/newsfirstlive-kannada/media/post_attachments/wp-content/uploads/2024/07/US-WOMEN-IN-MAHARASTRA-FOREST.jpg)
ಮುಂಬೈ: ಮಹಾರಾಷ್ಟ್ರದ ಕಾಡೊಂದರಲ್ಲಿ ಮಹಿಳೆ ಹೀನಾಯ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಸಿಂಧದುರ್ಗ ಜಿಲ್ಲೆಯಲ್ಲಿ ನಡೆದಿದೆ. ಮತ್ತೊಂದು ಅಚ್ಚರಿಯಂದರೆ ಹೀಗೆ ಹೀನಾಯ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆಯ ಬಳಿ ಯುಎಸ್​ನ ಪಾಸ್​ಪೋರ್ಟ್​, ಆಧಾರಕಾರ್ಡ್ ಹಾಗೂ ತಮಿಳುನಾಡಿನ ವಿಳಾಸಗಳು ಪತ್ತೆಯಾಗಿವೆ.
ಕಾಡಿನಲ್ಲಿ ಕಟ್ಟಿ ಹೋದವರು ಯಾರು?
ಜುಲೈ 28 ರಂದು ಸಂಜೆ ಸಿಂಧದುರ್ಗ ಜಿಲ್ಲೆಯ ಮುಂಬೈನಿಂದ 450 ಕಿಲೋಮೀಟರ್ ದೂರದಲ್ಲಿರುವ ಸುನರ್ಲಿ ಗ್ರಾಮದ ಕುರಿಗಾಹಿಯೊಬ್ಬ ಕುರಿ ಮೇಯಿಸಿಕೊಂಡು ವಾಪಸ್ ಬರುವಾಗ ವೃದ್ಧೆಯ ನರಳಾಟ ಹಾಗೂ ಚೀರಾಟ ಕೇಳಿದೆ. ವೃದ್ಧೆಯನ್ನು ಅಂತಹ ಘೋರ ಸ್ಥಿತಿಯಲ್ಲಿ ಕಂಡ ಕುರಿಗಾಹಿ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಆಕೆಯ ದೈಹಿಕ ಹಾಗೂ ಮಾನಸಿಕ ಸಮಸ್ಯೆಯನ್ನು ಕಂಡು ಹೆಚ್ಚಿನ ಚಿಕಿತ್ಸೆಗಾಗಿ ಗೋವಾ ಮೆಡಿಕಲ್ ಕಾಲೇಜಿ​ಗೆ ದಾಖಲು ಮಾಡಲಾಗಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಆಕೆಗೆ ಮಾನಸಿಕ ಸಮಸ್ಯೆ ಇದ್ದು. ಮಾನಸಿಕ ಕಾಯಿಲೆಗೆ ಸಂಬಂಧಿಸಿದ ಔಷಧಿ ಚೀಟಿಯೂ ಆಕೆಯ ಚೀಲದಲ್ಲಿ ಪತ್ತೆಯಾಗಿದೆ.
ಇಷ್ಟು ಮಾತ್ರವಲ್ಲ ಪೊಲೀಸರು ಆಕೆಯ ಬ್ಯಾಗ್ ಹುಡುಕಿದಾಗ ಅಲ್ಲಿ ಆಕೆಯ ಆಧಾರ್ ಕಾರ್ಡ್, ಅಮೆರಿಕಾದ ಪಾಸ್​ಪೋರ್ಟ್​ ಕೂಡ ಸಿಕ್ಕಿದೆ. ಪೊಲೀಸರು ಹೇಳುವ ಪ್ರಕಾರ ಸಂತ್ರಸ್ತೆ ಹೆಸರು ಲಲಿತಾ ಕಾಯಿ ಎಂದು ತಿಳಿದು ಬಂದಿದ್ದು ಆಕೆಯ ವೀಸಾ ಎಕ್ಸ್​ಪೈರ್ ಆಗಿದೆ. ಈ ಎಲ್ಲಾ ದಾಖಲಾತಿಗಳನ್ನಿಟ್ಟುಕೊಂಡು ನಾವು ಆಕೆ ಯಾವ ದೇಶಕ್ಕೆ ಸೇರಿದವಳು ಎಂದು ಕೂಡ ಪತ್ತೆ ಮಾಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/07/DARSHAN-9.jpg)
ಆರಂಭಿಕವಾಗಿ ಸಿಕ್ಕ ಮಾಹಿತಿಗಳ ಪ್ರಕಾರ, ಈ ಮಹಿಳೆ ಭಾರತಕ್ಕೆ ಬಂದು 10 ವರ್ಷಗಳೇ ಕಳೆದಿವೆ. ಸದ್ಯ ಸಂತ್ರಸ್ತೆ ಹೇಳಿಕೆ ನೀಡುವ ಪರಿಸ್ಥಿತಿಯಲ್ಲಿ ಇಲ್ಲ. ಸಿಕ್ಕ ದಾಖಲೆಯನ್ವಯ ಹಲವು ವಿಷಯಗಳು ಹೊರಗೆ ಬಂದಿವೆ ಕಳೆದ ಹಲವು ದಿನಗಳಿಂದ ಏನೂ ತಿಂದಿಲ್ಲ ಅಲ್ಲದೇ ಆಕೆಯನ್ನು ಕಟ್ಟಿ ಹಾಕಿ ಹೋಗಿದ್ದ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದೆ. ಎಷ್ಟು ದಿನದಿಂದ ಆಕೆ ಈ ಕಾಡಿನಲ್ಲಿ ಈ ರೀತಿ ಬಳಲಿದ್ದಾಳೆ ಅನ್ನೋದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆಕೆಯ ಪತಿ ಈ ರೀತಿಯಾಗಿ ಆಕೆಯನ್ನು ಕಾಡಿನ ನಡುವೆ ಕಟ್ಟಿ ಓಡಿ ಹೋಗಿರುವ ಸಂಶಯವಿದೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನೂ ಆಕೆಯ ಸಂಬಂಧಿಕರನ್ನು ಪತ್ತೆ ಮಾಡಲು ತಮಿಳುನಾಡು ಹಾಗೂ ಗೋವಾಗೆ ಪೊಲೀಸರ ತಂಡ ತೆರಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us