ಭಾರತದ ಹೋರಾಟಕ್ಕೆ ಅಮೆರಿಕ ಬೇಷರತ್ ಬೆಂಬಲ; ಆಪ್ತ ಸ್ನೇಹಿತ ಹೇಳಿದ್ದೇನು..?

author-image
Veena Gangani
Updated On
ಭಾರತದ ಹೋರಾಟಕ್ಕೆ ಅಮೆರಿಕ ಬೇಷರತ್ ಬೆಂಬಲ; ಆಪ್ತ ಸ್ನೇಹಿತ ಹೇಳಿದ್ದೇನು..?
Advertisment
  • ಅಮೆರಿಕಾದ ಹೌಸ್ ಸ್ಪೀಕರ್ ಮೈಕ್ ಜಾನ್ಸನ್​ರಿಂದ ಭಾರತಕ್ಕೆ ಬೆಂಬಲ
  • ಪಹಲ್ಗಾಮ್​ನಲ್ಲಿ ದಾಳಿ ಬೆನ್ನಲ್ಲೇ ಭಾರತಕ್ಕೆ ಸಾಥ್​ ಕೊಟ್ಟ ಅಮೆರಿಕಾ
  • ಭಾರತದ ಪ್ರಯತ್ನಕ್ಕೆ ಅಮೆರಿಕಾ ಸಾಧ್ಯವಿರುವ ಎಲ್ಲ ಬೆಂಬಲ ನೀಡಲಿದೆ

ಪಹಲ್ಗಾಮ್ ದಾಳಿ ಬೆನ್ನಲ್ಲೇ ಪಾಕಿಸ್ತಾನ ಮತ್ತು ಭಾರತ ಮಧ್ಯೆ ಉದ್ವಿಗ್ನತೆ ಉಂಟಾಗಿದೆ. ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟಕ್ಕೆ ಅಮೆರಿಕಾ ಸಂಪೂರ್ಣ ಬೆಂಬಲ ಘೋಷಣೆ ಮಾಡಿದೆ. ಅಮೆರಿಕ ಹೌಸ್ ಸ್ಪೀಕರ್ ಮೈಕ್ ಜಾನ್ಸನ್ (United States House of Representatives) ಭಾರತಕ್ಕೆ ದೊಡ್ಡ ಭರವಸೆ ನೀಡಿದ್ದಾರೆ.

publive-image

ಮಂಗಳವಾರ ಅಮೆರಿಕದ ಪ್ರತಿನಿಧಿ ಸಭೆಯಲ್ಲಿ ಮಾತನಾಡಿದ ಸ್ಪೀಕರ್ ಮೈಕ್ ಜಾನ್ಸನ್ (Mike Johnso),  ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟಕ್ಕೆ ಬೇಷರತ್ ಬೆಂಬಲ ಸೂಚಿಸಿದೆ. ಈ ಪ್ರಯತ್ನಕ್ಕೆ ಸಹಾಯ ಮಾಡಲು ಅಮೆರಿಕ ಅಗತ್ಯವಾದ ಶಕ್ತಿ ಮತ್ತು ಸಂಪನ್ಮೂಲಗಳನ್ನು ಒದಗಿಸಲಿದೆ ಎಂದಿದ್ದಾರೆ.

ಇದನ್ನೂ ಓದಿ:ದೇಶದ 244 ಜಿಲ್ಲೆಗಳಲ್ಲಿ ನಾಳೆ ಮಾಕ್​ ಡ್ರಿಲ್.. ಈ ಯುದ್ಧ ಕವಾಯತ್​​ನ ಉದ್ದೇಶ ಏನು..?

ಭಾರತ ಭಯೋತ್ಪಾದನೆಯ ವಿರುದ್ಧ ನಿಲ್ಲಬೇಕು. ಆ ಪ್ರಯತ್ನಗಳನ್ನು ಬೆಂಬಲಿಸಲು ನಾವು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ. ಟ್ರಂಪ್ ಆಡಳಿತವು ಭಯೋತ್ಪಾದನೆಯ ವಿರುದ್ಧ ಹೋರಾಡಲು ಭಾರತಕ್ಕೆ ಶಕ್ತಿ ಮತ್ತು ಸಂಪನ್ಮೂಲಗಳೊಂದಿಗೆ ಸಹಾಯ ಮಾಡುತ್ತದೆ ಎಂದಿದ್ದಾರೆ.

publive-image

ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರನ್ನು ಸಾವಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಂಡಿಸಿದ್ದರು. ಭಯೋತ್ಪಾದನೆಯ ವಿರುದ್ಧ ಅಮೆರಿಕವು ಭಾರತದೊಂದಿಗೆ ಬಲವಾಗಿ ನಿಲ್ಲುತ್ತದೆ. ಪ್ರಧಾನಿ ಮೋದಿ ಮತ್ತು ಭಾರತದ ಜನರಿಗೆ ನಮ್ಮ ಸಂಪೂರ್ಣ ಬೆಂಬಲ ಮತ್ತು ಆಳವಾದ ಸಹಾನುಭೂತಿ ಇದೆ ಎಂದಿದ್ದರು. ಈಗ ಅಧಿಕೃತವಾಗಿ ಭಾರತಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment