/newsfirstlive-kannada/media/post_attachments/wp-content/uploads/2025/06/TRUMP-4.jpg)
ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದಲ್ಲಿ (Israel-Iran War) ಅಮೆರಿಕ ಅಧಿಕೃತವಾಗಿ ಸೇರಿಕೊಂಡಿದೆ. ಇರಾನ್‌ನ ಮೂರು ಪರಮಾಣು ತಾಣಗಳಾದ ಫೋರ್ಡೊ (Fordow), ನಟಾಂಜ್ (Natanz) ಮತ್ತು ಇಸ್ಫಹಾನ್ (Isfahan) ಮೇಲೆ ಅಮೆರಿಕ ವಾಯುದಾಳಿ ನಡೆಸಿದೆ. ಈ ದಾಳಿ ಸಂಪೂರ್ಣ ಯಶಸ್ವಿಯಾಗಿದೆ ಎಂದು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಇರಾನ್ ಜೊತೆಗಿನ ಯುದ್ಧದಲ್ಲಿ ಇಸ್ರೇಲ್‌ಗೆ ಭಾರೀ ಆರ್ಥಿಕ ಹೊರೆ -ಪ್ರತಿದಿನ ಎಷ್ಟು ಕೋಟಿ ರೂ ಖರ್ಚು ಆಗ್ತಿದೆ..?
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್.. ಈಗ ಅಮೆರಿಕದ ಎಲ್ಲಾ ವಿಮಾನಗಳು ಇರಾನ್‌ನ ವಾಯುಪ್ರದೇಶ ತೊರೆದು ಸುರಕ್ಷಿತವಾಗಿ ವಾಪಸ್ ಆಗ್ತಿವೆ. ಹೆಚ್ಚಿನ ಬಾಂಬ್‌ಗಳನ್ನು ಫೋರ್ಡೊ ಎಂಬಲ್ಲಿ ಬೀಳಿಸಲಾಗಿದೆ. ನಮ್ಮ ವೀರ ಯೋಧರಿಗೆ ಅಭಿನಂದನೆಗಳು. ಜಗತ್ತಿನ ಬೇರೆ ಯಾವುದೇ ಸೈನ್ಯವು ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕ ದಾಳಿಯ ಬಗ್ಗೆ ಇರಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: ಪಾಕ್ನಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ಅಭಿವೃದ್ಧಿ.. FATFನಿಂದ ಮತ್ತೆ ಗ್ರೇ ಲಿಸ್ಟ್ ಸೇರುತ್ತಾ?
ಅಮೆರಿಕ ಇಸ್ರೇಲ್‌ಗೆ ಸಹಾಯ
ಇರಾನ್‌ನ ಮೂರು ಪರಮಾಣು ತಾಣಗಳ ಮೇಲೆ ಅಮೆರಿಕ ದಾಳಿ ಮೂಲಕ ಇರಾನ್‌ನೊಂದಿಗೆ ಯುದ್ಧಕ್ಕೆ ಇಳಿದಿದೆ. ಈ ದಾಳಿಯನ್ನು ಇರಾನ್‌ನ ಪರಮಾಣು ಪ್ರಾಜೆಕ್ಟ್ ಕೊನೆಗೊಳಿಸಲು ಬಯಸುತ್ತಿರುವ ಇಸ್ರೇಲ್‌ಗೆ ಅಮೆರಿಕ ಸಹಾಯ ಮಾಡಿದೆ ಎಂಬ ಅರ್ಥದಲ್ಲಿ ವಿಶ್ಲೇಸಿಸಲಾಗುತ್ತಿದೆ.
48 ಗಂಟೆ ಹಿಂದೆ ಏನು ಹೇಳಿದ್ದರು..?
ಈ ದಾಳಿಗೆ ಕೇವಲ 48 ಗಂಟೆಗಳ ಮೊದಲು.. ಇರಾನ್ ಮತ್ತು ಇಸ್ರೇಲ್ ನಡುವೆ ರಾಜತಾಂತ್ರಿಕ ಪರಿಹಾರ ಸಿಗುತ್ತದೆಯೇ ಅಂತಾ ಅಮೆರಿಕ ಕಾದು ನೋಡಲಿದೆ. ಎರಡು ವಾರ ಕಾದು ನೋಡುವ ತಂತ್ರ ಮಾಡಲಾಗುವುದು. ಮಾತುಕತೆ ಸಾಧ್ಯತೆಯಿದ್ದರೆ ಮುಂದೆ ಏನು ಮಾಡಬೇಕೆಂದು ಎರಡು ವಾರಗಳಲ್ಲಿ ನಿರ್ಧರಿಸುತ್ತೇನೆ ಎಂದು ಟ್ರಂಪ್, ಇರಾನ್ಗೆ ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: ಇರಾನ್ ಮೇಲೆ ಇಸ್ರೇಲ್ ದಾಳಿ, ಇದು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧ; ಸೋನಿಯಾ ಗಾಂಧಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ