ಗರ್ಲ್‌ ಫ್ರೆಂಡ್‌ ಹೊಸ ಹೇರ್‌ ಸ್ಟೈಲ್‌ ಇಷ್ಟವಾಗದೇ ಇರಿದು ಕೊಂ*ದೇ ಬಿಟ್ಟ ಪ್ರಿಯಕರ; ಆಗಿದ್ದೇನು?

author-image
Gopal Kulkarni
Updated On
ಗರ್ಲ್‌ ಫ್ರೆಂಡ್‌ ಹೊಸ ಹೇರ್‌ ಸ್ಟೈಲ್‌ ಇಷ್ಟವಾಗದೇ ಇರಿದು ಕೊಂ*ದೇ ಬಿಟ್ಟ ಪ್ರಿಯಕರ; ಆಗಿದ್ದೇನು?
Advertisment
  • ಮೆಚ್ಚಿದ ಗೆಳತಿಯನ್ನೇ ಚಾಕುವಿನಿಂದ ಇರಿದು ಇರಿದು ಹತ್ಯೆ ಮಾಡಿದ ಪಾಪಿ
  • 49 ವರ್ಷದ ಗೌಲ್, 50 ವರ್ಷದ ಸಿಲ್ವಾ ನಡುವೆ ಮೊಳಕೆಯೊಡೆದಿತ್ತು ಪ್ರೀತಿ
  • ಸಿಲ್ವಾಳ ಆ ಒಂದು ಕಾರ್ಯದಿಂದ ಸಿಡಿದೆದ್ದಿ ಗೌಲ್ ಕೊನೆಗೆ ಮಾಡಿದ್ದು ಹೀನ ಕೃತ್ಯ

ಅಮೆರಿಕಾದ ಪೆನ್ಸಿಲ್ವೆನಿಯಾದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. 49 ವರ್ಷದ ವ್ಯಕ್ತಿಯೊಬ್ಬ ತನ್ನ 50 ವರ್ಷದ ಗರ್ಲ್​ಫ್ರೆಂಡ್​ಳನ್ನ ಚಾಕುವಿನಿಂದ ಇರಿದು ಇರಿದು ಕೊಂದಿದ್ದಾನೆ. ಕಾರಣ ಮಾತ್ರ ವಿಚಿತ್ರವಾಗಿದೆ. ತನ್ನ ಗರ್ಲ್​ಫ್ರೆಂಡ್ ಮಾಡಿಕೊಂಡಿದ್ದ ಹೇರ್​ ಕಟ್​ ತನಗೆ ಇಷ್ಟವಾಗಿಲ್ಲ ಎಂದ ಒಂದೇ ಕಾರಣಕ್ಕೆ ಅವಳನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಅಮೆರಿಕಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ ಪ್ರಕಾರ ಬೆಂಜಮಿನ್ ಗೌಲ್ ಎಂಬ 49 ವರ್ಷದ ವ್ಯಕ್ತಿ ತನ್ನ 50 ವರ್ಷ ವಯಸ್ಸಿನ ಗೆಳತಿಯನ್ನ ಚಾಕುವಿನಿಂದ ಇರಿದು ಕೊಂದಿದ್ದಾನೆ. ಇದಕ್ಕೆ ಅವಳ ಹೇರ್​ ಕಟ್ ಮಾಡಿಸಿಕೊಂಡಿದ್ದೇ ಕಾರಣ ಎಂದು ಹತ್ಯೆಯಾದ ಮಹಿಳೆಯ ಮಗಳು ಪೊಲೀಸರ ಎದುರು ಹೇಳಿಕೊಂಡಿದ್ದಾಳೆ. ಮೃತಳನ್ನು ಕ್ಯಾಮರೆನ್ ಮಾರ್ಟಿಜನ್ ಸಿಲ್ವಾ ಎಂದು ಗುರುತಿಸಿಲಾಗಿದೆ. ಸಿಲ್ವಾಳ ಪುತ್ರಿ ಪೊಲೀಸರಿಗೆ ನೀಡಿರುವ ಹೇಳಿಕೆ ಪ್ರಕಾರ, ಬೆಂಜಮಿನ್ ಗೌಲ್ ತನ್ನ ತಾಯಿ ಮಾಡಿಸಿಕೊಂಡಿದ್ದ ಹೇರ್​ಕಟ್​​ನಿಂದಾಗಿ ಬೇಸರಗೊಂಡಿದ್ದ. ಆಕೆಯನ್ನು ಕೊಲ್ಲುವುದಾಗಿ ಹಲವು ಬಾರಿ ದಮ್ಕಿ ಕೂಡ ಹಾಕಿದ್ದ, ನನ್ನ ತಾಯಿಯನ್ನು ಈತ ಹೀಗೆ ಹತ್ಯೆ ಮಾಡಲು ಅವಳು ಮಾಡಿಸಿಕೊಂಡಿದ್ದ ಹೇರ್​ಕಟ್​ ಕಾರಣ ಎಂದು ಪದೇ ಪದೇ ಹೇಳಿದ್ದಾಳೆ.

ಇದನ್ನೂ ಓದಿ:ಹಿಂದೂಗಳ ಮನೆ ಮೇಲೆ ಪೊಲೀಸರು, ಸೈನಿಕರಿಂದ ದಾಳಿ.. ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಕೋರಿದ ಇಸ್ಕಾನ್ ವಕ್ತಾರ

ಒಂದು ದಿನ ಮಗಳ ಮನೆಯಲ್ಲಿ ದಿನವನ್ನು ಕಳೆದ ಸಿಲ್ವಾ ಮಾರನೆ ದಿನ ತನ್ನ ಸಹೋದರನ ಮನೆಯಲ್ಲಿ ಉಳಿದುಕೊಂಡಿದ್ದಾಳೆ. ಇದೇ ವೇಳೆ ಬೆಂಜಮಿನ್ ಗೌಲ್​ ಆಕೆಗೆ ಆಕೆಯ ಹೇರ್​ಕಟ್​ ವಿಚಾರವಾಗಿ ತುಂಬಾ ಕಿರಿಕಿರಿ ನೀಡಿದ ಕಾರಣ ತನ್ನ ಗೆಳತಿಗೆ ಫೋನ್ ಮಾಡಿದ ಸಿಲ್ವಾ. ಅವನಿಗೆ ನಮ್ಮಿಬ್ಬರ ನಡುವಿನ ಸಂಬಂಧ ಕೊನೆಯಾಯಿತು ಅಂತ ಹೇಳು ಎಂದು ತಿಳಿಸಿದ್ದಾಳೆ. ಈ ಸುದ್ದಿ ತಿಳಿದ ಕೂಡಲೇ ಗೌಲ್​ ಆಕೆಗಾಗಿ ಹುಡುಕಾಟ ನಡೆಸಿದ್ದಾನೆ. ಕೊನೆಗೆ ಸಿಲ್ವಾ ಅವಳ ಸಹೋದರನ ಮನೆಯಲ್ಲಿದ್ದಾಳೆ ಎಂಬುದನ್ನು ತಿಳಿದ ಗೌಲ್ ನೇರ ಆ ಮನೆಗೆ ನುಗ್ಗಿದ್ದಾನೆ.

ಇದನ್ನೂ ಓದಿ:ಯುವತಿಯ ಮುಖಲಕ್ಷಣಕ್ಕೆ ಲೇವಡಿ ಮಾಡಿದ ಸ್ನೇಹಿತರು.. DNA ಟೆಸ್ಟ್ ಮಾಡಿಸಿದ ಮೇಲೆ ಕಾದಿತ್ತು ಶಾಕ್​; ಅಸಲಿಗೆ ಆಗಿದ್ದೇನು?

ಆತ ಮನೆಗೆ ಬಂದಾಗ ಸಿಲ್ವಾ ಸಹೋದರ ಅವಳು ಇಲ್ಲಿ ಇಲ್ಲ ಎಂದು ಹೇಳಿದ್ದಾನೆ. ಆಗ ಸುಮ್ಮನೆ ಹೋದ ಗೌಲ್  ವಾಪಸ್​ ಕೋಪದಿಂದ ಕುದಿಯುತ್ತಾ ಸಿಲ್ವಾ ಸಹೋದರನ ಮನೆಗೆ ನುಗ್ಗಿದ್ದಾನೆ. ಆತನ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಮುಂದಾದಾಗ ಸಿಲ್ವಾ ಓಡಿ ಬಂದು ಬಿಡಿಸಿಕೊಳ್ಳಲು ಹೋಗಿದ್ದಾಳೆ. ಈ ವೇಳೆ ಸಿಲ್ವಾಳನ್ನು ಹಿಡಿದು ಚಾಕುವಿನಿಂದ ಮನಬಂದಂತೆ ಇರಿದಿದ್ದಾನೆ.

ಮನೆಗೆ ಬಂದ ಪೊಲೀಸರಿಗೆ ರಕ್ತದ ಮಡುವಿನಲ್ಲಿ ಮೈತುಂಬಾ ಚಾಕುವಿನಿಂದ ಚುಚ್ಚಿದ ಗಾಯಗಳನ್ನು ಹೊತ್ತುಕೊಂಡು ಬಿದ್ದಿದ್ದ ಸಿಲ್ವಾಳ ಮೃತದೇಹ ಕಂಡು ಬಂದಿದೆ. ಇನ್ನು ಅಚ್ಚರಿಯೆಂದರೆ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಬಂದಾಗ ಬೆಂಜಮಿನ್ ಗೌಲ್ ಇನ್ನೂ ಕೂಡ ಅಲ್ಲಿಯೇ ಇದ್ದ. ತನ್ನ ಕಾರಿನಲ್ಲಿ ಹತ್ಯೆಗೆ ಬಳಸಿದ ಚಾಕುವನ್ನು ಹಿಡಿದುಕೊಂಡು ಕುಳಿತಿದ್ದ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಅದು ಅಲ್ಲದೇ ಈತನ ಮೇಲೆ ಈ ಹಿಂದೆ ಅನೇಕ ಕ್ರಿಮಿನಲ್ ಕೇಸ್​ಗಳು ದಾಖಲಾಗಿದ್ದರ ಬಗ್ಗೆಯೂ ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment