Advertisment

ಬೆಂಗಳೂರಿಗೆ ಗುಡ್​ನ್ಯೂಸ್​; ಇನ್ಮುಂದೆ ಅಮೆರಿಕಾ ವೀಸಾಗಾಗಿ ನೀವು ಬೇರೆಡೆ ಹೋಗಬೇಕಿಲ್ಲ!

author-image
Gopal Kulkarni
Updated On
ಬೆಂಗಳೂರಿಗೆ ಗುಡ್​ನ್ಯೂಸ್​; ಇನ್ಮುಂದೆ ಅಮೆರಿಕಾ ವೀಸಾಗಾಗಿ ನೀವು ಬೇರೆಡೆ ಹೋಗಬೇಕಿಲ್ಲ!
Advertisment
  • ಬೆಂಗಳೂರಿಗೆ ಗುಡ್​ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ
  • ವೀಸಾಗಾಗಿ ಇನ್ಮುಂದೆ ಮುಂಬೈ, ಚೆನ್ನೈಗೆ ಹೋಗಬೇಕಿಲ್ಲ
  • ಬೆಂಗಳೂರಿನಲ್ಲಿಯೇ ದೊರೆಯಲಿದೆ ಯುಎಸ್​ನ ವೀಸಾ

ಬೆಂಗಳೂರು ಜನರಿಗೆ ಒಂದು ಗುಡ್ ನ್ಯೂಸ್ ಬಂದಿದೆ. ಇನ್ಮುಂದೆ ನೀವು ಯುಎಸ್​​ನ ವೀಸಾ ಪಡೆಯಲು ಹೈದ್ರಾಬಾದ್ ಚೆನ್ನೈ ಹಾಗೂ ಮುಂಬೈಗೆ ಹೋಗಬೇಕಾಗಿಲ್ಲ. ಬೆಂಗಳೂರಿನಲ್ಲಿಯೇ ಇನ್ಮುಂದೆ ಯುಎಸ್​ಗೆ ಹೋಗಬೇಕಾದ ವೀಸಾ ಪಡೆಯಬಹುದು ಏಕೆಂದರೆ ಇದೆ ಜನವರಿ 17 ರಂದು ಬೆಂಗಳೂರಿನಲ್ಲಿಯೇ ಯುಎಸ್ ರಾಯಭಾರಿ ಕಚೇರಿ ಓಪನ್ ಆಗಲಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

Advertisment

ಜನವರಿ 17 ರಿಂದ ಆರಂಭವಾಗಲಿರುವ ರಾಯಭಾರಿ ಕಚೇರಿ ತಾತ್ಕಾಲಿಕವಾಗಿ ವಿಜಯ್​ ಮಲ್ಯ ರಸ್ತೆಯ ಜೆಡಬ್ಲ್ಯೂ ಮ್ಯಾರಿಯೋಟ್ ಹೋಟೆಲ್​ನಲ್ಲಿ ತೆರೆಯಲಿದೆ. ಈ ಒಂದು ಬೆಳವಣಿಗೆ ರಾಜ್ಯದ ನಿವಾಸಿಗಳಿಗೆ ಯುಎಸ್ ವೀಸಾ ಬೇಕಾದಲ್ಲಿ ಇಲ್ಲಿಯೇ ಬಂದು ಪಡೆಯುವ ಸೌಲಭ್ಯ ನೀಡಲಾಗಿದೆ. ಈ ಮೊದಲು ಯುಎಸ್​ನ ವೀಸಾ ಬೇಕಾದಲ್ಲಿ ನಾವು ಮುಂಬೈ, ಚೆನ್ನೈ ಇಲ್ಲವೇ ಹೈದ್ರಾಬಾದ್​ಗೆ ಹೋಗಬೇಕಾಗಿತ್ತು. ಇನ್ಮುಂದೆ ಆ ತಾಪತ್ರಯ ಇರುವುದಿಲ್ಲ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ಇದನ್ನೂ ಓದಿ:ಬರೋಬ್ಬರಿ 11 ಕೋಟಿ ರೂಪಾಯಿಗೆ ಮಾರಾಟವಾಯ್ತು ಈ ಮೀನು..!

ಸದ್ಯ ರಾಯಭಾರಿ ಕಚೇರಿಗೆ ಒಂದು ಶಾಶ್ವತ ಕಚೇರಿ ಸಿದ್ಧವಾಗುವರೆಗೂ ಒಂದು ಸೀಮಿತ ಹಂತದ ಅಧಿಕಾರಿಳು ಇಲ್ಲಿ ಕಾರ್ಯ ನಿರ್ವಹಿಸಲಿದ್ದು. ಒಂದು ಮಿತಿಯಲ್ಲಿ ವೀಸಾಗಳನ್ನು ನೀಡಲಿದ್ದಾರೆ. ಒಂದ ಬಾರಿ ಸರ್ಕಾರ ರಾಯಭಾರಿ ಕಚೇರಿಗೆ ಶಾಶ್ವತವಾದ ಕಚೇರಿ ವ್ಯವಸ್ಥೆ ಮಾಡಿದಲ್ಲಿ ನಂತರ ಸಂಪೂರ್ಣವಾಗಿ ತನ್ನ ಕಾರ್ಯದಲ್ಲಿ ಈ ಕಚೇರಿ ಸಿಬ್ಬಂದಿ ತೊಡಗಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಇದನ್ನೂ ಓದಿ:ವಿಶ್ವಕ್ಕೆ ಕಾಲಿಟ್ಟ ಹುಡಗರನ್ನ ಪ್ರೀತಿಸುವ AI ರೋಬೋ.. ಇದರ ಹೆಸರೇನು, ಬೆಲೆ ಎಷ್ಟು?

Advertisment

2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಪ್ರವಾಸಕ್ಕೆ ಹೋದಾಗಲೇ ಈ ಒಂದು ಯೋಜನೆ ಘೋಷಣೆಯಾಗಿತ್ತಂತೆ. ಇಬ್ಬರು ನಾಯಕರು ಭಾರತದಲ್ಲಿ ಎರಡು ಕಡೆ ಹೊಸ ಯುಎಸ್ ರಾಯಭಾರಿ ಕಚೇರಿ ಸ್ಥಾಪನೆಯಾಗಬೇಕು ಎಂದು ಮಾತನಾಡಿಕೊಂಡಿದ್ದರು. ಅದರಲ್ಲಿ ಒಂದು ಬೆಂಗಳೂರು ಹಾಗೂ ಮತ್ತೊಂದು ಅಹ್ಮದಾಬಾದ್​ನಲ್ಲಿ ತೆರೆಯಬೇಕು ಎಂಬ ಬಗ್ಗೆ ಮಾತುಕತೆಗಳು ನಡೆದಿದ್ದವು. ಈಗ ಆ ಮಾತುಕತೆ ಜಾರಿಯಾಗುವ ಹಂತಕ್ಕೆ ಬಂದಿದ್ದು. ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಯುಎಸ್​​ನ ರಾಯಭಾರಿ ಕಚೇರಿ ತನ್ನ ಕಾರ್ಯವನ್ನು ಶುರು ಮಾಡಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment