/newsfirstlive-kannada/media/post_attachments/wp-content/uploads/2025/01/TRUMP-1.jpg)
ಡೊನಾಲ್ಡ್ ಟ್ರಂಪ್ (Donald Trump) ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಲಿದ್ದಾರೆ. ಟ್ರಂಪ್ ಅವರು ಇಂದು ಅಮೆರಿಕದ 47ನೇ ಅಧ್ಯಕ್ಷರಾಗಿ (US President) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭವು ವಾಷಿಂಗ್ಟನ್ ಡಿಸಿಯ ಕ್ಯಾಪಿಟಲ್ ಬಿಲ್ಡಿಂಗ್​​ನಲ್ಲಿ ನಡೆಯಲಿದೆ.
ಟ್ರಂಪ್ ಜೊತೆಗೆ ಜೆಡಿ ವ್ಯಾನ್ಸ್ (JD Vance) ಅಮೆರಿಕ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಮೆರಿಕದ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್​ (John Roberts) ಟ್ರಂಪ್‌ಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
ಎಷ್ಟು ಗಂಟೆಗೆ ಕಾರ್ಯಕ್ರಮ..?
ಅಮೆರಿಕ ಕಾಲಮಾನದ ಪ್ರಕಾರ ಮಧ್ಯಾಹ್ನ 12 ಗಂಟೆಗೆ ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 10:30ಕ್ಕೆ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಡೊನಾಲ್ಡ್ ಟ್ರಂಪ್ ಪ್ರಸ್ತುತ ವಾಷಿಂಗ್ಟನ್ ಡಿಸಿಯಲ್ಲಿದ್ದಾರೆ.
ಇದನ್ನೂ ಓದಿ: ಟ್ರಂಪ್​ಗೂ ನಡುಕ, ಇಡೀ ಅಮೆರಿಕ ಗಢಗಢ.. ಪ್ರಮಾಣ ವಚನ ಸ್ವೀಕಾರದ ಸ್ಥಳವನ್ನೇ ಬದಲಾಯಿಸಿಬಿಟ್ಟ..!
/newsfirstlive-kannada/media/post_attachments/wp-content/uploads/2024/11/Donald-Trump.jpg)
ಇದೇ ಮೊದಲ ಬಾರಿಗೆ..
ಟ್ರಂಪ್ರ ಪ್ರಮಾಣಚನ ಸ್ವೀಕಾರಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ಆದರೆ ಅಮೆರಿಕದಲ್ಲಿ ಚಳಿರಾಯ ನಡುಗಿಸುತ್ತಿದ್ದಾರೆ. ಹೀಗಾಗಿ ಅಮೆರಿಕದ 40 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪ್ರಮಾಣಚನ ಸ್ವೀಕಾರ ಕಾರ್ಯಕ್ರಮದ ಸ್ಥಳ ಬದಲಾಗಿದೆ. ಸಾಂಪ್ರದಾಯಿಕವಾಗಿ ಕ್ಯಾಪಿಟಲ್ ಬಿಲ್ಡಿಂಗ್​ನ ಪಶ್ಚಿಮ ಮುಂಭಾಗದಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯುತ್ತಿತ್ತು. ತೀವ್ರ ಚಳಿ ಮತ್ತು ಅತ್ಯಂತ ಕೆಟ್ಟ ವಾತಾವರಣದ ಕಾರಣ US ಕ್ಯಾಪಿಟಲ್​ನ ರೊಟುಂಡಾದಲ್ಲಿ (US capitol rotunda) ನಡೆಯಲಿದೆ.
ಇಂದು ಡಿಸಿಯಲ್ಲಿ ತಾಪಮಾನವು ಮೈನಸ್ 4 ಡಿಗ್ರಿಗಳಿಂದ ಮೈನಸ್ 11 ಡಿಗ್ರಿಗಳವರೆಗೆ ತಾಪಮಾನ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಟ್ರಂಪ್‌ಗಿಂತ ಮೊದಲು 1985ರಲ್ಲಿ, ರೊನಾಲ್ಡ್ ರೇಗನ್ ಎರಡನೇ ಬಾರಿಗೆ US ಅಧ್ಯಕ್ಷರಾಗಿ ಒಳಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ನಂತರ 1989ರಲ್ಲಿ ಜಾರ್ಜ್ ಹೆಚ್.ಡಬ್ಲ್ಯೂ ಬುಷ್, 1993-1997 ರಲ್ಲಿ ಬಿಲ್ ಕ್ಲಿಂಟನ್, 2001-2005 ರಲ್ಲಿ ಜಾರ್ಜ್ ಬುಷ್, 2009-2013 ರಲ್ಲಿ ಬರಾಕ್ ಒಬಾಮಾ ಮತ್ತು 2017 ರಲ್ಲಿ ಡೊನಾಲ್ಡ್ ಟ್ರಂಪ್ ಕ್ಯಾಪಿಟಲ್ ಕಟ್ಟಡದ ಪಶ್ಚಿಮ ಮುಂಭಾಗದಿಂದ ಪ್ರಮಾಣ ವಚನ ಸ್ವೀಕರಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us