ಹೊಸ ಬಣ್ಣ ಕಂಡು ಹಿಡಿದ ವಿಜ್ಞಾನಿಗಳು; ಜಗತ್ತಿನಲ್ಲೇ ಇದನ್ನ ನೋಡಿರೋದೋ 5 ಮಂದಿ ಮಾತ್ರ!

author-image
admin
Updated On
ಹೊಸ ಬಣ್ಣ ಕಂಡು ಹಿಡಿದ ವಿಜ್ಞಾನಿಗಳು; ಜಗತ್ತಿನಲ್ಲೇ ಇದನ್ನ ನೋಡಿರೋದೋ 5 ಮಂದಿ ಮಾತ್ರ!
Advertisment
  • ವಿಶ್ವದಲ್ಲೇ ಇದುವರೆಗೂ ಯಾರು ನೋಡಿರದ ಹೊಚ್ಚ ಹೊಸ ಬಣ್ಣ ಇದು
  • ಕಣ್ಣಿಗೆ ಗೋಚರಿಸುವ ಸೂಕ್ಷ್ಮತೆಗಳ ಬಗ್ಗೆ ವಿಜ್ಞಾನಿಗಳ ಸಂಶೋಧನೆ
  • ಹೊಸ ಬಣ್ಣವನ್ನು ಇಲ್ಲಿವರೆಗೂ 5 ಮಂದಿ ವಿಜ್ಞಾನಿಗಳ ಮಾತ್ರ ನೋಡಿದ್ದಾರೆ

ಕಾಮನಬಿಲ್ಲಿಗೆ 7 ಬಣ್ಣಗಳು. ಆದರೆ ಜಗತ್ತಿನಲ್ಲಿ ಎಷ್ಟು ಬಣ್ಣಗಳಿವೆ. ಸರಿಯಾಗಿ ಇಂತಿಷ್ಟೇ ಅಂತ ಲೆಕ್ಕ ಹಾಕಿ ಸಂಖ್ಯೆಗಳಲ್ಲಿ ಹೇಳೋದು ಕಷ್ಟ. ಯಾಕಂದ್ರೆ ವಿಶ್ವದಲ್ಲಿ ಲಕ್ಷಾಂತರ ಚಿತ್ತಾರದ ಬಣ್ಣಗಳು ಬಳಕೆಯಲ್ಲಿದೆ. ಆದ್ರೀಗ ಅಮೆರಿಕಾ ವಿಜ್ಞಾನಿಗಳು ಜಗತ್ತಿನಲ್ಲೇ ಯಾರು ನೋಡಿರದ ಹೊಸ ಬಣ್ಣವೊಂದನ್ನ ಕಂಡು ಹಿಡಿದಿದ್ದಾರೆ.

ಅಮೆರಿಕಾ ಕ್ಯಾಲಿಫೋರ್ನಿಯಾ ವಿಜ್ಞಾನಿಗಳು ಬಣ್ಣಗಳಲ್ಲೇ ಹೊಸ ವಿಸ್ಮಯವನ್ನ ಸಂಶೋಧನೆ ಮಾಡಿದ್ದಾರೆ. ಇದುವರೆಗೂ ಯಾರು ನೋಡಿರದ ಹೊಚ್ಚ ಹೊಸ ಬಣ್ಣ ಇದಾಗಿದ್ದು, ಕೇವಲ 5 ಮಂದಿಗೆ ಮಾತ್ರ ಇದನ್ನ ಕಂಡಿದ್ದಾರೆ ಎನ್ನುವ ಸುಳಿವು ನೀಡಲಾಗಿದೆ.

publive-image

ಹೊಸ ಬಣ್ಣದ ಹೆಸರೇನು?
ವಿಜ್ಞಾನಿಗಳು ಕಂಡು ಹಿಡಿದಿರುವ ಹೊಸ ಬಣ್ಣಕ್ಕೆ ‘OLO’ ಎಂದು ಹೆಸರಿಟ್ಟಿದ್ದಾರೆ. ಕಣ್ಣಿನ ಲೇಸರ್‌ಗೆ ಇದು ಹತ್ತಿರವಾಗಿದೆ. ನೀಲಿ-ಹಸಿರು ಬಣ್ಣ ಮಿಶ್ರಿತವಾದ OLO ಬಹಳ ವಿಶೇಷವಾದದ್ದು ಎನ್ನಲಾಗಿದೆ.

ಸಾಮಾನ್ಯವಾಗಿ ಮನುಷ್ಯರ ಕಣ್ಣುಗಳು 3 ಕೋನಗಳಲ್ಲಿ ಬಣ್ಣವನ್ನು ಗುರುತಿಸುತ್ತವೆ. ದೀರ್ಘ, ಮಧ್ಯಮ ಮತ್ತು ಅಲ್ಪ ದೂರದ ಬಣ್ಣಗಳು ಮನುಷ್ಯರ ಕಣ್ಣಿಗೆ ಕಾಣುತ್ತವೆ. ಅದರಲ್ಲಿ ಕೆಂಪು, ಹಸಿರು, ನೀಲಿ ಬಣ್ಣಗಳು ಪ್ರಮುಖವಾದದ್ದು.

ಇದನ್ನೂ ಓದಿ: ತೀವ್ರ ಜ್ವರ ಬಂದಾಗ ಯಾಕೆ ಗೊಣಗುತ್ತಾರೆ..? ಮೆದುಳಿಗೆ ಅದು ಎಷ್ಟು ಡೇಂಜರ್​..? 

ಕಣ್ಣಿಗೆ ಗೋಚರಿಸುವ ಸೂಕ್ಷ್ಮತೆಗಳನ್ನು ವಿಜ್ಞಾನಿಗಳು ಸಂಶೋಧನೆ ಮಾಡಿ ಈ ಹೊಸ ಬಣ್ಣವನ್ನು ಕಂಡು ಹಿಡಿದಿದ್ದಾರೆ. ಈ ಹೊಸ ಬಣ್ಣದ ಅಧ್ಯಯನ ಇನ್ನೂ ಆರಂಭಿಕ ಹಂತದಲ್ಲಿದೆ. ಇದುವರೆಗೂ ಹೊಸ ಬಣ್ಣವನ್ನು 5 ಮಂದಿ ವಿಜ್ಞಾನಿಗಳ ಮಾತ್ರ ನೋಡಿದ್ದಾರೆ ಎನ್ನುವ ಮಾಹಿತಿ ಹೊರ ಬಿದ್ದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment