Advertisment

ಮನೆಯಲ್ಲಿ ತಯಾರು ಮಾಡಿದ ಈ 8 ಜ್ಯೂಸ್​ಗಳು ದೇಹದಲ್ಲಿನ ಯೂರಿಕ್ ಆಮ್ಲವನ್ನು ಕಡಿಮೆ ಮಾಡುತ್ತದೆ. ಏನಿದು ಯೂರಿಕ್ ಆಮ್ಲ?

author-image
Gopal Kulkarni
Updated On
ಮನೆಯಲ್ಲಿ ತಯಾರು ಮಾಡಿದ ಈ 8 ಜ್ಯೂಸ್​ಗಳು ದೇಹದಲ್ಲಿನ ಯೂರಿಕ್ ಆಮ್ಲವನ್ನು ಕಡಿಮೆ ಮಾಡುತ್ತದೆ. ಏನಿದು ಯೂರಿಕ್ ಆಮ್ಲ?
Advertisment
  • ದೇಹದಲ್ಲಿನ ಯೂರಿಕ್ ಆಮ್ಲ ಕಡಿಮೆ ಮಾಡಲು ಸರಳ ದಾರಿ
  • ಮನೆಯಲ್ಲಿಯೇ ತಯಾರಿಸಿದ ಈ ಕೆಲವು ಜ್ಯೂಸ್​ ಕುಡಿಯಿರಿ
  • ಯಾವ ಜ್ಯೂಸ್​ಗಳು ಯೂರಿಕ್ ಆಮ್ಲ ಕಡಿಮೆ ಮಾಡುತ್ತವೆ

ಮನೆಯಲ್ಲಿಯೇ ತಯಾರಿಸಿದ ಕೆಲವು ಜ್ಯೂಸ್​ಗಳನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿನ ಯೂರಿಕ್ ಆಮ್ಲವನ್ನು ಕಡಿಮೆ ಮಾಡುತ್ತದೆ. ಅದಕ್ಕೂ ಮೊದಲು ನಾವು ಈ ಯೂರಿಕ್ ಆಮ್ಲ ಅಂದರೇನು ಎಂಬುದನ್ನು ತಿಳಿದುಕೊಳ್ಳಬೇಕು. ಯೂರಿಕ್ ಆಮ್ಲ ನಮ್ಮ ದೇಹದಲ್ಲಿ ಉತ್ಪಾನೆಯಾಗುವ ಒಂದು ತ್ಯಾಜ್ಯ. ಇದು ರಕ್ತದಲ್ಲಿ ಕರಗಿ ಮೂತ್ರದ ಮೂಲಕ ದೇಹದಿಂದ ಆಚೆ ಹೋಗುತ್ತದೆ. ರಕ್ತದಲ್ಲಿ ಇದು ಹೆಚ್ಚು ಶೇಖರಣೆ ಆಗುವುದರಿಂದ ಕಿಡ್ನಿ ಸ್ಟೋನ್, ಸಕ್ಕೆರೆ ಕಾಯಿಲೆ ಈ ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದನ್ನು ನಿಯಂತ್ರಿಸಲು ಹಲವು ಜ್ಯೂಸ್​ಗಳು ಇವೆ. ಅವುಗಳನ್ನು ಮನೆಯಲ್ಲಿಯೇ ಮಾಡಿ ಕುಡಿಯಬಹುದು. ಅಂತಹ ಜ್ಯೂಸ್​ಗಳ ಬಗ್ಗೆ ಈ ಒಂದು ಲೇಖನದಲ್ಲಿ ವಿವರಗಳಿವೆ.

Advertisment

publive-image

ಬೀಟ್​ರೂಟ್ ಜ್ಯೂಸ್
ಈ ಒಂದು ಆರೋಗ್ಯಕರ ಜ್ಯೂಸ್ ಕುಡಿಯುವುದರಿಂದ ಹಲವಾರು ಆರೋಗ್ಯದ ಪ್ರಯೋಜನಗಳಿವೆ. ದೇಹಕ್ಕೆ ಅನೇಕ ರೀತಿಯ ಪೌಷ್ಠಿಕಾಂಶಗಳನ್ನು ಈ ಜ್ಯೂಸ್ ನೀಡುತ್ತದೆ. ಅದರ ಜೊತೆಗೆ ದೇಹದಲ್ಲಿ ಯೂರಿಕ್ ಆಮ್ಲ ಉತ್ಪಾದನೆಯಾಗುವುದನ್ನು ತಡೆಯುತ್ತದೆ. ಇದು ಅತಿಹೆಚ್ಚು ಆ್ಯಂಟಿ ಆಕ್ಸಿಡಂಟ್ಸ್ ಹಾಗೂ ಆ್ಯಂಟಿ ಇನ್​ಫ್ಲಮೆಟರಿ ಆಗಿರುವುದರಿಂದ. ದೇಹದಲ್ಲಿ ಯೂರಿಕ್ ಆಮ್ಲದ ಉತ್ಪಾದನೆ ಕಡಿಮಯಾಗುವುದರಿಂದ ನಮಗೆ ಮೂತ್ರಪಿಂಡಕ್ಕೆ ಸೇರಿದ ಸಮಸ್ಯೆಗಳಿಂದ ದೂರ ಇಡುತ್ತದೆ.

ಇದನ್ನೂ ಓದಿ: 50 ವರ್ಷಗಳ ಕಾಲ ತರುಣಿಯಂತೆ ಯಂಗ್ ಆಗಿರಿ.. ಲಕಲಕ ಹೊಳೆಯಲು ನಿಮ್ಮ ಲೈಫ್​ಸ್ಟೈಲ್ ಹೇಗಿರಬೇಕು?

publive-image

ಲಿಂಬು ನೀರು
ಲಿಂಬುರಸ ಬೆರೆಸಿದ ನೀರು ದೇಹವನ್ನು ಕ್ಷಾರೀಯ (Alkalize)ಗೊಳಿಸುವ ಶಕ್ತಿಯನ್ನು ಹೊಂದಿರುತ್ತದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಹಳಷ್ಟು ಸಹಾಯಕಾರಿಯಾಗಿದೆ. ಈ ಒಂದು ಗುಣದಿಂದಾಗಿ ಲಿಂಬು ನೀರು ರಕ್ತದಲ್ಲಿ ಯೂರಿಕ್ ಆಮ್ಲ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.

Advertisment

publive-image

ಇದನ್ನೂ ಓದಿ:ನಿತ್ಯ ಸಾಯಂಕಾಲ ಈ ವ್ಯಾಯಾಮಗಳನ್ನು ಮಾಡುವ ರೂಢಿ ಇಟ್ಟುಕೊಳ್ಳಿ, ತೂಕವನ್ನು ಕಳೆದುಕೊಳ್ಳಿ

ಆ್ಯಪಲ್ ಸೈಡರ್ ವೆನೆಗಾರ್
ಎರಡು ಟೇಬಲ್ ಸ್ಪೂನ್​ನಷ್ಟು ಆ್ಯಪಲ್ ಸೈಡರ್ ವೆನೆಗಾರ್​ನ್ನು ಒಂದು ಗ್ಲಾಸ್​​ನಲ್ಲಿ ನೀರಿನಲ್ಲಿ ಸೇರಿಸಿ ನಿತ್ಯ ಕುಡಿಯುವುದರಿಂದಲೂ ಕೂಡ ಯೂರಿಕ್ ಆ್ಯಸಿಡ್ ಹೆಚ್ಚುವುದನ್ನು ತಡೆಗಟ್ಟಲು ಸಾಧ್ಯ ಎಂದು ಅನೇಕ ವೈದ್ಯರು ಹೇಳಿದ್ದಾರೆ.

publive-image

ಗ್ರೀನ್ ಟೀ
ಗ್ರೀನ್ ಟೀ ಹಲವು ರೀತಿಯಲ್ಲಿ ನಮಗೆ ಆರೋಗ್ಯದ ಪ್ರಯೋಜನಗಳನ್ನು ನೀಡುತ್ತದೆ. ಅದರಲ್ಲಿ ಒಂದು ಯೂರಿಕ್ ಆಮ್ಲವನ್ನು ಕಡಿಮೆ ಮಾಡುವುದು. ಇದರಲ್ಲಿಯೂ ಕೂಡ ಬೀಟ್​ರೂಟ್​ ರೀತಿಯ ತರಹ ಆ್ಯಂಟಿಆಕ್ಸಿಡಂಟ್ಸ್​ ಅಂಶಗಳು ಹೆಚ್ಚು ಇರುವುದರಿಂದ ಇದು ರಕ್ತದಲ್ಲಿ ಯೂರಿಕ್ ಆಮ್ಲದ ಸೃಷ್ಟಿಯನ್ನು ಕಡಿಮೆ ಮಾಡುತ್ತದೆ.

Advertisment

publive-image

ಎಳನೀರು
ಎಳನೀರಿನಲ್ಲಿ ಪೋಟ್ಯಾಶಿಯಂ ಅಂಶ ಹಾಗೂ ಹೈಡ್ರೇಷನ್ ಶಕ್ತಿ ಇರುವುದರಿಂದ ನೈಸರ್ಗಿಕವಾಗಿ ಇದು ರಕ್ತದಲ್ಲಿ ಯೂರಿಕ್ ಆಮ್ಲ ಹೆಚ್ಚಿಸುವುದನ್ನು ತಡೆಯುತ್ತದೆ.

publive-image

ಚೆರಿಽ ಜ್ಯೂಸ್
ಚೆರಿಽ ಜ್ಯೂಸ್​ನಲ್ಲಿಯೂ ಆ್ಯಂಟಿಆಕ್ಸಿಂಡಟ್ಸ್​ ಆ್ಯಂಟಿಇನ್​ಫ್ಲಮೆಟರಿಯಂತಹ ಗುಣಗಳು ಇರುವುದರಿಂದ ಇದರ ಜ್ಯೂಸ್ ನಿತ್ಯ ಕುಡಿಯುವುದರಿಂದ ನಿಮ್ಮ ಕಿಡ್ನಿ ಆರೋಗ್ಯವನ್ನು ಹೆಚ್ಚು ಸುರಕ್ಷಿತವಾಗಿ ಇಡಬಹುದು.

ಇದನ್ನೂ ಓದಿ:ಅನುರಾಧಾ ಎಂಬ ಪತ್ರಕರ್ತೆಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ ಆನಂದ್ ಮಹಿಂದ್ರಾ! ಇಲ್ಲಿದೆ ಕರೋಡ್​ಪತಿಯ ಪ್ರೇಮ್ ಕಹಾನಿ

Advertisment

ಹಸಿಶುಂಠಿ ಚಹಾ
ಹಸಿಶುಂಠಿಯನ್ನ ನೀರಿನಲ್ಲಿ ಕುದಿಸಿ ಅದರ ಚಹಾ ಮಾಡಿ ಕುಡಿಯುವುದರಿಂದಲೂ ಕೂಡ ನಾವು ಯೂರಿಕ್ ಆಮ್ಲ ನಮ್ಮ ದೇಹದಲ್ಲಿ ಹೆಚ್ಚಾಗದಂತೆ ತಡೆಗಟ್ಟಬಹುದು. ಇದರ ಜೊತೆಗೆ ಪೈನಾಪಲ್ ಜ್ಯೂಸ್ ಸೇವಿಸುವುದರಿಂದಲೂ ಕೂಡ ನಾವು ಯೂರಿಕ್​ ಆಮ್ಲವನ್ನು ರಕ್ತದಲ್ಲ ಹೆಚ್ಚು ಸೃಷ್ಟಿಯಾಗದಂತೆ ತಡೆಯಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment