/newsfirstlive-kannada/media/post_attachments/wp-content/uploads/2024/11/Donald-Trump.jpg)
ಈಗ ಇಡೀ ವಿಶ್ವದ ಕಣ್ಣು ಅಮೆರಿಕದತ್ತ ನೆಟ್ಟಿದೆ. ಕಾರಣ ಜನವರಿ 20 ರಂದು ಡೊನಾಲ್ಡ್ ಟ್ರಂಪ್ ಅಮೆರಿಕದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅದಕ್ಕಾಗಿ ಸಕಲ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಹೀಗಿರುವಾಗ ಅಮೆರಿಕನ್ನರಿಗೆ ಚಳಿರಾಯ ಗಢಗಢ ಅಂತಾ ನಡುಗಿಸಿಬಿಟ್ಟಿದ್ದಾನೆ. ಆ ನಡುಕ ಡೋನಾಲ್ಡ್ ಟ್ರಂಪ್ಗೂ ತಟ್ಟಿದೆ.
ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆಯಿಂದಾಗಿ ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸ್ಥಳ ಬದಲಾಗಿದೆ. ಹೊರಾಂಗಣದಲ್ಲಿ ನಡೆಯಬೇಕಿದ್ದ ಪ್ರಮಾಣವಚನ ಕಾರ್ಯಕ್ರಮವು US ಕ್ಯಾಪಿಟಲ್ ಒಳಗೆ ನಡೆಯಲಿದೆ. ಅದಕ್ಕೆ ಕಾರಣ ವಿಪರಿತ ಚಳಿ. 40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವ್ಯತ್ಯಾಸ ಆಗಿದೆ. ಈ ಸಮಾರಂಭವು ಸಾಂಪ್ರದಾಯಿಕವಾಗಿ ಯುಎಸ್ ಕ್ಯಾಪಿಟಲ್‌ನ ಹೊರಗಿನ ನ್ಯಾಷನಲ್ ಮಾಲ್‌ನಲ್ಲಿ ನಡೆಯುತ್ತಿತ್ತು.
ಇದನ್ನೂ ಓದಿ: ವಿಶ್ವದಲ್ಲೇ ಟಾಪ್ 10 ಅತ್ಯಂತ ಅಸಂತುಷ್ಟ ರಾಷ್ಟ್ರಗಳು ಯಾವುವು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ದೇಶಕ್ಕೆ ಆರ್ಕ್ಟಿಕ್ ಚಂಡಮಾರುತ ಬಿಸಿ ತಟ್ಟಿದೆ. ನಾಗರಿಕರಿಗೆ ಯಾವುದೇ ನೋವು ಆಗುವುದನ್ನು ನಾನು ಬಯಸಲ್ಲ. ದೇವರಲ್ಲಿ ಪ್ರಾರ್ಥಿಸುತ್ತೇನೆ. ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವು US ಕ್ಯಾಪಿಟಲ್‌ನ ರೊಟುಂಡಾದಲ್ಲಿ (US capitol rotunda) ನಡೆಸಲು ಆದೇಶ ನೀಡಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
40 ವರ್ಷಗಳ ನಂತರ..
ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಕೂಡ ಚಳಿಯಿಂದಾಗಿ ಪ್ರಮಾಣ ವಚನ ಸಮಾರಂಭದ ಸ್ಥಳ ಬದಲಾಯಿಸಿದ್ದರು. 1985ರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಕೂಡ ಚಳಿಯಿಂದಾಗಿ ರೋಟುಂಡಾದಲ್ಲಿ ಭಾಷಣ ಮಾಡಿದ್ದರು. ಸೋಮವಾರ ವಾಷಿಂಗ್ಟನ್‌ನಲ್ಲಿ ಟ್ರಂಪ್ ಪ್ರಮಾಣ ವಚನ ಸ್ವೀಕಾರದ ವೇಳೆ ತಾಪಮಾನ ಮೈನಸ್ 7 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ತಂಪಾದ ಗಾಳಿಯು ಜನರನ್ನು ತೊಂದರೆಗೊಳಿಸಬಹುದು ಎಂಬ ಆತಂಕ ಕಾಡಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಟ್ರಂಪ್ ಹೋಟೆಲ್ ಮುಂದೆ ಟೆಸ್ಲಾ ಸೈಬರ್ ಟ್ರಕ್ ಸ್ಫೋಟ; ಅಸಲಿಗೆ ಆಗಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ