/newsfirstlive-kannada/media/post_attachments/wp-content/uploads/2025/01/TRUMP-4.jpg)
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವದ 41 ದೇಶಗಳ ನಾಗರಿಕರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಪಾಕಿಸ್ತಾನ, ಭೂತಾನ್ ಸೇರಿದಂತೆ 41 ದೇಶಗಳ ಜನರಿಗೆ ಅಮೆರಿಕಾ ಎಂಟ್ರಿಯೇ ಬ್ಯಾನ್ ಮಾಡಿದ್ದಾರೆ.
ಡೋನಾಲ್ಡ್ ಟ್ರಂಪ್ ಸರ್ಕಾರ ಜಗತ್ತಿನ 41 ದೇಶಗಳ ನಾಗರಿಕರಿಗೆ ಅಮೆರಿಕಾ ಪ್ರವೇಶಿಸುವ ಟ್ರಾವೆಲ್ ವೀಸಾ ಬ್ಯಾನ್ ಮಾಡಿದ್ದಾರೆ. ಈ ಹಿಂದಿನ ತಮ್ಮ ಸರ್ಕಾರದ ಅವಧಿಯಲ್ಲಿ ಡೊನಾಲ್ಡ್ ಟ್ರಂಪ್ 7 ಮುಸ್ಲಿಂ ದೇಶಗಳಿಗೆ ಟ್ರಾವೆಲ್ ಬ್ಯಾನ್ ಮಾಡಿದ್ದರು.
ಇದನ್ನೂ ಓದಿ: UKG, 1ನೇ ತರಗತಿ ಓದುತ್ತಿದ್ದ ಇಬ್ಬರು ಮಕ್ಕಳನ್ನು ಬಕೆಟ್ ನೀರಲ್ಲಿ ಮುಳುಗಿಸಿ ಕೊಂದ ಅಪ್ಪ!
41 ದೇಶಗಳನ್ನು ರೆಡ್, ಆರೆಂಜ್, ಯೆಲ್ಲೋ ಎಂಬ ಮೂರು ಗುಂಪುಗಳಾಗಿ ಅಮೆರಿಕಾ ವಿಂಗಡಣೆ ಮಾಡಿದೆ. ಅಮೆರಿಕಾದ ಒಳಗೆ ಭಯೋತ್ಪಾದಕರು ಕಾಲಿಡಬಾರದು. ಅಮೆರಿಕಾ ಭದ್ರತೆಯ ಕಾರಣದಿಂದ ಪಾಕಿಸ್ತಾನ ಸೇರಿದಂತೆ 26 ದೇಶಗಳನ್ನು ಭಾಗಶಃ ಬ್ಯಾನ್ ಮಾಡೋ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
🚨Update: Draft 3-tier Trump travel BAN to hit 43 countries! — NYT
NO ENTRY for 11 ‘red’ countries!
Visas for Russians, Belarusians and Pakistanis ‘sharply restricted!’
Many African nations on ‘yellow’ list! pic.twitter.com/pfap4YFbxV
— US Homeland Security News (@defense_civil25) March 15, 2025
ರೆಡ್ (A ಗುಂಪು)
ಅಫ್ಘಾನಿಸ್ತಾನ, ಭೂತಾನ್, ಇರಾನ್, ಸಿರಿಯಾ, ಲಿಬಿಯಾ, ಕ್ಯೂಬಾ, ಉತ್ತರ ಕೊರಿಯಾ ಸೇರಿದಂತೆ 10 ದೇಶಗಳು. ಎ ಗುಂಪಿನ ದೇಶಗಳಿಗೆ ಅಮೆರಿಕಾ ವೀಸಾ ಸಂಪೂರ್ಣ ಬ್ಯಾನ್ ಆಗಿದೆ.
ಆರೆಂಜ್ (B ಗುಂಪು)
ಪಾಕಿಸ್ತಾನ, ಹೈಟಿ, ಲಾವೋಸ್, ಮಯನ್ಮಾರ್, ದಕ್ಷಿಣ ಸೂಡಾನ್ ಸೇರಿ 10 ದೇಶಗಳಿಗೆ ಟೂರಿಸ್ಟ್, ವಿದ್ಯಾರ್ಥಿ ವೀಸಾಗಳು ನಿರ್ಬಂಧಿಸಲಾಗಿದೆ.
ಯೆಲ್ಲೋ (C ಗುಂಪು)
ಯೆಲ್ಲೋ ಗುಂಪಿನ ದೇಶಗಳು 60 ದಿನಗಳಲ್ಲಿ ಕೆಲವೊಂದು ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲದಿದ್ದರೆ ಸಂಪೂರ್ಣವಾಗಿ 60 ದೇಶಗಳ ನಾಗರಿಕರಿಗೆ ಆಮೆರಿಕಾ ವೀಸಾ ಬ್ಯಾನ್ ಮಾಡಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ