/newsfirstlive-kannada/media/post_attachments/wp-content/uploads/2025/02/MODI_US_1.jpg)
ಅಮೆರಿಕದ ಪಾಡ್​ಕಾಸ್ಟರ್ ಲೆಕ್ಸ್​ ಫ್ರಿಡ್​ಮನ್ ಎನ್ನುವರು ವಿಶ್ವದ ಅತ್ಯಂತ ಶ್ರೇಷ್ಠ ವ್ಯಕ್ತಿಗಳನ್ನು ಇಂಟರ್​ವ್ಯೂವ್ ಮಾಡಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ಮಾರ್ಕ್​ ಜುಕರ್​ಬರ್ಗ್, ಎಲಾನ್ ಮಸ್ಕ್, ಉಕ್ರೇನ್ ಅಧ್ಯಕ್ಷ ಝೇಲನ್​ಸ್ಕಿ, ಜೆಫ್ ಬೆಜೋಸ್, ಇವಾಂಕ ಟ್ರಂಪ್, ಸಾರಾ ವಾಲ್ಕರ್, ಚರಣ್ ರಂಗನಾಥ್ ಸೇರಿದಂತೆ ಜಗತ್ತಿನ ಹಲವು ಗಣ್ಯರನ್ನು ಸಂದರ್ಶಿಸಿದ್ದಾರೆ. ಸದ್ಯ ಇವರು ಕೆಲವೇ ಕೆಲವು ದಿನಗಳಲ್ಲಿ ಪ್ರಧಾನಿ ಮೋದಿಯವರನ್ನು ಸಂದರ್ಶನ ಮಾಡಲಿದ್ದಾರೆ.
ಪಾಡ್​ಕಾಸ್ಟರ್ ಲೆಕ್ಸ್​ ಫ್ರಿಡ್​ಮನ್ ಅವರು ಭಾರತದ ಪ್ರಧಾನಿ ಮೋದಿಯವರನ್ನು ಸಂದರ್ಶನ ಮಾಡಲು ಈಗಾಗಲೇ ಕೆಲ ತಯಾರಿಗಳನ್ನು ಮಾಡಿದ್ದಾರೆ. ಈಗಾಗಿಯೇ ಪ್ರಧಾನಿ ಮೋದಿರನ್ನ ಅತ್ಯಂತ ಆಕರ್ಷಕ ಮನುಷ್ಯರಲ್ಲಿ ಒಬ್ಬರು ಎಂದು ಬಣ್ಣಿಸಿದ್ದಾರೆ. ಈ ಸಂದರ್ಶನಕ್ಕಾಗಿಯೇ ಅಮೆರಿಕದಿಂದ ಭಾರತಕ್ಕೆ ವಿಮಾನದ ಮೂಲಕ ಇದೇ ಫೆಬ್ರುವರಿಯ ಕೊನೆಯಲ್ಲಿ ಪ್ರಯಾಣ ಮಾಡಲಾಗುವುದು ಎಂದು ಲೆಕ್ಸ್​ ಫ್ರಿಡ್​ಮನ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಅಂಗ ರಂಗ ವೈಭವಂಗ ನಡೆಯಿತು ಈ ಬೀದಿ ನಾಯಿಯ ಬರ್ತ್​ಡೇ.. ಹೇಗೆಲ್ಲಾ ಇತ್ತು ಆಚರಣೆ?
ಇಲ್ಲೊಂದು ಇನ್ನೊಂದು ವಿಶೇಷ ಎಂದರೆ ಧಾರ್ಮಿಕ ಕಾರ್ಯಕ್ರಮ ನಡೆಯುವ ವೇಳೆ ಈ ಹಿಂದೆ ಪ್ರಧಾನಿ ಮೋದಿಯವರು ಉಪವಾಸ ಮಾಡಿದ್ದರು. ಇದರಿಂದ ಪ್ರೇರಿತರಾದ ಲೆಕ್ಸ್​ ಫ್ರಿಡ್​ಮನ್ ಅವರು ಮೋದಿರನ್ನು ಸಂದರ್ಶನ ಮಾಡುವುದಕ್ಕೂ ಮೊದಲು ಭಾರತಕ್ಕೆ ಬಂದ ನಂತರ ನಾನು ಕೂಡ 3 ದಿನ ಅಂದರೆ 78 ಗಂಟೆಗಳ ಉಪವಾಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್​ ಖಾತೆಯಲ್ಲಿ ಲೆಕ್ಸ್​ ಫ್ರಿಡ್​ಮನ್ ಮಾಹಿತಿ ನೀಡಿದ್ದಾರೆ.
ಇದು ಈಗಿರುವಾಗಲೇ ಪ್ರಧಾನಿ ಮೋದಿಯವರು ಫೆ.12 ಹಾಗೂ 13 ಎರಡು ದಿನಗಳ ಕಾಲ ಅಮೆರಿಕ ಪ್ರವಾಸಕ್ಕೆ ತೆರಳಲಿದ್ದಾರೆ. ಈ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿ ವಲಸೆ ಹಾಗೂ ಎರಡು ದೇಶಗಳ ನಡುವಿನ ವ್ಯಾಪಾರ, ವ್ಯವಹಾರ ಕುರಿತು ಮಾತುಕತೆ ನಡೆಸಲಿದ್ದಾರೆ. ಇದಾದ ಮೇಲೆ ಲೆಕ್ಸ್​ ಫ್ರಿಡ್​ಮನ್ ಭಾರತಕ್ಕೆ ಆಗಮಿಸಿ ಮೋದಿರನ್ನು ಸಂದರ್ಶನ ಮಾಡಲಿದ್ದಾರೆ ಎಂದು ಹೇಳಲಾಗಿದೆ.
Narendra Modi is one of the most fascinating human beings I have ever studied.
I can't wait to talk to him on podcast for several hours in a few weeks.
On top of the complex, deep history of India, and his role in it, just the human side of Modi is really interesting. For…
— Lex Fridman (@lexfridman) February 7, 2025
">February 7, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ