಡೆಯಲಿದೆ. ಹತಾಶರಾಗಿ, ಬದಲಾವಣೆ ಮಾಡಲು ನೀವು ಈ ಕೆಲಸ ಮಾಡುತ್ತಿದ್ದೀರಿ ಎಂದು ಟಿಎಂಸಿ ವಕ್ತಾರ ಡೇರಿಕ್ ಒಬ್ರಿಯನ್ ಹೇಳಿದ್ದಾರೆ.

ಇದನ್ನೂ ಓದಿ: 5 ಹುಲಿಗಳ ಅಂತ್ಯ ಕೇಸ್​​.. ವಿಷಪ್ರಾಶನ ಮಾಡಿದವರು ಯಾರು? ತಂದೆ, ಮಗನ ತೀವ್ರ ವಿಚಾರಣೆ

ಬಿಹಾರದ ಬಳಿಕ ಕೇಂದ್ರ ಚುನಾವಣಾ ಆಯೋಗವು ಅಸೆಂಬ್ಲಿ ಚುನಾವಣೆ ನಡೆಯುವ ಬೇರೆ ರಾಜ್ಯಗಳಲ್ಲೂ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣಾ ಆಂದೋಲನ ನಡೆಸಲಿದೆ. ಬಿಹಾರದ ಬಳಿಕ ಪಶ್ಚಿಮ ಬಂಗಾಳದಲ್ಲೂ ವಿಶೇಷ ಆಂದೋಲನ ನಡೆಸಲಿದೆ. ಮತದಾರರ ಪಟ್ಟಿಯಲ್ಲಿರುವ ವಿದೇಶಿಯರ ಹೆಸರುಗಳನ್ನು ತೆಗೆದು ಹಾಕಲು ಇದರಿಂದ ಸಹಾಯವಾಗುತ್ತೆ. ಮತದಾರರ ಪಟ್ಟಿಯಲ್ಲಿರುವ ಬಾಂಗ್ಲಾದೇಶಿಯರು ಸೇರಿದಂತೆ ವಿದೇಶಿಯರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗುತ್ತೆ. ಪಶ್ಚಿಮ ಬಂಗಾಳ ರಾಜ್ಯ, ಜಾರ್ಖಂಡ್ ರಾಜ್ಯಗಳಲ್ಲಿ ಬಾಂಗ್ಲಾದೇಶಿಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಐ.ಡಿ. ಕಾರ್ಡ್ ಪಡೆದಿದ್ದಾರೆ ಎಂಬ ಆರೋಪ ಇದೆ. ಹೀಗಾಗಿ ಈ ರಾಜ್ಯಗಳಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯಿಂದ ಬಾಂಗ್ಲಾದೇಶಿ ವೋಟರ್​ಗಳಿಗೆ ಬಿಸಿ ಮುಟ್ಟಿಸಿ, ಎಲೆಕ್ಷನ್ ವೋಟರ್ ಲಿಸ್ಟ್ ನಿಂದ ಹೆಸರುಗಳನ್ನು ತೆಗೆದು ಹಾಕಲಾಗುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment