/newsfirstlive-kannada/media/post_attachments/wp-content/uploads/2024/11/US_POLL.jpg)
ಇವತ್ತು ಇಡೀ ಜಗತ್ತು ಲುಕ್ ಈಸ್ಟ್ ಎನ್ನುವಂತಾಗಿದೆ. ಕಾರಣ ಏನಪ್ಪ ಅಂದ್ರೆ ವಿಶ್ವಕ್ಕೆ ದೊಡ್ಡಣ್ಣನೆನಿಸಿರುವ ಅಮೆರಿಕಕ್ಕೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ನಿರ್ಣಾಯಕ ದಿನ. ಇವತ್ತು ಅಮೆರಿಕದೆಲ್ಲೆಡೆ ಮತದಾನ ಹಬ್ಬ ನಡೆಯಲಿದೆ. ಇವತ್ತು ಮುಂಜಾನೆಯೇ ಮತಹಬ್ಬಕ್ಕೆ ತೋರಣ ಕಟ್ಟಲಾಗಿದೆ. ಟ್ರಂಪ್-ಕಮಲಾ ಜಿದ್ದಾಜಿದ್ದಿಯಲ್ಲಿ ಗೆಲುವಿನ ತೋರಣ ಕಟ್ಟುವವರು ಯಾರು ಅನ್ನೋದು ಇಂದು ನಿರ್ಧಾರವಾಗಲಿದೆ.
ಇದನ್ನೂ ಓದಿ: US Elections 2024: ಅಮೆರಿಕಾದ ಭಾರತೀಯ ಮಹಿಳೆಯರ ಒಲವು ಯಾರ ಕಡೆಗೆ? ಚುನಾವಣೆಗೆ ಹೊಸ ಟ್ವಿಸ್ಟ್!
4 ವರ್ಷಗಳಿಗೊಮ್ಮೆ ನಡೆಯಲಿರುವ ಅಮೆರಿಕ ಚುನಾವಣೆಗೆ ಇಂದು ನಿರ್ಣಾಯಕ ದಿನ. ಅಮೆರಿಕ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಯಶಸ್ವಿ ಆಡಳಿತ ನಡೆಸಿದ್ದು ಅವರ ಉತ್ತರಾಧಿಕಾರಿಯಾಗಿ ಭಾರತೀಯ ಮೂಲದ ಸಂಜಾತೆ ಕಮಲಾ ಹ್ಯಾರಿಸ್ ಕಣದಲ್ಲಿದ್ದಾರೆ. ಅತ್ತ ರಿಪಬ್ಲಿಕನ್ ಪಕ್ಷದಿಂದ 2ನೇ ಬಾರಿಗೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರೋ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ದೊಡ್ಡಣ್ಣನಾಗುವ ಕನವರಿಕೆಯಲ್ಲಿದ್ದಾರೆ. ಇಡೀ ವಿಶ್ವದ ಚಿತ್ತ ಅಮೆರಿಕದತ್ತ ನೆಟ್ಟಿದೆ.
ಇಂದು ದೊಡ್ಡಣ್ಣನ ಮನೆಯಲ್ಲಿ ಮತ ಕದನ!
ಇಡೀ ಜಗತ್ತಿನ ಚಿತ್ತ ಈಗ ಅಮೆರಿಕದತ್ತ ತಿರುಗಿದೆ. ಅಮೆರಿಕ ಮುನ್ನಡೆಸುವ ಮುಂದಿನ ಸಾರಥಿ ಯಾರು ಎಂಬ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ. ಕಮಲಾ ಹ್ಯಾರಿಸ್ ಅಥವಾ ಡೊನಾಲ್ಡ್ ಟ್ರಂಪ್ ಅವರಲ್ಲಿ ಯಾರು ಹಿತವರು ಅನ್ನೋದನ್ನು ಅಮೆರಿಕದ ಮತದಾರ ಪ್ರಭುಗಳು ನಿರ್ಧರಿಸಲಿದ್ದಾರೆ.
7 ಸ್ವಿಂಗ್ ರಾಜ್ಯಗಳಲ್ಲಿ ಟ್ರಂಪ್‌ಗೆ ಮುನ್ನಡೆ!
ಜಗತ್ತಿನ ಯಾವುದೇ ದೇಶ ತನ್ನ ನೆಲದ ಚುನಾವಣೆ ಬಳಿಕ ಅತಿಹೆಚ್ಚು ತಲೆಕೆಡಿಸಿಕೊಳ್ಳುವುದು ಅಮೆರಿಕದ ಎಲೆಕ್ಷನ್ ಬಗ್ಗೆ. ಇಂದು ಸೂರ್ಯ ಅಸ್ತಮಿಸಿ, ನಾಳೆ ಬೆಳಗಾಗುವ ಹೊತ್ತಿಗೆ ಅಮೆರಿಕ ಚುನಾವಣೆಗೆ ತೋರಣ ಕಟ್ಟಲಾಗಿರುತ್ತೆ. ಟ್ರಂಪ್-ಕಮಲಾ ಹ್ಯಾರಿಸ್ ಮಧ್ಯೆ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಗೆಲ್ಲೋದು ಯಾರು ಎಂಬ ಲೆಕ್ಕಾಚಾರ ಶುರುವಾಗಿದೆ. ಮತದಾನಕ್ಕೆ ಒಂದು ದಿನ ಮುನ್ನ ಇಬ್ಬರು ಸ್ಪರ್ಧಿಗಳು ಬಿರುಸಿನ ಕೊನೆಯ ಹಂತದ ಪ್ರಚಾರ ನಡೆಸಿದ್ದಾರೆ.
ಇದನ್ನೂ ಓದಿ: ತಿರುಪತಿ ದೇವಸ್ಥಾನದಿಂದ ಅರ್ಜಿ ಆಹ್ವಾನ.. ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ TTD
ಅಮೆರಿಕದಲ್ಲಿ ಮತ ಹಬ್ಬ!
ಅಮೆರಿಕದಲ್ಲಿರುವುದು 50 ರಾಜ್ಯಗಳು. ನಮ್ಮಂತೆಯೇ ಅಲ್ಲಿಯೂ ಪ್ರತಿ ರಾಜ್ಯದ ಸ್ಥಾನಗಳನ್ನು ಜನಸಂಖ್ಯೆಗೆ ಅನುಗುಣವಾಗಿ ನಿಗದಿಪಡಿಸಲಾಗಿದೆ. ನಮ್ಮಲ್ಲಿ ಉತ್ತರ ಪ್ರದೇಶವು 80 ಲೋಕಸಭಾ ಸ್ಥಾನ ಹೊಂದಿರುವಂತೆ, ಅಮೆರಿಕದ ರಾಜಕೀಯಕ್ಕೆ ಕ್ಯಾಲಿಫೋರ್ನಿಯಾವೇ ಉತ್ತರಪ್ರದೇಶ. ಗರಿಷ್ಠ 54 ಸ್ಥಾನಗಳ ಹೊಂದಿದ ರಾಜ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ