ಮಹತ್ವದ ಆದೇಶಗಳಿಗೆ ಸಹಿ ಮಾಡಿ ಪೆನ್ ಎಸೆದ ಡೊನಾಲ್ಡ್‌ ಟ್ರಂಪ್‌; ಟಾಪ್ 10 ನಿರ್ಧಾರಗಳ ವಿವರ ಇಲ್ಲಿದೆ!

author-image
admin
Updated On
ಮಹತ್ವದ ಆದೇಶಗಳಿಗೆ ಸಹಿ ಮಾಡಿ ಪೆನ್ ಎಸೆದ ಡೊನಾಲ್ಡ್‌ ಟ್ರಂಪ್‌; ಟಾಪ್ 10 ನಿರ್ಧಾರಗಳ ವಿವರ ಇಲ್ಲಿದೆ!
Advertisment
  • ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರ ಬರಲು ಟ್ರಂಪ್‌ ನಿರ್ಧಾರ
  • ಇನ್ಮುಂದೆ ಅಮೆರಿಕಾದಲ್ಲಿ ಜನಿಸಿದ ವಿದೇಶಿ ಮಕ್ಕಳಿಗೆ ಪೌರತ್ವ ಸಿಗಲ್ಲ
  • ಎಲೆಕ್ಟ್ರಿಕ್ ವಾಹನಗಳ ಕಡ್ಡಾಯ ಆದೇಶ ಹಿಂಪಡೆದ ಅಧ್ಯಕ್ಷ ಟ್ರಂಪ್

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಟ್ ಟ್ರಂಪ್​​ಗೆ​ ಅದ್ಧೂರಿ ಪಟ್ಟಾಭಿಷೇಕ ನಡೆದಿದ್ದು, ಜೋ ಬೈಡನ್ ಆಡಳಿತಕ್ಕೆ ತೆರೆ ಬಿದ್ದಿದೆ. ಇಂದಿನಿಂದ ಅಮೆರಿಕದಲ್ಲಿ ಸುವರ್ಣಯುಗ ಅಂತ ಬಣ್ಣಿಸಿರೋ ಟ್ರಂಪ್ ಅಧಿಕಾರಕ್ಕೇರಿದ ಫಸ್ಟ್ ಡೇ ಫಸ್ಟ್​​ ಸ್ಟೆಪ್​​ ಮಹತ್ವದ ಘೋಷಣೆಗಳನ್ನು ಕೈಗೊಂಡಿದ್ದಾರೆ. ಇದರಿಂದ ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಸಂಚಲನವೂ ಉಂಟಾಗಿದೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ, ಬಲಾಢ್ಯ ದೇಶ. ಪ್ರಪಂಚದಲ್ಲೇ ಅತ್ಯಂತ ಸಂಪದ್ಭರಿತ, ಪ್ರಭಾವಯುತ ರಾಷ್ಟ್ರ. 78 ವರ್ಷದ ಡೊನಾಲ್ಡ್ ಟ್ರಂಪ್​ಗೆ ಈಗ ದೊಡ್ಡಣ್ಣನ ಪದವಿ ಸಿಕ್ಕಿದೆ. ಶ್ವೇತಭವನದ ಸಿಂಹಾಸನದಲ್ಲಿ ಕೂತು ಮುಂದಿನ 4 ವರ್ಷಗಳ ಕಾಲ ಟ್ರಂಪ್ ರಾಜ್ಯಭಾರ ನಡೆಯಲಿದೆ.

publive-image

ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್ 2.O ಯುಗಾರಂಭ
ಅಧಿಕಾರಕ್ಕೇರುತ್ತಲೇ ‘ದೊಡ್ಡಣ್ಣ’ ಮಹಾನ್ ಘೋಷಣೆ
ಅಮೆರಿಕದ ನೂತನ ಅಧ್ಯಕ್ಷರಾಗಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್​ ಟ್ರಂಪ್ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 2ನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಪದಗ್ರಹಣಗೈದ ಟ್ರಂಪ್ ಅಧಿಕಾರಕ್ಕೇರುತ್ತಲೇ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಈ ಪ್ರಮುಖ ನಿರ್ಧಾರಗಳನ್ನು ಕೈಗೊಂಡ ಡೊನಾಲ್ಡ್ ಟ್ರಂಪ್ ಅವರು ಸಹಿ ಮಾಡಿದ ಪೆನ್‌ಗಳಲ್ಲಿ ಎಸೆದು ಸಂಭ್ರಮ ಪಟ್ಟಿದ್ದಾರೆ.


">January 21, 2025

ಟಾಪ್ 10 ‘ಟ್ರಂಪ್​’ಕಾರ್ಡ್! 
ಆದೇಶ-01
ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರ ಬರಲು ನಿರ್ಧಾರ
ಚೀನಾಗಿಂತ ಹೆಚ್ಚು ಹಣ ಪಾವತಿಸುತ್ತಿರುವ ಹಿನ್ನೆಲೆ ಎಕ್ಸಿಟ್

ಆದೇಶ-02
ಅಮೆರಿಕದಲ್ಲಿ ಇನ್ಮುಂದೆ ವರ್ಕ್​ ಫ್ರಂ ಹೋಂ ಇರಲ್ಲ
ಕೋವಿಡ್ ಕಾರಣ ವರ್ಕ್​ ಫ್ರಂ ಹೋಂ ನೀಡಲಾಗಿತ್ತು

ಆದೇಶ-03
ಪ್ಯಾರಿಸ್​ ಕ್ಲೈಮೇಟ್ ಒಪ್ಪಂದದಿಂದಲೂ ಅಮೆರಿಕ ಎಕ್ಸಿಟ್
ತಾಪಮಾನ ಏರಿಕೆ ತಡೆಯುವ ನಿರ್ಣಯದಿಂದ ಹಿಂದಕ್ಕೆ

ಆದೇಶ-04
ಅಮೆರಿಕದಲ್ಲಿ ಇನ್ಮುಂದೆ ತೃತೀಯ ಲಿಂಗಕ್ಕೆ ಮಾನ್ಯತೆ ರದ್ದು
ಗಂಡು-ಹೆಣ್ಣು ಎರಡೇ ಲಿಂಗಗಳನ್ನು ಗುರುತಿಸಲು ನಿರ್ಧಾರ

ಆದೇಶ-05
ಅಮೆರಿಕದಲ್ಲಿ ಅಂದಾಜು 10 ಮಿಲಿಯನ್ ಅಕ್ರಮ ವಲಸಿಗರು ವಾಸ
ಅಕ್ರಮ ವಲಸಿಗರನ್ನು ಗಡೀಪಾರು ಮಾಡಲು ನಿರ್ಧರಿಸಿದ ಟ್ರಂಪ್​​

ಆದೇಶ-06
ಸಿಬಿಪಿ ಒನ್ ಅಪ್ಲಿಕೇಶನ್​ಗೆ ನಿಷೇಧ ಹೇರಿದ ಡೋನಾಲ್ಡ್​​ ಟ್ರಂಪ್
ಕಾನೂನುಬದ್ಧ ಅಮೆರಿಕ ಪ್ರವೇಶಕ್ಕಾಗಿ ಇದ್ದ CBP ಆ್ಯಪ್ ನಿಷೇಧ

ಆದೇಶ-07
ಎಲೆಕ್ಟ್ರಿಕ್ ವಾಹನಗಳ ಕಡ್ಡಾಯ ಆದೇಶ ಹಿಂಪಡೆದ ಅಧ್ಯಕ್ಷ ಟ್ರಂಪ್
ಅಮೆರಿಕ ಪ್ರಜೆಗಳು ತಮಗೆ ಬೇಕಾದ ಕಾರು ಖರೀದಿಸಲು ಸ್ವತಂತ್ರರು

ಆದೇಶ-08
ಕೆನಡಾ & ಮೆಕ್ಸಿಕೊ ಉತ್ಪನ್ನಗಳ ಮೇಲೆ ಶೇ.25 ಸುಂಕ ಹೆಚ್ಚಳ
ಚೀನಾದ ಸರಕು ಮೇಲೆ ಶೇ.60ರಷ್ಟು ಸುಂಕ ವಿಧಿಸಿದ ಟ್ರಂಪ್

ಆದೇಶ-09
ಇನ್ಮುಂದೆ ಅಮೆರಿಕಾದಲ್ಲಿ ಜನಿಸಿದ ವಿದೇಶಿ ಮಕ್ಕಳಿಗೆ ಪೌರತ್ವ ಸಿಗಲ್ಲ
ವಲಸೆ ತಪ್ಪಿಸಲು ಸ್ವಯಂಚಾಲಿತವಾಗಿ ಪೌರತ್ವ ನಿಯಮಕ್ಕೆ ನಿರ್ಬಂಧ

ಆದೇಶ-10
ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದರೆ ಭಯೋತ್ಪಾದಕ ಎಂದು ಘೋಷಣೆ
ಮಾದಕವಸ್ತು ಸಾಗಣೆ ಗ್ಯಾಂಗ್​ಗಳು ಭಯೋತ್ಪಾದಕ ಸಂಘಟನೆಗಳು

ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರ ಬರುವ ನಿರ್ಧಾರಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಅಂಕಿತ ಹಾಕಿದ್ದಾರೆ. ಚೀನಾಗಿಂತ ಅಮೆರಿಕ ಹೆಚ್ಚು ಹಣ ಪಾವತಿಸುತ್ತಿರುವ ಹಿನ್ನೆಲೆ ಎಕ್ಸಿಟ್ ಆಗಿದ್ದಾರೆ. ಇನ್ನು ಅಮೆರಿಕದಲ್ಲಿ ಸರಕಾರಿ ಇಲಾಖೆಗಳಲ್ಲಿ ಇನ್ಮುಂದೆ ವರ್ಕ್​ ಫ್ರಂ ಹೋಂ ಇರಲ್ಲ. ಕೋವಿಡ್ ಕಾರಣ ವರ್ಕ್​ ಫ್ರಂ ಹೋಂ ನೀಡಲಾಗಿತ್ತು.. ಪ್ಯಾರಿಸ್​ ಕ್ಲೈಮೇಟ್ ಒಪ್ಪಂದದಿಂದಲೂ ಅಮೆರಿಕ ಎಕ್ಸಿಟ್ ಆಗಿದೆ. ಜಾಗತಿಕ ತಾಪಮಾನ ಏರಿಕೆ ತಡೆಯುವ ನಿರ್ಣಯದಿಂದ ಹಿಂದೆ ಸರಿದಿದೆ. ಇನ್ನು ಅಮೆರಿಕದಲ್ಲಿ ಇನ್ಮುಂದೆ ತೃತೀಯ ಲಿಂಗಕ್ಕೆ ಮಾನ್ಯತೆ ರದ್ದು ಮಾಡಿದ್ದಾರೆ. ಗಂಡು-ಹೆಣ್ಣು ಎರಡೇ ಲಿಂಗಗಳನ್ನು ಗುರುತಿಸಲು ನಿರ್ಧಾರ ಮಾಡಿದ್ದಾರೆ. ಇನ್ನು ಅಮೆರಿಕದಲ್ಲಿ ಅಂದಾಜು 10 ಮಿಲಿಯನ್ ಅಕ್ರಮ ವಲಸಿಗರು ವಾಸ ಮಾಡುತ್ತಿದ್ದು ಅಕ್ರಮ ವಲಸಿಗರನ್ನು ಗಡೀಪಾರು ಮಾಡಲು ಟ್ರಂಪ್​​ ನಿರ್ಧರಿಸಿದ್ದಾರೆ. ಸಿಬಿಪಿ ಒನ್ ಅಪ್ಲಿಕೇಶನ್​ಗೆ ನಿಷೇಧ ಹೇರಿದ ಡೋನಾಲ್ಡ್​​ ಟ್ರಂಪ್ ಕಾನೂನುಬದ್ಧ ಅಮೆರಿಕ ಪ್ರವೇಶಕ್ಕಾಗಿ ಇದ್ದ CBP ಆ್ಯಪ್ ನಿಷೇಧ ಮಾಡಿ ಆದೇಶಿಸಿದ್ದಾರೆ. ಅಮೆರಿಕದಲ್ಲಿ ಎಲೆಕ್ಟ್ರಿಕ್ ವಾಹನಗಳ ಕಡ್ಡಾಯ ಆದೇಶವನ್ನ ಟ್ರಂಪ್ ಹಿಂಪಡೆದಿದ್ದಾರೆ. ಅಮೆರಿಕದ ಪ್ರಜೆಗಳು ತಮಗೆ ಬೇಕಾದ ಕಾರು ಖರೀದಿಸಲು ಸ್ವತಂತ್ರರು ಅಂತ ಘೋಷಿಸಿದ್ದಾರೆ. ಇನ್ನು ಕೆನಡಾ ಹಾಗೂ ಮೆಕ್ಸಿಕೊ ಉತ್ಪನ್ನಗಳ ಮೇಲೆ ಶೇ.25 ಸುಂಕ ಹೆಚ್ಚಳ ವಿಧಿಸಿದ್ದಾರೆ. ಇತ್ತ ಚೀನಾದ ಸರಕು ಮೇಲೆ ಶೇ.60ರಷ್ಟು ಸುಂಕ ವಿಧಿಸಿದ್ದಾರೆ. ಇನ್ನು ಇನ್ಮುಂದೆ ಅಮೆರಿಕದಲ್ಲಿ ಜನಿಸಿದ ವಿದೇಶಿ ಮಕ್ಕಳಿಗೆ ಇನ್ಮುಂದೆ ಅಲ್ಲಿನ ಪೌರತ್ವ ಸಿಗುವುದಿಲ್ಲ, ವಲಸೆ ತಪ್ಪಿಸಲು ಸ್ವಯಂಚಾಲಿತವಾಗಿ ಪೌರತ್ವ ನಿಯಮಕ್ಕೆ ನಿರ್ಬಂಧ ಹೇರಿದ್ದಾರೆ. ಇದರಿಂದಾಗಿ ಅಮೆರಿಕಾದಲ್ಲಿ ತಾತ್ಕಾಲಿಕ ವಿಸಾದಲ್ಲಿ ನೆಲೆಸಿರುವ ಭಾರತೀಯರಿಗೂ ಎಫೆಕ್ಟ್‌ ಆಗಲಿದೆ. ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದರೆ ಭಯೋತ್ಪಾದಕ ಎಂದು ಘೋಷಣೆ ಮಾಡಲಾಗುತ್ತೆ. ಮಾದಕವಸ್ತು ಸಾಗಣೆ ಗ್ಯಾಂಗ್​ಗಳು ಭಯೋತ್ಪಾದಕ ಸಂಘಟನೆಗಳು ಅಂತ ಘೋಷಣೆಗೆ ಸಹಿ ಹಾಕಿದ್ದಾರೆ.

ಇದನ್ನೂ ಓದಿ: ಒಬಾಮಾರಿಂದ ಬೇರೆಯಾದರಾ ಮಿಚೆಲ್?​: ಟ್ರಂಪ್ ಪ್ರಮಾಣ ವಚನಕ್ಕೆ ಏಕಾಂಗಿಯಾಗಿ ಬಂದಿದ್ದೇಕೆ ಮಾಜಿ ಅಧ್ಯಕ್ಷ? 

ಟ್ರಂಪ್ ಅಧಿಕಾರ ಹಿಡಿದಿದ್ದು ಕೆಲ ದೇಶಗಳಿಗೆ ಬಂಪರ್​ ಆಫರ್​ ಸಿಗುವ ಅವಕಾಶ ಹೆಚ್ಚಿಸಿದೆ. ಇನ್ನೂ ಕೆಲವು ದೇಶಗಳಿಗೆ ಭೀತಿ ಹೆಚ್ಚಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment