/newsfirstlive-kannada/media/post_attachments/wp-content/uploads/2025/04/India-China-items-Rate-cheep.jpg)
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಸಮರ ಮತ್ತು ಚೀನಾದ ದಿಟ್ಟ ಹೆಜ್ಜೆಯಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ ಅನ್ನೋ ಹಾಗೆ ಭಾರತಕ್ಕೆ ಇದರಿಂದ ಅನುಕೂಲ ಆಗಲಿದೆ.
ಚೀನಾದ ಮೇಲೆ ಡೊನಾಲ್ಡ್ ಟ್ರಂಪ್ ಶೇಕಡಾ 125ರಷ್ಟು ಸುಂಕ ವಿಧಿಸಿದ್ದಾರೆ. ಈ 125% ಗುನ್ನಾ ಕೊಟ್ಟ ಮೇಲೆ ಅಮೆರಿಕಾಕ್ಕೆ ಚೀನಾದಿಂದ ರಫ್ತು ಆಗುವ ಎಲ್ಲಾ ವಸ್ತುಗಳು ದುಬಾರಿ ಆಗಲಿದೆ. ಈ ಹಿನ್ನೆಲೆಯಲ್ಲಿ ಚೀನಾ ದೇಶ ಭಾರತಕ್ಕೆ ಡಿಸ್ಕೌಂಟ್ ಘೋಷಣೆ ಮಾಡಲಿದೆ. ಚೀನಾದಿಂದ ರಫ್ತು ಆಗುವ ಉತ್ಪನ್ನಗಳ ಮೇಲೆ ಶೇಕಡಾ 5ರಷ್ಟು ರಿಯಾಯಿತಿ ನೀಡುವ ಸಾಧ್ಯತೆ ಹೆಚ್ಚಳವಾಗಿದೆ.
ಸುಂಕದ ಸೇಡಿನಿಂದ ಭಾರತಕ್ಕೆ ಲಾಭ!
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಪ್ರಿಲ್ 02ರಂದು ಚೀನಾ ಮೇಲೆ ಹೆಚ್ಚಿನ ಸುಂಕ ವಿಧಿಸಿದ್ದರು. ಇದಕ್ಕೆ ಪ್ರತಿಯಾಗಿ ಚೀನಾ, ಅಮೆರಿಕ ಮೇಲೆ ಶೇ.34ರಷ್ಟು ಸುಂಕ ಏರಿಸಿತ್ತು. ಇದರಿಂದ ಕೆರಳಿದ ಅಮೆರಿಕ ಸುಂಕವನ್ನು ಶೇ.104ಕ್ಕೆ ಹೆಚ್ಚಿಸಿತ್ತು.
ಇದನ್ನೂ ಓದಿ: ಚೀನಾ ಬಿಟ್ಟು ಉಳಿದ ದೇಶಗಳಿಗೆ 90 ದಿನಗಳ ಸುಂಕ ವಿರಾಮ ಘೋಷಿಸಿದ ಡೊನಾಲ್ಡ್ ಟ್ರಂಪ್.. ಕಾರಣವೇನು?
ಶೇ.104ಕ್ಕೆ ಪ್ರತಿಯಾಗಿ ಚೀನಾ, ಅಮೆರಿಕಾ ಮೇಲಿನ ಸುಂಕ ಶೇ.84ಕ್ಕೆ ಏರಿಕೆ ಮಾಡಲಾಗಿತ್ತು. ಇದೀಗ ಡೊನಾಲ್ಡ್ ಟ್ರಂಪ್ ಚೀನಾ ಉತ್ಪನ್ನಗಳ ಮೇಲೆ ಶೇ.125ರಷ್ಟು ಸುಂಕ ವಿಧಿಸಿದ್ದಾರೆ. ಸೇಡಿಗೆ ಸೇಡಿನ ಈ ನಿರ್ಧಾರದಿಂದ ಚೀನಾದಿಂದ ಅಮೆರಿಕಕ್ಕೆ ರಫ್ತಾಗುವ ವಸ್ತುಗಳ ಬೆಲೆ ಹೆಚ್ಚಾಗಲಿದೆ. ಇದರಿಂದ ಬೇಡಿಕೆ ಕಡಿಮೆಯಾಗಿ ಚೀನಾ ಕಂಪನಿಗಳ ಮೇಲೆ ಒತ್ತಡ ಸೃಷ್ಟಿಯಾಗುತ್ತೆ.
ಚೀನಾ ಡಿಸ್ಕೌಂಟ್ ಗ್ಯಾರಂಟಿ!
ಅಮೆರಿಕ-ಚೀನಾ ಸುಂಕ ಸಮರದಿಂದ ಯುಎಸ್ಗೆ ರಫ್ತು ದುಬಾರಿ ಆಗಲಿದೆ. ಈಗಾಗಲೇ ಚೀನಾದಲ್ಲಿ ಉತ್ಪನ್ನಗಳ ಸ್ಟಾಕ್ ಇದೆ. ಈ ಸ್ಟಾಕ್ ಖಾಲಿ ಮಾಡಲು ಚೀನಾ ಭಾರತಕ್ಕೆ ಡಿಸ್ಕೌಂಟ್‌ನಲ್ಲಿ ಮಾರಾಟ ಮಾಡುವುದನ್ನು ಬಿಟ್ಟರೆ ಚೀನಾಕ್ಕೂ ಬೇರೆ ದಾರಿ ಇಲ್ಲ.
ಅಮೆರಿಕಾ ಸುಂಕ ಸಮರದ ಹಿನ್ನೆಲೆಯಲ್ಲಿ ಭಾರತದ ಆಮದುದಾರರು ಚೀನಾದ ಜೊತೆಗೆ ಚೌಕಾಸಿ ಮಾಡಲು ಅವಕಾಶ ಇದೆ. ಇದರಿಂದ ಭಾರತದಲ್ಲಿ ಚೀನಾದ ಉತ್ಪನ್ನಗಳ ಬೆಲೆ ಕಡಿಮೆ ಆಗುವ ಸಾಧ್ಯತೆ ಇದೆ. ಭಾರತಕ್ಕೆ ಕಡಿಮೆ ಬೆಲೆಗೆ ಕಚ್ಚಾ ವಸ್ತುಗಳನ್ನು ಪಡೆಯಲು ಅವಕಾಶ ಹೆಚ್ಚಾಗುತ್ತದೆ. ಮೇ-ಜೂನ್ ತಿಂಗಳ ಹೊಸ ಆರ್ಡರ್ ವೇಳೆ 5% ಡಿಸ್ಕೌಂಟ್ ದರ ಇಳಿಕೆಯಾಗುವ ಸಾಧ್ಯತೆ ಇದೆ.
ಯಾವ್ಯಾವುದು ಅಗ್ಗ?
ಮೊಬೈಲ್ ಫೋನ್, ಟಿವಿ, ಫ್ರಿಡ್ಜ್, ಎಲೆಕ್ಟ್ರಾನಿಕ್ ವಸ್ತು, ಹೋಮ್ ಅಪ್ಲೆಯನ್ಸಸ್, ಔಷಧಿ ತಯಾರಿಕೆಯ ಕಚ್ಚಾತೈಲ, ಮಕ್ಕಳ ಆಟಿಕೆಗಳು.
ಚೈನಾ ಮಾಲು ಚೀಪ್ ಆಗುವುದರ ಜೊತೆಗೆ ಚೀನಾದ ಸುಂಕ ಸವಾಲಿಗೆ ಕಂಗೆಟ್ಟ ಕಂಪನಿಗಳು ಭಾರತಕ್ಕೆ ಬರಬಹುದು. ವಿದೇಶಿ ಹಣ ಮತ್ತು ಉದ್ಯೋಗಗಳನ್ನು ಭಾರತ ತನ್ನತ್ತ ಸೆಳೆಯಬಹುದು. ಸುಂಕ ತಪ್ಪಿಸುವ ಸಲುವಾಗಿ ಅಮೆರಿಕನ್ ಗ್ರಾಹಕರು ಭಾರತದತ್ತ ಮುಖ ಮಾಡಿದ್ರೆ ಅಮೆರಿಕಾಗೆ ಭಾರತದಿಂದ ವಸ್ತುಗಳ ರಫ್ತು ಇನ್ನಷ್ಟು ಹೆಚ್ಚಾಗಬಹುದು. ಪ್ರಮುಖವಾಗಿ ಮೇ, ಜೂನ್ ತಿಂಗಳಲ್ಲಿ ಎಲೆಕ್ಟ್ರಾನಿಕ್ಸ್, ವಸ್ತ್ರಗಳು ಹಾಗೂ ವಾಹನ ಬಿಡಿಭಾಗಗಳ ಬೆಲೆ ಕಡಿಮೆ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ