/newsfirstlive-kannada/media/post_attachments/wp-content/uploads/2024/11/TRUMP.jpg)
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಮತದಾನ ಮುಂದುವರೆದಿದೆ. ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇಬ್ಬರೂ ಗೆಲುವಿಗಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಚುನಾವಣೆಯ ಫಲಿತಾಂಶಗಳು ಏನಾಗುತ್ತವೆ ಅನ್ನೋ ಕುತೂಹಲದಲ್ಲಿ ಇಡೀ ವಿಶ್ವವೇ ಕಾದು ಕೂತಿದೆ.
ಮತದಾನ ಪ್ರಕ್ರಿಯೆ ಪ್ರಮುಖ ಘಟ್ಟ ತಲುಪಿದ್ದು, ಹಲವು ರಾಜ್ಯಗಳಿಂದ ಫಲಿತಾಂಶಗಳು ಹೊರಬರುತ್ತಿವೆ. ಕೆಂಟುಕಿ (kentucky), ವೆಸ್ಟ್ ವರ್ಜೀನಿಯಾ (West Virginia) ಮತ್ತು ಇಂಡಿಯಾನಾ(indiana)ದಲ್ಲಿ ಟ್ರಂಪ್ ಗೆದ್ದಿದ್ದಾರೆ. ಅದೇ ಸಮಯದಲ್ಲಿ ವರ್ಮೊಂಟ್ನಲ್ಲಿ ಕಮಲಾ ಹ್ಯಾರಿಸ್ ಗೆದ್ದಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಟ್ರಂಪ್ ಅವರು 177 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಮಲಾ ಹ್ಯಾರಿಸ್ 99 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಆಕಾಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರೂ ಕರ್ತವ್ಯ ಮರೆಯದ ಸುನೀತಾ ವಿಲಿಯಮ್ಸ್; ಮತದಾನ ಹೇಗೆ ಮಾಡ್ತಿದ್ದಾರೆ ಗೊತ್ತಾ?
ಡೊನಾಲ್ಡ್ ಟ್ರಂಪ್ ಅವರ ಭದ್ರಕೋಟೆ ಎನಿಸಿರುವ ಡೆಲವೇರ್​​​ನಲ್ಲಿ (Delaware) ಕಮಲಾ ಹ್ಯಾರಿಸ್ ಗೆಲುವು ಸಾಧಿಸಿದ್ದಾರೆ ಎಂಬ ವರದಿಯಾಗಿದೆ. ಜಗತ್ತೇ ಕಾತುರದಿಂದ ನಿರೀಕ್ಷಿಸುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಈಗ ನಿರ್ಣಾಯಕ ಘಟ್ಟ ತಲುಪಿದೆ. ಅಮೆರಿಕದ 47ನೇ ಅಧ್ಯಕ್ಷರು ಯಾರು ಎಂಬ ಮಾತು ಜೋರಾಗಿದೆ. ವಿಶ್ವದ ದೊಡ್ಡಣ್ಣನ ಆಡಳಿತ ಯಾರ ಕೈಯಲ್ಲಿರಲಿದೆ ಅನ್ನೋ ರಿಸಲ್ಟ್​ ಜನವರಿಯಲ್ಲಿ ಗೊತ್ತಾಗಲಿದೆ.
ಈ ಬಾರಿಯ ಅಮೆರಿಕ ಚುನಾವಣೆಯಲ್ಲಿ ಪೆನ್ಸಿಲ್ವೇನಿಯಾ, ಆ್ಯರಿಝೋನಾ, ನಾರ್ತ್ ಕರೊಲಿನಾದಲ್ಲಿ ನಡೆಯುವ ಮತದಾನ ಅತ್ಯಂತ ಮಹತ್ವದ್ದು ಎಂದು ಹೇಳಲಾಗಿದೆ. ಈ ರಾಜ್ಯಗಳಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಹೆಚ್ಚು ಮತ ಬರುತ್ತೋ ಅವರಿಗೆ ಅಧ್ಯಕ್ಷೀಯ ಪದವಿಗೆ ಸನಿಹವಾಗ್ತಾರೆಂಬ ಮಾತು ಇಂದು-ನಿನ್ನೆಯದಲ್ಲ. ಈ ರಾಜ್ಯಗಳಲ್ಲಿ ಮತದಾನ ಪೂರ್ವ ಸಮೀಕ್ಷೆಯನ್ನು ನಡೆಸಲಾಗಿದ್ದು, ಅವುಗಳಲ್ಲಿ ಶೇಕಡ 47ಕ್ಕೂ ಹೆಚ್ಚು ಮಂದಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್​ಗೆ ಗೆಲುವಿನ ಭವಿಷ್ಯ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us