/newsfirstlive-kannada/media/post_attachments/wp-content/uploads/2025/03/diamond-earrings.jpg)
ಚಿನ್ನಾಭರಣ ಅಂಗಡಿಗಳಿಗೆ ನುಗ್ಗುವ ದರೋಡೆಕೋರರನು ಮಾಲೀಕರ ಕಣ್ಣು ತಪ್ಪಿಸಿ ಅಲ್ಲಿರುವ ಚಿನ್ನಾಭರಣಗಳನ್ನು ಕದ್ದುಕೊಂಡು ಹೋಗುವುದನ್ನು ನಾವು ಸಾಮಾನ್ಯವಾಗಿ ನೋಡಿರುತ್ತೇವೆ. ಸಿಸಿಟಿವಿಯಲ್ಲಿ ರೆಕಾರ್ಡ್ ಆದ ಇಂತಹ ದೃಶ್ಯಗಳು ಹಲವಾರು ಬಾರಿ ವೈರಲ್ ಕೂಡ ಆಗಿವೆ. ಆದ್ರೆ ಯುಎಸ್ನಲ್ಲಿ ಇದೆಲ್ಲವನ್ನೂ ಮೀರಿಸುವಂತಹ ಘಟನೆಯೊಂದು ನಡೆದಿದೆ. ಟಿಫಿನಿ ಆ್ಯಂಡ್ ಕಂಪನಿಯ ಜ್ಯುವೆಲರಿ ಅಂಗಡಿಗೆ ನುಗ್ಗಿದ ಭೂಪನೊಬ್ಬ ಅಲ್ಲಿದ್ದ 6 ಕೋಟಿ ರೂಪಾಯಿ ಮೌಲ್ಯದ ಕಿವಿಯೋಲೆಗಳನ್ನು ನುಂಗಿ ಪರಾರಿಯಾಗಿದ್ದಾನೆ.
ಕಳೆದ ವಾರ ಫ್ಲೋರಿಡಾದಲ್ಲಿ ಇಂತಹದೊಂದು ಘಟನೆ ನಡೆದಿದೆ. ಆರೋಪಿಯನ್ನು ಜಾಯತನ್ ಲಾರೆನ್ಸ್ ಗ್ಲಿಡೆರ್ ಎಂದು ಗುರುತಿಸಲಾಗಿದೆ. 32 ವರ್ಷದ ಈ ಗ್ಲಿಡೆರ್ ಫೆಬ್ರವರಿ 26 ರಂದು ಟಿಫಿನನಿ ಆ್ಯಂಡ್ ಕಂಪನಿ ಎಂಬ ಜ್ಯುವೆಲಿರಿ ಶಾಪ್ಗೆ ಭೇಟಿ ನೀಡಿದ್ದ. ತುಂಬಾ ಶ್ರೀಮಂತನಂತೆ ಅಲ್ಲಿ ಪೋಸ್ ಕೂಡ ಕೊಟ್ಟಿದ್ದ. ಆದರೆ ವಜ್ರದ ಎರಡು ಜೊತೆ ಕಿವಿಯೋಲೆಗಳನ್ನು ಕದ್ದು ಓಡಿಹೋಗಿದ್ದಾನೆ. ಆನಂತರ ಅವುಗಳನ್ನು ನುಂಗಿದ್ದಾನೆ. 4.86 ಕ್ಯಾರೆಟ್ನ ಒಂದು ವಜ್ರದ ಓಲೆ ಅದರ ಮೌಲ್ಯ, ಸುಮಾರ 1.3 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ. ಮತ್ತೊಂದು ಕಿವಿಯೋಲೆ 8.10 ಕ್ಯಾರೆಟ್ನ ವಜ್ರದ್ದು ಅದರ ಬೆಲೆ 5.3 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ. ಗ್ಲಿಡೆರ್ ವಜ್ರದೋಲೆಗಳನ್ನು ಕದ್ದು ಓಡಿ ಹೋಗಿರುವ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ.
ಇದನ್ನೂ ಓದಿ:13 ವರ್ಷದ ಬಾಲಕನನ್ನು ಅಮೆರಿಕದ ಸೀಕ್ರೆಟ್ ಸರ್ವೀಸ್ ಏಜೆಂಟ್ ಆಗಿ ನೇಮಿಸಿದ ಡೋನಾಲ್ಡ್ ಟ್ರಂಪ್!
ಒರ್ಲ್ಯಾಂಡೊ ಪೊಲೀಸರು ಈತನನ್ನು ಈಗಾಗಲೇ ಬಂಧಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಇವನ ಮೇಲೆ ಈ ಹಿಂದೆ 10 ಪ್ರಕರಣಗಳು ದಾಖಲಾಗಿದ್ದು ಕೂಡ ಕಂಡು ಬಂದಿದೆ. ಆದ್ರೆ ಕಿವಿಯೋಲೆಗಳು ಸಿಗುವ ತನಕ ಆರೋಪಿಯ ವಿರುದ್ಧ ಪೊಲೀಸರು ರಾಬರಿ ಕೇಸ್ ದಾಖಲಿಸಿರಲಿಲ್ಲ. ಕೊನೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಇಡೀ ದೇಹವನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಿ ನೋಡಿದಾಗ ಗ್ಲಿಡೆರ್ ಹೊಟ್ಟೆಯಲ್ಲಿ ಜೋಡಿ ವಜ್ರದೋಲೆಗಳು ಇರುವುದು ಕಂಡು ಬಂದಿದೆ.
Thief in Florida swallows Tiffany & Co diamonds worth ₹6.7 crore to escape arrest pic.twitter.com/MzKGR1p8L7
— The Tatva (@thetatvaindia)
Thief in Florida swallows Tiffany & Co diamonds worth ₹6.7 crore to escape arrest pic.twitter.com/MzKGR1p8L7
— The Tatva (@thetatvaindia) March 6, 2025
">March 6, 2025
ಇದಾದ ಮೇಲೆ ಪೊಲೀಸರು ಗ್ಲಿಡೆರ್ ಮೇಲೆ ರಾಬರಿ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಅಟ್ಟಿದ್ದಾರೆ. ಸದ್ಯ ಕಿವಿಯೋಲೆಗಳು ಜೀರ್ಣಕ್ರಿಯ ಮೂಲಕ ಆಚೆ ಬಂದಾಗ ಅವುಗಳನ್ನು ಕಲೆಕ್ಟ್ ಮಾಡಿ ಕೊಡಲಾಗುವುದು ಎಂದು ಚಿನ್ನಾಭರಣದ ಶಾಪ್ನವರಿಗೆ ತಿಳಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ