/newsfirstlive-kannada/media/post_attachments/wp-content/uploads/2024/10/Gold-Rate.jpg)
ನಾಳೆ ಅಂದ್ರೆ ನವೆಂಬರ್ 5 ರಂದು ಅಮೆರಿಕಾದಲ್ಲಿ ಎಲೆಕ್ಷನ್ ನಡೆಯಲಿದೆ( ಭಾರತದಲ್ಲಿ ನವೆಂಬರ್ 6ಕ್ಕೆ) ಈಗಾಗಲೇ ಚಿನ್ನದ ದರದಲ್ಲಿ ಅನೇಕ ರೀತಿಯ ಏರಿಳಿತಗಳನ್ನು ನಾವು ಕಾಣುತ್ತಿದ್ದೇವೆ. ಅಮೆರಿಕಾದ ಈ ಚುನಾವಣೆಯೂ ಕೂಡ ಚಿನ್ನದ ದರದ ಮೇಲೆ ವಿಪರೀತ ಪ್ರಭಾವ ಬೀರಲಿದೆ ಎಂದೇ ಹೇಳಲಾಗುತ್ತಿದೆ.
ಕಳೆದ ದಿನ ಅಂದ್ರೆ ಸೋಮವಾರ ನವೆಂಬರ್ 3 ರಂದು ಭಾರತೀಯ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ದರಲ್ಲಿ ಪ್ರತಿ 10 ಗ್ರಾಂಗೆ ಸುಮಾರು 485 ರೂಪಾಯಿ ಇಳಿಕೆ ಕಂಡಿತ್ತು. ಈ ಒಂದು ಇಳಿಕೆ ಜಾಗತಿಕ ಮಾರುಕಟ್ಟೆಯ ಮೇಲೆ, ಹೂಡಿಕೆದಾರರ ಮೇಲೆ ಹಾಗೂ ಆರ್ಥಿಕ ನೀತಿಯ ಮೇಲೆ ದೊಡ್ಡ ಪ್ರಭಾವ ಬೀರಿತ್ತು.
ಇದನ್ನೂ ಓದಿ:ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಕ್ಷಣಗಣನೆ; ಯಾರ ಪಾಲಿಗೆ ವೈಟ್ಹೌಸ್ ಅರಸೊತ್ತಿಗೆ?
ಜಾಗತಿಕವಾಗಿಯೂ ಕೂಡ ಚಿನ್ನದ ದರದಲ್ಲಿ ಸಣ್ಣದಾಗಿ ಇಳಿಕೆ ಕಂಡುಬಂದಿತ್ತು. ಶೇಕಡಾ 0.08ರಷ್ಟು ಇಳಿಕೆ ಕಂಡು ಬಂದಿದೆ. ಅಂದ್ರೆ ಪ್ರತಿ ಔನ್ಸ್ ಅಂದ್ರೆ 28 ಗ್ರಾಂಗೆ ಸುಮಾರು 2747 ಯುಎಸ್ ಡಾಲರ್ ಅಂದ್ರೆ ಭಾರತೀಯ ರೂಪಾಯಿಗಳಲ್ಲಿ 2 ಲಕ್ಷ 31 ಸಾವಿರ ರೂಪಾಯಿಗೂ ಹೆಚ್ಚು ಇಳಿಕೆ ಕಂಡು ಬಂದಿದೆ. ಇದೆ ಸಮಯದಲ್ಲಿ ಈಗ ಯುಎಸ್ನಲ್ಲಿ ಚುನಾವಣೆಯ ಕಾವು ಜೋರಾಗಿದೆ. ಕೆಲವು ಮಾರುಕಟ್ಟೆಯ ವಿಶ್ಲೇಷಕರು ಹೇಳುವ ಪ್ರಕಾರ ಚುನಾವಣೆಯ ಸಮಯದಲ್ಲಿ ಚಿನ್ನದ ದರವನ್ನು ಕೊಂಚ ಮಟ್ಟಿಗೆ ಏರಿಕೆಯಾಗುವ ಸಂಭವವ ಇದೆ ಎಂದು ಹೇಳುತ್ತಿದ್ದಾರೆ. ಕೆಎಂಸಿ ಟ್ರೇಡ್ನ ಮಾರುಕಟ್ಟೆ ವಿಶ್ಲೇಷಕ ಟಿಮ್ ವಾಟರರ್ ಹೇಳುವ ಪ್ರಕಾರ ಅಮೆರಿಕಾದ ಚುನಾವಣೆ ಚಿನ್ನದ ದರದ ಮೇಲೆ ದೊಡ್ಡ ಪ್ರಭಾವ ಬೀರಲಿದೆ ಎಂದಿದ್ದಾರೆ.
ಇದನ್ನೂ ಓದಿ:ಮ್ಯಾಚಿಂಗ್ ಬ್ಯಾಗ್, ಮೇಕಪ್, ಬಾಯ್ ಫ್ರೆಂಡ್.. ಸೌದಿ ಮಿಲಿಯನೇರ್ ಗಂಡನಿಂದ ಹೆಂಡತಿಗೆ 5 ಕಠಿಣ ರೂಲ್ಸ್!
ಆರಂಭಿಕ ವಾರದಲ್ಲಿ ಡಾಲರ್ ಕೊಂಚ ಆಕರ್ಷಣೆ ಕಳೆದುಕೊಂಡಿದೆ. ಸದ್ಯ ಡಾಲರ್ ಇಂಡೆಕ್ಸ್ 0.5 ರಷ್ಟು ಕುಸಿತ ಕಂಡಿದೆ. ಇದು ಕಳೆದ ಎರಡು ವಾರಗಳಿಗಿಂತ ಅತ್ಯಂತ ಕಡಿಮೆ. ಹೀಗಾಗಿ ಚಿನ್ನ ಜಾಗತಿಕ ಹೂಡಿಕೆದಾರರ ಹೂಡಿಕೆಯನ್ನು ಹೆಚ್ಚಿಸುತ್ತದೆ, ಈ ಎಲ್ಲಾ ಬೆಳವಣಿಗೆಗಳು ಚಿನ್ನದ ದರದಲ್ಲಿ ಏರಿಕೆಯಾಗುವಂತೆ ಪ್ರಭಾವ ಬೀರುತ್ತವೆ ಎಂದು ಟಿಮ್ ವಾಟರ್ ಹೇಳಿದ್ದಾರೆ.
ಒಟ್ಟಾರೆ ಸದ್ಯ ಚಿನ್ನದ ದರದಲ್ಲಿ ಚೂರೊ ಪಾರೋ ಇಳಿಕೆ ಕಂಡಿದ್ದು ಬಂಗಾರ ಪ್ರಿಯರ ಖುಷಿಯನ್ನು ವೃದ್ಧಿಸಿದೆ. ಈಗ ಸದ್ಯ ಅಮೆರಿಕಾದ ಚುನಾವಣೆ ಚಿನ್ನದ ದರದ ಮೇಲೆ ದೊಡ್ಡ ಪ್ರಭಾವ ಬೀರಲಿದ್ದು.ಚಿನ್ನದ ದರದಲ್ಲಿ ಏರಿಕೆಯಾಗುವ ಸಂಭವ ಇದೆ ಎಂದೇ ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ