ಬಾಲಕನನ್ನ 50 ಸಲ ಲೈಂಗಿಕವಾಗಿ ಬಳಸಿಕೊಂಡ ಟೀಚರ್.. ಕೋರ್ಟ್​​ನಲ್ಲಿ ಏನಾಯ್ತು?

author-image
Bheemappa
Updated On
ಬಾಲಕನನ್ನ 50 ಸಲ ಲೈಂಗಿಕವಾಗಿ ಬಳಸಿಕೊಂಡ ಟೀಚರ್.. ಕೋರ್ಟ್​​ನಲ್ಲಿ ಏನಾಯ್ತು?
Advertisment
  • ಶಿಕ್ಷಕಿಯ ಆ ಮನವಿಯನ್ನು ತಿರಸ್ಕಾರ ಮಾಡಿರುವ ಕೋರ್ಟ್
  • ಹೆಂಡತಿ ಸುಂದರವಾಗಿ ಇರುವುದಕ್ಕೆ ಕೇಸ್​ನಲ್ಲಿ ಸಿಲುಕಿಸಿದ್ದಾರೆ
  • ಬಾಲಕನನ್ನ ಚೆನ್ನಾಗಿ ನೋಡಿಕೊಳ್ಳುವುದಾಗಿ ಹೀಗೆ ಮಾಡಿದ್ಳಾ?

ಕಾಲ ಕೆಟ್ಟೋಯ್ತು ಅಂತ ವಯಸ್ಸಾದ ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಕೆಲವೊಂದು ಘಟನೆಗಳು ವಿಚಿತ್ರವಾಗಿ ನಡೆಯೋದನ್ನು ನೋಡಿ ಹಿರಿಯರು ನೊಂದು ಈ ಮಾತುಗಳನ್ನು ಹೇಳುತ್ತಾರೆ. ಅಮೆರಿಕಾದಂಥ ಮುಂದುವರಿದ ದೇಶದಲ್ಲಿ ಎಂಥೆಂಥಾ ಘಟನೆಗಳು ನಡೆಯುತ್ತಾವೆ ಎಂದು ನೋಡಿದರೇ, ಶಾಕ್ ಆಗುತ್ತೆ. ಅಮೆರಿಕಾದ ಚಿಕಾಗೋದಲ್ಲಿ 30 ವರ್ಷದ ಲೇಡಿ ಶಿಕ್ಷಕಿ ಕ್ರಿಸ್ಟಿನಾ ಫಾರಮೆಲಾ ತನ್ನ ಶಾಲೆಯ 15 ವರ್ಷದ ಬಾಲಕನನ್ನ ಲೈಂಗಿಕವಾಗಿ ದುರುಪಯೋಗ ಮಾಡಿಕೊಂಡಿದ್ದಾರೆ. ಒಂದಲ್ಲ, ಎರಡಲ್ಲ ಬರೋಬ್ಬರಿ 50 ಬಾರಿ ಬಾಲಕನ ಮೇಲೆ ಕೃತ್ಯ ಎಸಗಿದ್ದಾಳೆ. ವಿಚಿತ್ರ ಅಂದರೇ, ಹೀಗೆ ಸಿಕ್ಕಿ ಬಿದ್ದ ಬಳಿಕವೂ ಹುಡುಗನ ಮನೆಯ ಹತ್ತಿರವೇ ತಾನು ವಾಸ ಇರಲು ಅವಕಾಶ ನೀಡಬೇಕೆಂದು ಕೋರ್ಟ್​ಗೆ ಟೀಚರ್​ ಮನವಿ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ:ಗುಡ್​​ನ್ಯೂಸ್​ ಎಂದ ಭಾವನಾ ರಾಮಣ್ಣ.. 40ನೇ ವಯಸ್ಸಲ್ಲಿ ಅಮ್ಮ ಆಗ್ತಿದ್ದಾರೆ ಸ್ಯಾಂಡಲ್​ವುಡ್ ನಟಿ

publive-image

ಕ್ರಿಸ್ಟಿನಾ ಫಾರಮೇಲಾ ವಿರುದ್ಧ ಕ್ರಿಮಿನಲ್ ಲೈಂಗಿಕ ದೌರ್ಜನ್ಯ, ಲೈಂಗಿಕ ದುರ್ಬಳಕೆಯ ಆರೋಪದಡಿ ಕೇಸ್ ದಾಖಲಿಸಲಾಗಿದೆ. ಈ ಕೇಸ್​ಗೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ 52 ಆರೋಪ ಹೊರಿಸಲಾಗಿದೆ. ಕ್ರಿಸ್ಟಿನಾ ಫಾರಮೇಲಾ ವಿರುದ್ಧದ ಈ ಗಂಭೀರ ಆರೋಪದ ಬಳಿಕವೂ ಆಕೆಯ ಪತಿ, ಮೈಕೆಲ್ ಫಾರಮೇಲಾ ಪತ್ನಿಯ ಬೆಂಬಲಕ್ಕೆ ನಿಂತಿರುವುದು ವಿಶೇಷ. ತನ್ನ ಹೆಂಡತಿ ಸುಂದರವಾಗಿ ಕಾಣುತ್ತಾಳೆಂದು ಆಕೆಯನ್ನು ಈ ಕೇಸ್​ನಲ್ಲಿ ಸಿಲುಕಿಸಲಾಗಿದೆ ಎಂದು ಪತಿ ಮೈಕೆಲ್ ಫಾರಮೇಲಾ ಹೇಳಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಮತ್ತೊಬ್ಬ ಸಾಕ್ಷಿ ಹೇಳುವ ಪ್ರಕಾರ, ಕೋರ್ಟ್​ನಲ್ಲಿ ಮೈಕೆಲ್, ಕ್ರಿಸ್ಟಿನಾ ಫಾರಮೆಲಾ ಇಬ್ಬರು ಕೈ ಹಿಡಿದುಕೊಂಡೇ ಕುಳಿತಿದ್ದರು. ಪರಸ್ಪರರತ್ತ ನಗು ಬೀರುತ್ತಿದ್ದರು. ಇಬ್ಬರಲ್ಲೂ ಆತ್ಮವಿಶ್ವಾಸ ಇತ್ತು ಎಂದು ಸಾಕ್ಷಿಯೊಬ್ಬರು ಹೇಳಿದ್ದಾರೆ. ಕ್ರಿಸ್ಟಿನಾ ಫಾರಮೇಲಾ, ತನ್ನ ಪೋಷಕರ 5.6 ಲಕ್ಷ ಡಾಲರ್ ಮೌಲ್ಯದ ಗಾಲ್ಪ್ ಕೋರ್ಸ್ ಮನೆಯಲ್ಲಿ ಕಳೆದ ಜೂನ್​​ನಿಂದ ವಾಸಿಸುತ್ತಿದ್ದಾರೆ.

ಇನ್ನೂ ಕ್ರಿಸ್ಟಿನಾ ಫಾರಮೆಲಾ ಪತಿಯ ಮನೆ ಕೋರ್ಟ್ ಆದೇಶ ನೀಡಿರುವಂತೆ, ಸಂತ್ರಸ್ತ 15 ವರ್ಷದ ಬಾಲಕನ ಮನೆಯಿಂದ 5 ಸಾವಿರ ಅಡಿಯ ಬಫರ್ ಜೋನ್ ಅಂತರದಲ್ಲೇ ಇದೆ. ಆದರೇ, ಈ ಅಂತರವನ್ನು 2,500 ಅಡಿಗೆ ಇಳಿಕೆ ಮಾಡಬೇಕೆಂದು ಕ್ರಿಸ್ಟಿನಾ ಫಾರಮೆಲಾ ಕೋರ್ಟ್​​ಗೆ ಮನವಿ ಮಾಡಿಕೊಂಡಿದ್ದಾಳೆ. 15 ವರ್ಷದ ಸಂತ್ರಸ್ತ ಹುಡುಗ ತನ್ನ ಸ್ನೇಹಿತರ ಜೊತೆ ಸಮಯ ಕಳೆಯುತ್ತಿರುತ್ತಾನೆ. ಈ ಕ್ರಿಸ್ಟಿನಾ ಫಾರಮೆಲಾ ಮನೆಯ ಹತ್ತಿರವೇ ಓಡಾಡಿಕೊಂಡು ಇರುತ್ತಾನೆ. ಹೀಗಾಗಿ ತನ್ನ ಮನೆಗೂ ಸಂತ್ರಸ್ತ ಬಾಲಕನ ಮನೆಗೂ ಇರುವ ಬಫರ್ ಜೋನ್ ಅಂತರವನ್ನು 5 ಸಾವಿರ ಅಡಿಯಿಂದ 2.5 ಸಾವಿರ ಅಡಿಗೆ ಇಳಿಕೆ ಮಾಡಬೇಕೆಂದು ಕ್ರಿಸ್ಟಿನಾ ಕೋರ್ಟ್​ಗೆ ಮನವಿ ಮಾಡಿದ್ದಳು. ಆದರೇ, ಕೋರ್ಟ್ ಈ ಮನವಿಯನ್ನು ತಿರಸ್ಕರಿಸಿದೆ.

publive-image

ಒಂದು ವೇಳೆ ಕ್ರಿಸ್ಟಿನಾ ಫಾರಮೆಲಾ ವಿರುದ್ಧದ ಲೈಂಗಿಕ ದೌರ್ಜನ್ಯ ಕೇಸ್ ಕೋರ್ಟ್​ನಲ್ಲಿ ಸಾಬೀತಾದರೇ, ಕ್ರಿಸ್ಟಿನಾ ಫಾರಮೆಲಾಗೆ 60 ವರ್ಷ ಜೈಲುಶಿಕ್ಷೆ ವಿಧಿಸಬಹುದಾಗಿದೆ. ಕಳೆದೊಂದು ವರ್ಷದಿಂದ ಕ್ರಿಸ್ಟಿನಾ ಫಾರಮೆಲಾ ಹುಡುಗನನ್ನು ಬೆಳೆಸುವುದಾಗಿ ಹೇಳಿದ್ದಳು, ಜೊತೆಗೆ ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾಳೆ ಎಂದು ಪ್ರಾಸಿಕ್ಯೂಟರ್ ಜಾಕ್ವಲಿನ್ ಮ್ಯಾಕ್‌ ಅಂಡ್ರ್ಯೂ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment