Advertisment

ಅಮೆರಿಕಾದ ಕನಸುಗಳು ಕರಗುತ್ತಿವೆಯೇ? ಕೋಟಿ ಸಂಬಳವಿದ್ದರೂ ನೆಮ್ಮದಿಯಿಲ್ಲ ಅಂತಿರೋದೇಕೆ ಭಾರತೀಯರು?

author-image
Gopal Kulkarni
Updated On
ಅಮೆರಿಕಾದ ಕನಸುಗಳು ಕರಗುತ್ತಿವೆಯೇ? ಕೋಟಿ ಸಂಬಳವಿದ್ದರೂ ನೆಮ್ಮದಿಯಿಲ್ಲ ಅಂತಿರೋದೇಕೆ ಭಾರತೀಯರು?
Advertisment
  • ಭಾರತೀಯರ ಆ ಅಮೆರಿಕಾದ ಬದುಕಿನ ಕನಸು ಕಮರುತ್ತಿದೆಯಾ?
  • ಕೋಟಿ ಸಂಬಳವಿದ್ದರೂ ಸಾಕಾಗುತ್ತಿಲ್ಲ ಎನ್ನುತ್ತಿರುವುದೇಕೆ ಜನರು?
  • ಪಿಯೂಷ್​ ಮೊಂಗಾ ಮಾಡಿರುವ ಸಂದರ್ಶನದಲ್ಲಿ ಜನರು ಹೇಳಿದ್ದೇನು?

ಅಮೆರಿಕಾದಲ್ಲಿ ಜಾಬ್ ತೆಗೆದುಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕನಸು. ಸಾಫ್ಟ್​ವೇರ್ ಕ್ಷೇತ್ರದಲ್ಲಿ ಮಿಂಚಿ ಇಲ್ಲಿಂದ ದೊಡ್ಡ ಸಂಬಳಕ್ಕೆ ಅಮೆರಿಕಾಗೆ ಹೋಗಿ. ಅಲ್ಲಿಯೇ ಐಷಾರಾಮಿ ಬದುಕನ್ನು ಬದುಕಿಕೊಂಡು ಸಾಗಿಬಿಡಬೇಕು ಎಂಬುದು ಅನೇಕ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವವರ ಕನಸು. ಆದ್ರೆ ಈಗ ಕಾಲ ಬದಲಾದಂತೆ ಕಾಣುತ್ತಿದೆ. ಅಮೆರಿಕಾದ ಕನಸುಗಳು ಕಮರುತ್ತಿವೆಯಾ ಅನ್ನುವ ಅನುಮಾನಗಳು ಮೂಡಿವೆ. ತಿಂಗಳಿಗೆ 1 ಲಕ್ಷ ಡಾಲರ್ ಅಂದ್ರೆ ಭಾರತೀಯ ರೂಪಾಯಿಯಲ್ಲಿ 88 ಲಕ್ಷ ರೂಪಾಯಿ ಸಂಬಳ ಇರುವವರು ಕೂಡ ಸಾಕು ಅಮೆರಿಕಾ ಬೇಕು ಭಾರತ ಅನ್ನುತ್ತಿದ್ದಾರೆ.

Advertisment

ಇದನ್ನೂ ಓದಿ:ರಷ್ಯನ್ನರು ಚುಂಬಿಸುತ್ತಾರೆ, ತಬ್ಬಿಕೊಳ್ಳುತ್ತಾರೆ.. ಆದರೆ ಕೈ ಮಾತ್ರ ಕುಲುಕುವುದಿಲ್ಲ; ಯಾಕೆ ಗೊತ್ತಾ?

ಪಿಯೂಷ್ ಮೊಂಗಾ ಎಂಬುವವರು ಸ್ಯಾಲರಿ ಸ್ಕೇಲ್ ಎಂಬ ಒಂದು ಇನ್​ಸ್ಟಾಗ್ರಾಮ್ ಖಾತೆ ಹೊಂದಿದ್ದಾರೆ. ಅವರು ಸಂದರ್ಶಿಸಿದ ಅಮೆರಿಕಾದಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಯುವಕ ಯುವತಿಯರು, ನಮಗೆ ಇಷ್ಟು ಸಂಬಳವಿದ್ದರೂ ಕೂಡ ನಾವಿಲ್ಲಿ ನೆಮ್ಮದಿಯಿಂದ ಇಲ್ಲ ಎಂದೇ ಹೇಳುತ್ತಿದ್ದಾರೆ. ಅನೇಕರು ಇದೇ ಸಂಬಳದಲ್ಲಿ ನಾನು ಭಾರತದಲ್ಲಿ ಆರಾಮಾಗಿ ಇರಬಲ್ಲೆ ಎಂಬಂತಹ ನುಡಿಗಳನ್ನು ನುಡಿದಿದ್ದಾರೆ.

ಇದನ್ನೂ ಓದಿ: ಪಾರ್ಲರ್​​ಗೆ ಸಾವಿರಾರು ರೂ ಕೊಡೋದು ಬೇಕಾಗಿಲ್ಲ; ಮನೆಯಲ್ಲೇ ಈ ವಸ್ತುಗಳಿಂದ ಫೇಶಿಯಲ್ ಮಾಡಿ..!

Advertisment

ಪಿಯೂಷ್ ಮೊಂಗಾ ಮಾಡಿರುವ ಸಂದರ್ಶನದ ವಿಡಿಯೋ ತುಣುಕುಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸೌಂಡ್ ಮಾಡುತ್ತಿವೆ. ಲಕ್ಷಾಂತರ ವೀವ್ಸ್​ಗಳನ್ನು ಪಡೆಯುತ್ತಿವೆ. ಪಾರ್ಮಾಸೆಟಿಕಲ್ ಕಂಪನಿಯಲ್ಲಿ ಚೈನ್ ಸಪ್ಲೈ ಮ್ಯಾನೆಜ್ಮೆಂಟ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯುವತಿಯೊಬ್ಬಳು ಮಾತನಾಡಿ. ನಾನು ಐದು ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ ಆರು ಅಂಕಿಗಳ ಸಂಬಳವನ್ನು ಪಡೆಯುತ್ತಿದ್ದೇನೆ. ಆದ್ರೆ ಅದು ಕೇವಲ ಮೂಲಭೂತ ಸೌಕರ್ಯಗಳಿಗೆ ಮಾತ್ರ ಸೀಮಿತವಾಗಿದೆಯೇ ಹೊರತು ಹೆಚ್ಚಿನದು ಏನೂ ಗಳಿಸಲು ಆಗುತ್ತಿಲ್ಲ ಎಂದು ಹೇಳಿದ್ದಾರೆ. ಕಂಪ್ಯೂಟರ್ ಸೈನ್ಸ್​ನಲ್ಲಿ ಮಾಸ್ಟರ್ ಡಿಗ್ರಿ ಮಾಡಿರುವ ಯುವತಿ ಸಪ್ಲೈ ಚೈನ್ ಅನಾಲಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಬಳ ಭಾರತೀಯ ರೂಪಾಯಿಯಲ್ಲಿ ಕೋಟಿ ರೂಪಾಯಿ ಬರುತ್ತದೆ. ಆದರೂ ಅದು ಕೇವಲ ನಮ್ಮ ಅವಶ್ಯಕ ಸೌಕರ್ಯಗಳಿಗೆ ಮಾತ್ರ ಸೀಮಿತಗೊಂಡಿದ್ದು. ಹೆಚ್ಚಿನದು ಏನನ್ನು ಪಡೆಯಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.

ಈ ತರಹ ಹಲವು ಜನರು ಯುಎಸ್​ ಬದುಕನ್ನು ಬೇಸರ ಎನ್ನುತ್ತಿದ್ದಾರೆ. ಗಳಿಸಿದಷ್ಟೇ ಇಲ್ಲಿ ಉಳಿಸಲು ಸಾಧ್ಯವಾಗುತ್ತಿಲ್ಲ. ಇದೇ ಸಂಬಳದಲ್ಲಿ ನಾವು ಭಾರತದಲ್ಲಿ ನೆಮ್ಮದಿಯ ಬದುಕು ಬದುಕಬಹುದು. ಇಲ್ಲಿ ಇಷ್ಟು ಸಂಬಳವಿದ್ದರೂ ಕೂಡ ನೆಮ್ಮದಿಯೆನ್ನುವುದು ಮರೀಚಿಕೆಯಾಗಿದೆ ಎಂದೇ ಹೇಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment