Advertisment

ತಂದೆಗೆ ಪ್ಲಾಸ್ಮಾ ದಾನ ಮಾಡಿದ ಅಮೆರಿಕಾದ ಕೋಟ್ಯಾಧೀಶ; ಇದರಿಂದ ಆದ ಲಾಭ ಗೊತ್ತಾದ್ರೆ ಶಾಕ್ ಆಗ್ತೀರಾ!

author-image
Gopal Kulkarni
Updated On
ತಂದೆಗೆ ಪ್ಲಾಸ್ಮಾ ದಾನ ಮಾಡಿದ ಅಮೆರಿಕಾದ ಕೋಟ್ಯಾಧೀಶ; ಇದರಿಂದ ಆದ ಲಾಭ ಗೊತ್ತಾದ್ರೆ ಶಾಕ್ ಆಗ್ತೀರಾ!
Advertisment
  • ತಂದೆಗೆ ಒಂದು ಲೀಟರ್ ಪ್ಲಾಸ್ಮಾ ನೀಡಿದ ಅಮೆರಿಕಾದ ಟೆಕ್ಕಿ
  • ಇದರಿಂದ ಕೋಟ್ಯಾಧಿಪತಿಯ ತಂದೆಗೆ ಆದ ಲಾಭವೇನು ಗೊತ್ತಾ?
  • ಪ್ಲಾಸ್ಮಾ ನೀಡುವುದರಿಂದ ಈ ಒಂದು ಪವಾಡ ನಡೆಯುತ್ತದೆಯಾ?

ರಕ್ತದಾನ, ನೇತ್ರದಾನ, ಅಂಗಾಂಗ ದಾನದಂತೆ ಪ್ಲಾಸ್ಮಾ ದಾನವೂ ಅಂತ ಇದೆ. ಇದನ್ನು ನಾವು ಮೊದಲ ಬಾರಿ ಕೇಳಿದ್ದು ಕೋವಿಡ್​ ಸಮಯದಲ್ಲಿ. ಪ್ಲಾಸ್ಮಾ ದಾನ ಮಾಡುವುದರಿಂದ ಕೋವಿಡ್​ಗೆ ತುತ್ತಾಗಿದ್ದ ವ್ಯಕ್ತಿಯನ್ನು ನಾವು ಉಳಿಸುವ ಸಂದರ್ಭ ಆಗ ಬಂದಿತ್ತು. ಈಗ ಇದೇ ಪ್ಲಾಸ್ಮಾ ದಾನ ಈಗ ಮತ್ತೊಮ್ಮೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಅಮೆರಿಕಾದ ಆಗರ್ಭ ಶ್ರೀಮಂತರೊಬ್ಬರು ತಮ್ಮ ತಂದೆಗೆ ಪ್ಲಾಸ್ಮಾ ದಾನ ಮಾಡುವುದರ ಮೂಲಕ ಅವರ ವಯಸ್ಸನ್ನು 25 ವರ್ಷ ಕಡಿಮೆಯಾಗುವಂತೆ ಮಾಡಿದ್ದಾರೆ.

Advertisment

ಬ್ರಿಯಾನ್ ಜಾನ್ಸನ್ ಎಂಬ ಅಮೆರಿಕಾದ ಮಿಲೆಯೆನೀಯರ್ ಟೆಕ್ಕಿಯೊಬ್ಬರು ತಮ್ಮ ತಂದೆಗೆ ಪ್ಲಾಸ್ಮಾ ದಾನವನ್ನು ಮಾಡಿದ್ದಾರೆ. ಈ ಒಂದು ಸೂಪರ್ ಕ್ಲೀನ್ ಪ್ಲಾಸ್ಮಾ ದಾನ ಮಾಡಿರುವುದರಿಂದಾಗಿ ನಾನು ನನ್ನ ತಂದೆಯ ವಯಸ್ಸನ್ನು 25 ವರ್ಷ ಕಡಿಮೆ ಮಾಡಿದ್ದೇನೆ ಎಂದು ಬ್ರಿಯಾನ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಡಿಸ್ಲೆಕ್ಸಿಯಾದಿಂದ ADHDವರೆಗೆ; ಬಾಲಿವುಡ್​ನ ಹಲವು ನಟ ನಟಿಯರು ಅನುಭವಿಸಿದ್ದಾರೆ ಇಂತಹ ಸಮಸ್ಯೆ

ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಬ್ರಿಯಾನ್ ಜಾನ್ಸನ್ ಪ್ರಾಜೆಕ್ಟ್ ಬ್ಲ್ಯೂ ಪ್ರಿಂಟ್ ಎಂಬ ನಿಯಮದ ಮೂಲಕ ತನ್ನ ಎಪಿಜೆನಿಕ್ ವಯಸ್ಸನ್ನು ಐದು ವರ್ಷಗಳಷ್ಟು ಕಡಿಮೆ ಮಾಡಿಕೊಂಡಿರುವುದಾಗಿ ಜಾನ್ಸನ್ ಹೇಳಿದ್ದಾರೆ. ಸದ್ಯ ಜಗತ್ತಿನೆಲ್ಲೆಡೆ ಕುತೂಹಲಕ್ಕೆ ಕಾರಣವಾಗಿದ್ದ ಸಂಪೂರ್ಣ ಪ್ಲಾಸ್ಮಾ ವಿನಿಮಯ ಅಂದ್ರೆ ಟೋಟಲ್ ಪ್ಲಾಸ್ಮಾ ಎಕ್ಸಚೆಂಜ್ (ಟಿಇಪಿ) ಬಳಿಕ ನನ್ನ ಪ್ಲಾಸ್ಮಾವನ್ನು ವಿಲೇವಾರಿ ಮಾಡಲು ಲ್ಯಾಬ್ ತಂತ್ರಜ್ಞರಿಗೆ ಆಗಲಿಲ್ಲ. ಇದೊಂದು ಕ್ಲೀನ್ ಪ್ಲಾಸ್ಮಾ ಆಗಿದ್ದು ಅದರಲ್ಲಿ ಒಂದು ಲೀಟರ್ ಪ್ಲಾಸ್ಮಾವನ್ನು ನಾನು ನಮ್ಮ ತಂದೆಗೆ ನೀಡಿದ್ದೇನೆ ಈಗ ಅವರ ವಯಸ್ಸು 25 ವರ್ಷಗಳಷ್ಟು ಕಡಿಮೆಯಾಗಿದೆ ಎಂದು ಜಾನ್ಸನ್ ಹೇಳಿಕೊಂಡಿದ್ದಾರೆ.

Advertisment

ಇದನ್ನೂ ಓದಿ:ಏನಿದು ಸದ್ದು ಮಾಡುತ್ತಿರುವ ಮಿತವಾದ ಮದ್ಯಪಾನದ ಟ್ರೆಂಡ್? ಭಾರತಕ್ಕೆ ಈ ಪದ್ಧತಿ ಒಗ್ಗುತ್ತಾ?

ಇನ್ನು ಈ ಪ್ಲಾಸ್ಮಾ ಎಂದರೆ ಏನು ನೋಡುವುದಾದರೆ, ಪ್ಲಾಸ್ಮಾ ರಕ್ತದದಲ್ಲಿರುವ ಪ್ರಮುಖ ಅಂಶಗಳಲ್ಲಿ ಒಂದು. ರಕ್ತದಲ್ಲಿರುವ ಬಿಳಿ ರಕ್ತಕಣಗಳು, ಕೆಂಪರಕ್ತಕಗಣಳು ದೇಹಕ್ಕೆ ಎಷ್ಟು ಪ್ರಮುಖವೋ ಅಷ್ಟೇ ಪ್ರಾಮುಖ್ಯತೆ ಪ್ಲಾಸ್ಮಾಗೂ ಇದೆ. ಈ ದ್ರವವು ದೇಹದಾದ್ಯಂತ ರಕ್ತದ ಘಟಕಗಳನ್ನು ಸಾಗಿಸುತ್ತದೆ.ನಮ್ಮ ರಕ್ತದಲ್ಲಿ ಸುಮಾರು ಶೇಕಡಾ 55 ರಷ್ಟು ಪ್ಲಾಸ್ಮಾ ಇರುತ್ತದೆ ಅಂದ್ರೆ ನೀವು ನಂಬಲೇಬೇಕು. ಇದು ಕೂಡ ರಕ್ತದ ರೀತಿ ಕೆಂಪು ಬಣ್ಣದಿಂದಲೇ ಕೂಡಿದ್ದರು ಸಹ ಹೊರ ತೆಗೆದಾಗ ಹಳದಿ ದ್ರವ್ಯದಂತೆ ಗೋಚರಿಸುತ್ತದೆ. ದೇಹದಲ್ಲಿ ಪ್ಲಾಸ್ಮಾದ ಪ್ರಮಖ ಪಾತ್ರವೆಂದರೆ ಪೋಷಕಾಂಶಗಳನ್ನ, ಹಾರ್ಮೋನ್​ಗಳನ್ನ ಹಾಗೂ ಪ್ರೋಟಿನ್​ಗಳನ್ನ ದೇಹಕ್ಕೆ ಅಗತ್ಯವಿರುವ ಭಾಗಕ್ಕೆ ಕೊಂಡೊಯ್ಯುತ್ತದೆ.ರಕ್ತ ಪರಿಚಲನಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುವ ಪ್ಲಾಸ್ಮ ದೇಹದ ಎಲ್ಲಾ ಭಾಗಗಳಿಗೂ ರಕ್ತವನ್ನು ಸಾಗಿಸುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment