ನ್ಯೂಯಾರ್ಕ್ ಜಿಲ್ಲಾ ನ್ಯಾಯಾಲಯದಿಂದ ಭಾರತ ಸರ್ಕಾರಕ್ಕೆ ಸಮನ್ಸ್
ಪನ್ನು ಹತ್ಯೆಗೆ ಸಂಚು ರೂಪಿಸುತ್ತಿರುವ ಆರೋಪದ ಹಿನ್ನೆಲೆ ಬಂದ ಸಮನ್ಸ್
ಸಮನ್ಸ್ನಲ್ಲಿ ಅಜಿತ್ ಧೋವಲ್ ಹೆಸರು ಸೇರಿ ಹಲವರ ಹೆಸರು ಉಲ್ಲೇಖ
ಅಮೆರಿಕದ ನ್ಯೂಯಾರ್ಕ್ನ ಜಿಲ್ಲಾ ನ್ಯಾಯಾಲಯ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ವಿರುದ್ಧ ಸಮನ್ಸ್ ಜಾರಿ ಮಾಡಿದೆ. ಖಲಿಸ್ತಾನದ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ನೀಡಿದ ದೂರಿನನ್ವಯ ಭಾರತ ಸರ್ಕಾರಕ್ಕೆ ಯುಎಸ್ನ ಕೋರ್ಟ್ ಸಮನ್ಸ್ ನೀಡಿದೆ. ಗುರುಪತ್ವಂತ್ ಸಿಂಗ್ ಪನ್ನು, ಭಾರತೀಯ ಗುಪ್ತಚರ ಇಲಾಖೆ ತನ್ನ ಹತ್ಯೆಗೆ ಬಹುದೊಡ್ಡ ಸಂಚು ರೂಪಿಸಿದೆ ಎಂದು ಅಮೆರಿಕದ ನ್ಯೂಯಾರ್ಕ್ನ ಜಿಲ್ಲಾ ನ್ಯಾಯಾಲಯದಲ್ಲಿ ಮೂಕದ್ದಮೆ ಹೂಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಈಗ ಭಾರತ ಸರ್ಕಾರಕ್ಕೆ ಸಮನ್ಸ್ ಜಾರಿ ಮಾಡಿದೆ.
ಇದನ್ನೂ ಓದಿ: ಜಸ್ಟ್ ಒಂದೇ 1 ರೂಪಾಯಿಗೆ ಸರ್ಕಾರಿ ಕೆಲಸ ಕಳೆದುಕೊಂಡ ಆಸ್ಪತ್ರೆ ಸಿಬ್ಬಂದಿ; ಕಾರಣ ಬಿಜೆಪಿ ಶಾಸಕ! VIDEO
ಸಮನ್ಸ್ನಲ್ಲಿ ಪ್ರಮುಖವಾಗಿ ಭಾರತ ಸರ್ಕಾರ, ಅಜಿತ್ ಧೋವಲ್, ಭಾರತದ ಬೇಹುಗಾರಿಕೆ ಸಂಸ್ಥೆಯಾದ ರಾನ ಮಾಜಿ ಮುಖ್ಯಸ್ಥ ಸಮಂತ್ ಗೋಯಲ್ ಹಾಗೂ ರಾ ಎಜೆಂಟ್ ವಿಕ್ರಮ್ ಯಾದವ್ ಹಾಗೂ ಭಾರತದ ಉದ್ಯಮಿ ನಿಖಿಲ್ ಗುಪ್ತಾ ಅವರ ಹೆಸರು ಉಲ್ಲೇಖವಾಗಿದೆ.
ಪನ್ನು ಮಾಡಿರುವ ಆರೋಪಗಳೇನು?
ಪನ್ನು ನ್ಯೂಯಾರ್ಕ್ ಜಿಲ್ಲಾ ನ್ಯಾಯಾಲಯಕ್ಕೆ ನೀಡಿರುವ ದೂರಿನಲ್ಲಿ ಭಾರತದ ರಾ ಎಜೆನ್ಸಿ ಈಗಾಗಲೇ ಸುಮಾರು 20 ಹತ್ಯೆಗಳನ್ನು ನಡೆಸಿದೆ. ಅದರ ಹಿಟ್ ಲಿಸ್ಟ್ನಲ್ಲಿ ನಾನು ಕೂಡ ಇದ್ದೇನೆ. ಈಗ ನನ್ನ ಹತ್ಯೆಗೂ ಕೂಡ ಪ್ಲಾನ್ ನಡೆಯುತ್ತಿದೆ ಎಂದು ದೂರಿದ್ದಾನೆ.
ಇದನ್ನೂ ಓದಿ:ಪ್ರಧಾನಿ ಮೋದಿ ಸರ್ಕಾರ ಶೀಘ್ರದಲ್ಲೇ ಪತನ ಆಗುತ್ತಾ? ಸ್ಫೋಟಕ ಭವಿಷ್ಯ ನುಡಿದ ಸಿಎಂ ಸಿದ್ದರಾಮಯ್ಯ
ಭಾರತ ಹಾಗೂ ಅಮೆರಿಕದ ಸ್ನೇಹದಲ್ಲಿ ಬಿರುಕು ಮೂಡಲಿದೆಯಾ?
ಸದ್ಯ ಭಾರತ ಸರ್ಕಾರಕ್ಕೆ ಅಮೆರಿಕದ ನ್ಯಾಯಾಲಯದಿಂದ ಬಂದಿರುವ ಸಮನ್ಸ್ ಉಭಯ ದೇಶಗಳ ನಡುವಿನ ಬಾಂಧ್ಯವಕ್ಕೆ ಸಂಚಕಾರ ತರಲಿದೆ ಎಂದೇ ಬಿಂಬಿಸಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ಸದ್ಯ ನಡೆದಿರುವ ಬೆಳವಣಿಗೆ ಭಾರತ ಹಾಗೂ ಅಮೆರಿಕದ ನಡುವಿನ ಬಾಂಧವ್ಯಕ್ಕೆ ಯಾವುದೇ ರೀತಿಯ ಅಡ್ಡಿ ಆಗಲ್ಲ ಎಂದಿದ್ದಾರೆ. ಈ ಬಗ್ಗೆ ಸ್ಪಷ್ಟಿಕರಣ ನೀಡಿರುವ ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎರಿಕ್ ಗ್ಯಾರ್ಸೆಟಿ ಈ ಒಂದು ವಿಷಯದಿಂದಾಗ ಎರಡೂ ದೇಶಗಳ ನಡುವಿನ ಬಾಂಧವ್ಯಕ್ಕೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ