newsfirstkannada.com

ಇರಾಕ್, ಸಿರಿಯಾದಲ್ಲಿ ಇರಾನ್ ನೆಲೆಗಳ ಮೇಲೆ ಅಮೆರಿಕ ಏರ್​ಸ್ಟ್ರೈಕ್; 85 ಟಾರ್ಗೆಟ್ಸ್​ ಧ್ವಂಸ, 18 ಮಂದಿಯ ಹತ್ಯೆ..!

Share :

Published February 3, 2024 at 9:14am

Update February 3, 2024 at 9:16am

    ಜೋರ್ಡಾನ್ ದಾಳಿಗೆ ಪ್ರತೀಕಾರ ತೀರಿಸಿಕೊಂಡ ಅಮೆರಿಕ

    18 ಪ್ರೊ-ಇರಾನ್ ಫೈಟರ್​​ಗಳನ್ನು ಹೊಡೆದು ಹಾಕಿದ US

    7 ಸ್ಥಳ, 85 ಟಾರ್ಗೆಟ್ಸ್​ ಮೇಲೆ ಅಮೆರಿಕ ವೈಮಾನಿಕ ದಾಳಿ

ಜೋರ್ಡಾನ್ ಮೇಲಿನ ದಾಳಿಗೆ ಪ್ರತಿಯಾಗಿ ಅಮೆರಿಕವು ಸಿರಿಯಾ ಮತ್ತು ಇರಾಕ್​ ಮೇಲೆ ಸೇಡು ತೀರಿಸಿಕೊಂಡಿದೆ. ಇರಾಕ್, ಸಿರಿಯಾದಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿದ್ದು, ವೈಮಾನಿಕ ದಾಳಿ ನಡೆಸಿ 18 ಪ್ರೊ-ಇರಾನ್ ಫೈಟರ್​ಗಳನ್ನು ಹೊಡೆದು ಹಾಕಲಾಗಿದೆ ಎಂದು ಅಮೆರಿಕ ಸೇನೆ ಹೇಳಿದೆ.

7 ಸ್ಥಳ 85 ಟಾರ್ಗೆಟ್ಸ್​..!
ಒಟ್ಟು 85ಕ್ಕೂ ಹೆಚ್ಚು ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್​ (IRGC) ಘಟಕಗಳ ಮೇಲೆ ದಾಳಿಯಾಗಿದೆ. ವಿಶೇಷವಾಗಿ ಇರಾನ್​ ಕುಡ್ಸ್ ಫೋರ್ಸ್​ ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ಅಮೆರಿಕ ಸೇನೆ ನೀಡಿರುವ ಮಾಹಿತಿ ಪ್ರಕಾರ, ಕಮಾಂಡ್, ಕಂಟ್ರೋಲ್ ಸೆಂಟರ್, ರಾಕೆಟ್, ಕ್ಷಿಪಣಿ ಮತ್ತು ಡ್ರೋಣ್ ಸಂಗ್ರಹಣಾ ಕೇಂದ್ರ, ಲಾಜಿಸ್ಟಿಕ್ಸ್, ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದ ಒಟ್ಟು 7 ಸ್ಥಳಗಳಲ್ಲಿ ದಾಳಿಯಾಗಿದೆ. ಸಿರಿಯಾದಲ್ಲಿ ನಾಲ್ಕು, ಇರಾಕ್​​ನಲ್ಲಿ ಮೂರು ಸ್ಥಳಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಅಮೆರಿಕ ಹೇಳಿದೆ.

ಯಾಕೆ ಅಮೆರಿಕ ದಾಳಿ..!
ಅಂದ್ಹಾಗೆ ಕಳೆದ ಭಾನುವಾರ ಜೋರ್ಡಾನ್‌ನಲ್ಲಿರುವ ಅಮೆರಿಕನ್ ಪೋಸ್ಟ್ ಮೇಲೆ ದಾಳಿ ನಡೆದಿತ್ತು. ಸಿರಿಯಾ ಗಡಿಯಲ್ಲಿ ನಿರ್ಮಿಸಲಾಗಿದ್ದ ಈ ಪೋಸ್ಟ್ ಮೇಲೆ ಡ್ರೋನ್ ದಾಳಿಯಾಗಿತ್ತು. ಪರಿಣಾಮ ಮೂವರು ಅಮೆರಿಕ ಯೋಧರು ಸಾವನ್ನಪ್ಪಿದ್ದರು. 41 ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದಾಳಿಗೆ ಇರಾನ್ ಬೆಂಬಲಿತ ಸೇನೆಯೇ ಕಾರಣ ಎಂದು ಅಮೆರಿಕ ಆರೋಪಿಸಿದೆ. ಈ ದಾಳಿಯ ಹಿಂದೆ ಇಸ್ಲಾಮಿಕ್ ರೆಸಿಸ್ಟೆನ್ಸ್ ಹೆಸರು ಕೇಳಿಬಂದಿದೆ. ಇದು ಇರಾನ್‌ನ ರೆವಲ್ಯೂಷನರಿ ಗಾರ್ಡ್‌ಗಳಿಂದ ಶಸ್ತ್ರಾಸ್ತ್ರಗಳು ಮತ್ತು ತರಬೇತಿಯನ್ನು ಪಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇರಾಕ್, ಸಿರಿಯಾದಲ್ಲಿ ಇರಾನ್ ನೆಲೆಗಳ ಮೇಲೆ ಅಮೆರಿಕ ಏರ್​ಸ್ಟ್ರೈಕ್; 85 ಟಾರ್ಗೆಟ್ಸ್​ ಧ್ವಂಸ, 18 ಮಂದಿಯ ಹತ್ಯೆ..!

https://newsfirstlive.com/wp-content/uploads/2024/02/US-4.jpg

Load More