/newsfirstlive-kannada/media/post_attachments/wp-content/uploads/2025/04/Urvashi-Rautela.jpg)
ಉತ್ತರಾಖಂಡದಲ್ಲಿ ನನ್ನ ಹೆಸರಿನಲ್ಲಿ ದೇವಸ್ಥಾನವಿದೆ ಎಂದು ಹೇಳುವ ಮೂಲಕ ಬಾಲಿವುಡ್ ನಟಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ನಟಿ ಊರ್ವಶಿ ರೌಟೇಲಾ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಬದರಿನಾಥದ ಸ್ಥಳೀಯ ಅರ್ಚಕರು, ಧಾರ್ಮಿಕ ಅಧಿಕಾರಿಗಳು ಮತ್ತು ನಿವಾಸಿಗಳು ಆಕ್ರೋಶಗೊಂಡಿದ್ದಾರೆ.
ಇದನ್ನೂ ಓದಿ:ರಿಕ್ಕಿ ರೈ ಪ್ರಕರಣಕ್ಕೆ ಹೊಸ ತಿರುವು.. ಘಟನೆ ಬಳಿಕ ಏನೆಲ್ಲ ಆಯ್ತು..? ಟಾಪ್ 20 ಅಪ್ಡೇಟ್ಸ್..!
ಬದರಿನಾಥ ಧಾಮದ ಬಳಿ ಇರುವ ಊರ್ವಶಿ ದೇವಾಲಯವನ್ನು ಸ್ಥಳೀಯರು ಪವಿತ್ರವೆಂದು ಪರಿಗಣಿಸಿದ್ದಾರೆ. ಆದ್ರೆ ಇದೇ ದೇವಾಲಯ "ತನ್ನ" ದೇವಸ್ಥಾನ ಎಂದು ನಟಿ ಉಲ್ಲೇಖಿಸಿದ್ದಾರೆ. ನಿರೂಪಕ ಸಿದ್ಧಾರ್ಥ್ ಕಣ್ಣನ್ ಅವರೊಂದಿಗೆ ಸಂದರ್ಶನದಲ್ಲಿ ದೇವಾಲಯದ ಬಗ್ಗೆ ಮಾತಾಡೋ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಂದರ್ಶನದಲ್ಲಿ ಮಾತಾಡಿದ ನಟಿ ಉತ್ತರಾಖಂಡದಲ್ಲಿ ಬದರಿನಾಥ ದೇವಸ್ಥಾನದ ಪಕ್ಕದಲ್ಲಿ ನನ್ನ ಹೆಸರಿನಲ್ಲಿ ಒಂದು ದೇವಸ್ಥಾನವಿದೆ. ಬದರಿನಾಥಕ್ಕೆ ಭೇಟಿ ನೀಡಿದರೆ, 'ಊರ್ವಶಿ ದೇವಸ್ಥಾನ' ನಿಮಗೆ ಸಿಗುತ್ತದೆ ಎಂದಿದ್ದಾರೆ.
Delusion ho toh Urvashi jitna ho varna na ho pic.twitter.com/3E0F5f7rXZ
— Deity (@gharkakabutar) April 17, 2025
ಇದೇ ಹೇಳಿಕೆ ಬಗ್ಗೆ ಬದರಿನಾಥದ ಸ್ಥಳೀಯ ಅರ್ಚಕರು, ಧಾರ್ಮಿಕ ಅಧಿಕಾರಿಗಳು ಮತ್ತು ನಿವಾಸಿಗಳು ಆಕ್ರೋಶಗೊಂಡಿದ್ದಾರೆ.ಬದರಿನಾಥ ಧಾಮದ ಮಾಜಿ ಧಾರ್ಮಿಕ ಅಧಿಕಾರಿ ಸ್ಥಳೀಯ ಅರ್ಚಕ ಭುವನ್ ಚಂದ್ರ ಉನಿಯಾಲ್, ಉರ್ವಶಿ ರೌಟೇಲಾ ಅವರ ಹೇಳಿಕೆ ದಾರಿತಪ್ಪಿಸುವಂತಿದೆ. ಉರ್ವಶಿ ದೇವಾಲಯವು ಹಿಂದೂ ಪುರಾಣಗಳಲ್ಲಿ ಪೂಜ್ಯ ವ್ಯಕ್ತಿಯಾಗಿರುವ ಸತಿ ದೇವತೆಯೊಂದಿಗೆ ಸಂಬಂಧ ಹೊಂದಿದೆ ಮತ್ತು ಇದನ್ನು 108 ಶಕ್ತಿಪೀಠಗಳ ಭಾಗವೆಂದು ಪರಿಗಣಿಸಲಾಗಿದೆ. ಈ ದೇವಾಲಯವು ಬಾಮ್ನಿ ಮತ್ತು ಪಾಂಡುಕೇಶ್ವರ ಗ್ರಾಮಗಳ ನಿವಾಸಿಗಳ ಆಧ್ಯಾತ್ಮಿಕ ಆಚರಣೆಗಳೊಂದಿಗೆ ಆಳವಾಗಿ ಸಂಪರ್ಕ ಹೊಂದಿದೆ. ಭಕ್ತರು ತಮ್ಮ ಸಂಪ್ರದಾಯದ ಭಾಗವಾಗಿ ಅಲ್ಲಿ ಪೂಜಿಸುತ್ತಾರೆ. ಆದರೆ ಇದು ಅವರ ದೇವಸ್ಥಾನವಲ್ಲ. ಅಂತಹ ಹೇಳಿಕೆಗಳು ಸ್ವೀಕಾರಾರ್ಹವಲ್ಲ. ನಟಿ ರೌಟೇಲಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಬ್ರಹ್ಮ ಕಪಾಲ ತೀರ್ಥ ಪುರೋಹಿತ ಸಮಾಜದ ಅಧ್ಯಕ್ಷ ಅಮಿತ್ ಸತಿ ಕೂಡ ರೌಟೇಲಾ ಅವರ ಹೇಳಿಕೆಗಳನ್ನು ಖಂಡಿಸಿದರು. ದೇವಾಲಯವು ಪ್ರಾಚೀನವಾಗಿದ್ದು, ಯಾವುದೇ ವ್ಯಕ್ತಿಗೆ ಅಲ್ಲ, ಊರ್ವಶಿ ದೇವಿಗೆ ಸಂಬಂಧಿಸಿದೆ. ಇಂತಹ ಹೇಳಿಕೆಗಳು ಇಲ್ಲಿನ ಜನರ ಧಾರ್ಮಿಕ ಭಾವನೆಗಳನ್ನು ಅಗೌರವಿಸುತ್ತವೆ. ಈ ಬಗ್ಗೆ ಗ್ರಾಮಸ್ಥರು ಕೂಡ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ