/newsfirstlive-kannada/media/post_attachments/wp-content/uploads/2024/09/kamala_harris.jpg)
ಕಮಲಾ ಹ್ಯಾರಿಸ್, ಈ ಬಾರಿ ಯುಎಸ್ ಚುನಾವಣೆಯಲ್ಲಿ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ ಹೆಸರು. ಜೋ ಬೈಡನ್ ಬಿಟ್ಟರೆ ಟ್ರಂಪ್ಗೆ ಟಕ್ಕರ್ ಕೊಡಬಹುದಾದ ವರ್ಚಸ್ಸು ಕಮಲಾ ಹ್ಯಾರಿಸ್ಗೆ ಇದೆ ಎಂದು ನಂಬಲಾಗಿತ್ತು. ಅದರಲ್ಲಿಯೂ ಮೊದಲ ಬಾರಿ ಭಾರತೀಯ ಮೂಲದ ಮಹಿಳೆಯೊಬ್ಬರು ಅಮೆರಿಕದ ಅಧ್ಯಕ್ಷ ಗಾದೆಯ ಮೇಲೆ ಕೂರುವ ಅವಕಾಶ ಬಂದಿದೆ. ಈ ಅವಕಾಶವನ್ನು ಯುಎಸ್ನಲ್ಲಿ ನೆಲೆಸಿರುವ ಭಾರತೀಯ ಮತದಾರರು ಹುಸಿಯಾಗಲು ಬಿಡುವುದಿಲ್ಲ. ಅತಿಹೆಚ್ಚು ವೋಟುಗಳು ಭಾರತೀಯ ಅಮೆರಿಕನ್ನರಿಂದ ಅದರಲ್ಲೂ ಮಹಿಳೆಯೆರಿಂದ ಹೆಚ್ಚು ಮತಗಳು ಬರಲಿವೆ ಎಂದೇ ನಂಬಲಾಗಿತ್ತು.
ಇದನ್ನೂ ಓದಿ:ಯುಎಸ್ ಚುನಾವಣೆಯಲ್ಲಿ ಹೊಸ ಇತಿಹಾಸ ಬರೆದ ಅಮೆರಿಕನ್ ಭಾರತೀಯರು; 6 ಕ್ಷೇತ್ರಗಳಲ್ಲಿ ಭರ್ಜರಿ ಜಯ
ಚುನಾವಣೆಗು ಮುನ್ನ ನಡೆದ ಹಲವು ಸಮೀಕ್ಷೆಗಳು ಕೂಡ ಅದನ್ನೇ ಹೇಳಿದ್ದವು. ಆದ್ರೆ ಸದ್ಯದ ಟ್ರೆಂಡ್ ನೋಡಿದ್ರೆ ಭಾರತೀಯ ಮೂಲದ ಮತದಾರರು ಹ್ಯಾರಿಸ್ ಕೈ ಹಿಡಿದಿಲ್ಲ.ಟ್ರಂಪ್ಗೆ ಜೈ ಎಂದಿದ್ದಾರೆ ಎಂದು ಹೇಳಲಾಗುತ್ತಿದೆ. ಸಮೀಕ್ಷೆಗಳ ಪ್ರಕಾರ ಶೇಕಡಾ 61 ರಷ್ಟು ಭಾರತೀಯ ಮೂಲದ ಮಹಿಳೆಯರು ಕಮಲಾ ಹ್ಯಾರಿಸ್ಗೆ ವೋಟು ಹಾಕಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ 2020ರ ಚುನಾವಣೆಗೆ ಹೋಲಿಸಿ ನೋಡಿದ್ರೆ ಈ ಬಾರಿ ಡೆಮಾಕ್ರಟಿಕ್ ಪಕ್ಷಕ್ಕೆ 4 ಪರ್ಸೆಂಟ್ ಕಡಿಮೆ ವೋಟುಗಳು ಬಂದಿವೆ. ಒಂದು ಹಂತದಲ್ಲಿ ನೋಡಿದ್ರೆ ಕಮಲಾ ಹ್ಯಾರಿಸ್ ಭಾರತೀಯ ಮೂಲದ ಅಮೆರಿಕನ್ ಸಮುದಾಯದೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಳ್ಳಲೇ ಇಲ್ಲ. ಅವರು ತಮ್ಮನ್ನು ತಾವು ಭಾರತೀಯ ಮೂಲದವಳು ಎಂದು ಹೆಮ್ಮೆಯಿಂದ ಎಲ್ಲಿಯೂ ಕೂಡ ಹೇಳಿಕೊಳ್ಳಲಿಲ್ಲ. ಅವರಿಗೆ ನೀಡಬೇಕಾದ ಪ್ರಧಾನ್ಯತೆ ನೀಡಲಿಲ್ಲ. ಈ ಕಾರಣದಿಂದ ಭಾರತೀಯ ಅಮೆರಿಕನ್ರು ಕಮಲಾ ಹ್ಯಾರಿಸ್ನಿಂದ ಮತದಾನದ ಸಮಯದಲ್ಲಿ ಅಂತರ ಕಾಯ್ದುಕೊಂಡರು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:Trump: ಡೊನಾಲ್ಡ್ ಟ್ರಂಪ್ ಗೆಲುವಿಗೆ ಕಾರಣವೇನು? ಮೊದಲ ವಿಕ್ಟರಿ ಭಾಷಣದಲ್ಲಿ ಹೇಳಿದ್ದೇನು?
ಹೀಗೆ ಹಲವಾರು ಕಾರಣಗಳಿಂದ, ಸ್ವಯಂ ಕೃತ ಅಪರಾಧದಿಂದ ಕಮಲಾ ಹ್ಯಾರಿಸ್ ಭಾರತೀಯ ಮೂಲದವರ ಮತಗಳನ್ನು ಕಳೆದುಕೊಂಡರು. ಟ್ರಂಪ್ ಈ ವಿಚಾರದಲ್ಲಿ ಕಮಲಾ ಹ್ಯಾರಿಸ್ ಮಾಡಿದ ತಪ್ಪನ್ನು ಮಾಡಲಿಲ್ಲ. ಭಾರತೀಯ ಮೂಲದ ಮತಗಳನ್ನು ಸೆಳೆಯಬೇಕಾ ಎಲ್ಲಾ ಕಾರ್ಯಗಳನ್ನು ಮಾಡಿದರು. ಅದರಲ್ಲೂ ಹಿಂದೂ ಮತಗಳನ್ನು ಸೆಳೆದುಕೊಳ್ಳಲುನ ಪಕ್ಕಾ ಭಾರತೀಯ ಸಂಪ್ರದಾಯದ ವೇಷ ಧರಿಸಿ ಕ್ಯಾಂಪೇನ್ ಮಾಡಿದರು. ಮತದಾರರಿಗೆ ಹತ್ತಿರವಾಗಲು ಏನು ಬೇಕೋ ಎಲ್ಲವನ್ನು ಕೂಡ ಟ್ರಂಪ್ ಮಾಡಿದ್ದರಿಂದ ಸಹಜವಾಗಿ ಭಾರತೀಯ ಮೂಲದ ಅಮೆರಿಕನ್ ಸಮದಾಯ ಟ್ರಂಪ್ರತ್ತ ವಾಲಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ