/newsfirstlive-kannada/media/post_attachments/wp-content/uploads/2025/02/US_flight.jpg)
ವಿಶ್ವದ ದೊಡ್ಡಣ್ಣ ಮತ್ತೆ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದ್ದಾನೆ. ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಅಕ್ರಮ ವಲಸಿಗರ ಮೇಲೆ ಯುದ್ಧ ಸಾರಿದ್ದಾರೆ. ಇದರ ಜೊತೆಗೆ ಗಾಜಾ ಪಟ್ಟಿಯನ್ನು ವಶಪಡಿಸಿಕೊಳ್ಳುವ ಘೋಷಣೆ ಮಾಡಿ ಹಲ್​ಚಲ್ ಸೃಷ್ಟಿಸಿದ್ದಾರೆ.
ಮೇಕ್​ ಅಮೆರಿಕ ಗ್ರೇಟ್​ ಅಗೇನ್​.. ಅಮೆರಿಕವನ್ನು ಮತ್ತೊಮ್ಮೆ ಅತ್ಯುತ್ತಮಗೊಳಿಸೋಣ ಅನ್ನೋ ಘೋಷವಾಕ್ಯದಡಿ ಅಮೆರಿಕದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಡೊನಾಲ್ಡ್​ ಡ್ರಂಪ್​ ಅಕ್ಷರಶಃ ಸಂಚಲನವನ್ನೇ ಸೃಷ್ಟಿಸಿದ್ದಾರೆ. ಅಮೆರಿಕದಲ್ಲಿ ಬೀಡುಬಿಟ್ಟ ಅಕ್ರಮ ವಲಸಿಗರನ್ನು ಹುಡುಕಿ ಹುಡುಕಿ ಅವರವರ ದೇಶಗಳಿಗೆ ವಾಪಸ್ ಕಳಿಸುತ್ತಿದ್ದಾರೆ. ಇದು ಜಾಗತಿಕವಾಗಿ ಭಾರೀ ಹಲ್​ಚಲ್ ಸೃಷ್ಟಿಸಿದೆ.
/newsfirstlive-kannada/media/post_attachments/wp-content/uploads/2025/02/us-immigration-India.jpg)
ಅಕ್ರಮ ವಲಸಿಗರ ವಿರುದ್ಧ ಟ್ರಂಪ್​ ಕಠಿಣ ಕ್ರಮ
ಅಕ್ರಮ ವಲಸಿಗರ ವಿರುದ್ಧ ಅಮೆರಿಕದ ನೂತನ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಕಠಿಣ ಕ್ರಮ ಕೈಗೊಂಡಿದ್ದಾರೆ. ಅಮೆರಿಕದ ಗಲ್ಲಿ ಗಲ್ಲಿಗಳನ್ನು ಹುಡುಕಿ ಅಕ್ರಮ ನಿವಾಸಿಗಳನ್ನು ಅವರವರ ದೇಶಕ್ಕೆ ಗಡಿಪಾರು ಮಾಡುತ್ತಿದ್ದಾರೆ. ಈ ಪೈಕಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದ 104 ಜನರನ್ನು ಮೊನ್ನೆ ಗಡಿಪಾರು ಮಾಡಲಾಗಿದೆ. ನಿನ್ನೆ ಅಮೃತಸರಕ್ಕೆ ಭಾರತೀಯರನ್ನು ಹೊತ್ತ ಅಮೆರಿಕದ ಮಿಲಿಟರಿ ವಿಮಾನ ಸಿ-17 ಅವರೆಲ್ಲರನ್ನೂ ಹೊತ್ತು ಬಂದಿಳಿದಿದೆ.
104 ಭಾರತೀಯರು ವಾಪಸ್!
- 104 ಮಂದಿ ಭಾರತೀಯರ ಪೈಕಿ 79 ಪುರುಷರು, 25 ಮಂದಿ ಮಹಿಳೆಯರು
- ಹರಿಯಾಣ ಹಾಗೂ ಗುಜರಾತ್​ನಿಂದ ತಲಾ 33 ಮಂದಿ, ಪಂಜಾಬ್​ 30,
- ಮಹಾರಾಷ್ಟ್ರ, ಉತ್ತರ ಪ್ರದೇಶ ತಲಾ ಮೂವರು, ಚಂಡಿಗಢದ ಇಬ್ಬರು
- 104 ಮಂದಿಯ ದಾಖಲೆಗಳನ್ನು ಭಾರತ ಸರ್ಕಾರ ಪರಿಶೀಲನೆ ನಡೆಸಲಿದೆ
- ದಾಖಲೆ ಪರಿಶೀಲನೆ ಬಳಿಕ 104 ಮಂದಿಯನ್ನು ಮನೆಗೆ ಕಳಿಸುವ ಸರ್ಕಾರ
- ಆಯಾ ರಾಜ್ಯ ಸರ್ಕಾರಗಳಿಂದ ಕರೆದೊಯ್ಯಲು ಬಸ್​ಗಳ ವ್ಯವಸ್ಥೆ
- ಕೆಲವರು ಅಮೆರಿಕದಲ್ಲಿದ್ದರು ಅನ್ನೋ ವಿಷಯ ಮನೆಯವರಿಗೆ ಗೊತ್ತಿಲ್ಲ
ಗಾಜಾ ಪಟ್ಟಿಯನ್ನು ಸ್ವಾಧೀನಕ್ಕೆ ಪಡೆಯುತ್ತೇನೆಂದ ಟ್ರಂಪ್​!
ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಜೊತೆಗೆ ಟ್ರಂಪ್ ಮತ್ತೊಂದು ಸಂಚಲನಕಾರಿ ಘೋಷಣೆ ಮಾಡಿದ್ದಾರೆ. ಇಸ್ರೇಲ್-ಹಮಾಸ್ ನಡುವಿನ ಕದನ ವಿರಾಮದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಟ್ರಂಪ್ ಇದೀಗ ಇಸ್ರೇಲ್​ನ ಗಾಜಾ ಪಟ್ಟಿ ಸ್ವಾಧೀನಕ್ಕೆ ಪ್ಲಾನ್ ಮಾಡಿದ್ದಾರೆ. ಪುನರಾಭಿವೃದ್ಧಿ ಯೋಜನೆಯಡಿ ಅಮೆರಿಕ, ಗಾಜಾ ಪಟ್ಟಿಯನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.ಅಮೆರಿಕಕ್ಕೆ ಭೇಟಿ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆಗಿನ ಮಾತುಕತೆ ಬಳಿಕ ಟ್ರಂಪ್ ಈ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಮನೆಯಲ್ಲಿ ಮದುವೆ ಸಂಭ್ರಮ; ಫೋಟೋಸ್ ಇಲ್ಲಿವೆ!
/newsfirstlive-kannada/media/post_attachments/wp-content/uploads/2025/01/TRUMP-9.jpg)
ಟ್ರಂಪ್ ಹೊಸ ಪ್ರಸ್ತಾಪ ವಿಶ್ವವನ್ನೇ ನಿಬ್ಬೆರಗಾಗುವಂತೆ ಮಾಡಿದೆ. ಈ ಯೋಜನೆಯಡಿ ಪ್ಯಾಲೆಸ್ತೀನಿಯರನ್ನು ಬೇರೆಡೆ ಪುನರ್ವಸತಿ ಮಾಡಲಾಗುವುದು ಎಂದು ಹೇಳಿದ್ದಾರೆ. ಆದ್ರೆ ಹಮಾಸ್ ಇದನ್ನು ಖಂಡಿಸಿದೆ. ಗಾಜಾ ಪಟ್ಟಿಯಲ್ಲಿರುವ ನಮ್ಮ ಜನರು ಈ ಯೋಜನೆ ಜಾರಿಗೆ ತರಲು ಬಿಡಲ್ಲ ಎಂದು ಗುಟುರು ಹಾಕಿದೆ.
ಅಮೆರಿಕದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಟ್ರಂಪ್ ಸಂಚಲನಾತ್ಮಕ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಅಕ್ರಮ ವಲಸಿಗರನ್ನು ಗಡಿಪಾರು ಮಾಡುತ್ತಿದ್ದಾರೆ. ಇದರ ಜೊತೆಗೆ ಗಾಜಾ ಪಟ್ಟಿಯನ್ನೂ ಸ್ವಾಧೀನಪಡಿಸಿಕೊಳ್ಳುವ ಘೋಷಣೆ ಮಾಡಿದ್ದಾರೆ. ಇದು ವಿಶ್ವದಾದ್ಯಂತ ಹಲ್​ಚಲ್ ಸೃಷ್ಟಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us