ರಷ್ಯಾ-ಉಕ್ರೇನ್ ಯುದ್ಧದಲ್ಲಿ ಅಮೆರಿಕ ಮೂಗು ತೂರಿಸಿದೆ.. ಪುಟಿನ್​​​ ಕುದಿಯುವಂತೆ ಮಾಡಿದ ಟ್ರಂಪ್..!

author-image
Ganesh
Updated On
117 ಡ್ರೋನ್​​.. ಟ್ರಕ್​​ಗಳಲ್ಲಿ ಅಡಗಿದ್ದ ಬೇಟೆಗಾರರು; ರಷ್ಯಾದ ಮೇಲೆ ಉಕ್ರೇನ್ ಪುಷ್ಪಾ ಸ್ಟೈಲ್‌ ಅಟ್ಯಾಕ್‌ ಹೇಗಿತ್ತು?
Advertisment
  • ರಷ್ಯಾ ಮೇಲೆ ಸುಂಕ ಯುದ್ಧದ ಬೆದರಿಕೆ.. ಪುಟಿನ್​ಗೆ ಎಚ್ಚರಿಕೆ!
  • ಉಕ್ರೇನ್​ಗೆ ಶಸ್ತ್ರಾಸ್ತ್ರ ಪೂರೈಸಲು ಡೊನಾಲ್ಡ್​ ಟ್ರಂಪ್​ ಒಪ್ಪಿಗೆ!
  • 50 ದಿನಗಳಲ್ಲಿ ಯುದ್ಧ ನಿಲ್ಲಿಸಿ.. ಇಲ್ಲದಿದ್ರೆ ಶೇ.100 ರಷ್ಟು ಸುಂಕ!

ರಷ್ಯಾ-ಉಕ್ರೇನ್ ಯುದ್ಧದಲ್ಲಿ ಅಮೆರಿಕ ಮೂಗು ತೂರಿಸಿದೆ. ಅತ್ತ ರಷ್ಯಾ ವಿರುದ್ಧ ಸುಂಕ ಬೆದರಿಕೆ ಹಾಕಿರೋ ಅಮೆರಿಕ.. ಇತ್ತ ಉಕ್ರೇನ್​ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡ್ತಿದೆ. ಅಮೆರಿಕದ ಈ ನಡೆ ರಷ್ಯಾ ಕೋಪವನ್ನ ಡಬಲ್​ ಮಾಡಿದೆ.

ಸದ್ಯದ ಪರಿಸ್ಥಿತಿಯಲ್ಲಿ ಯುದ್ಧ ಅಂದ್ರೆ ನೆನಪಾಗೋದು ರಷ್ಯಾ-ಉಕ್ರೇನ್ ನಡುವೆ ನಡೀತಿರೋ ಕಾಳಗ.. ಇವರಿಬ್ಬರ ನಡುವೆ ನನ್ನಿಂದ ಜಗತ್ತು.. ನಾನು ಹೇಳಿದ್ದೇ ಪೈನಲ್.. ಅಂತ ಬಡಾಯಿ ಬಾಬಾ ಟ್ರಂಪ್​ ಎಂಟ್ರಿ ಕೊಟ್ಟಿದ್ದಾರೆ. ಯುದ್ಧ ನಿಲ್ಲಿಸ್ತೀನಿ ಅಂತ ಬಿಲ್ಡಪ್​ ಕೊಡ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಅಲ್ಲೆಲ್ಲೋ ಹೋಗ್ತಿದ್ದ ಇರುವೆಯನ್ನ ಮೈ ಮೇಲೆ ಬಿಟ್ಟುಕೊಂಡಂತೆ ಕಾಣ್ತಿದೆ.

ಇದನ್ನೂ ಓದಿ: ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿಗೆ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್.. ಇನ್ನೊಂದು ಹೆಜ್ಜೆ ಬಾಕಿ ಅಷ್ಟೇ!

publive-image

ರಷ್ಯಾ ಮೇಲೆ ಸುಂಕ ಯುದ್ಧದ ಬೆದರಿಕೆ.. ಪುಟಿನ್​ಗೆ ಎಚ್ಚರಿಕೆ!

ಯುದ್ಧ ನಿಲ್ಲಿಸಿ.. ಬಿಲ್ಡಪ್​ ತಗಳ್ಳೋ ತವಕದಲ್ಲಿರೋ ಟ್ರಂಪ್.. ಯುದ್ಧಕ್ಕೆ ಸಾಥ್​ ಕೊಡ್ತಿದ್ದಾರೆ. ಅತ್ತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಅನ್ನ ಕರೆಸಿ ಟ್ರಂಪ್ ಮೀಟಿಂಗ್​ ಮಾಡಿದ್ದರು. ಉಕ್ರೇನ್​ ವಿರುದ್ಧ ನೀವು ಸಾರಿರೋ ಯುದ್ಧ ನಿಲ್ಲಿಸಿ ಅಂತ ಪುಟಿನ್ ಬಳಿ ಮನವಿ ಮಾಡಿದ್ರು. ಇದಕ್ಕೆ ಬಗ್ಗದ ಪುಟಿನ್​, ಇಲ್ಲ.. ಆಗೋದಿಲ್ಲ.. ಅಂತ ಫೇಸ್​ ಟು ಫೇಸ್​ ಹೇಳಿದ್ರು. ಇದರಿಂದ ಕೂಪಿತಗೊಂಡ ಟ್ರಂಪ್​ ಮಾರನೇಯ ದಿನ ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ ಜೊತೆ ಮೀಟಿಂಗ್​ ಇಟ್ಟಿದ್ರು.

50 ದಿನಗಳಲ್ಲಿ ಯುದ್ಧ ನಿಲ್ಲಿಸಿ.. ಇಲ್ಲದಿದ್ರೆ ಶೇ.100 ರಷ್ಟು ಸುಂಕ!

50 ದಿನಗಳಲ್ಲಿ ಉಕ್ರೇನ್‌ನಲ್ಲಿ ಮಾಡ್ತಿರೋ ಯುದ್ಧವನ್ನ ಕೊನೆಗೊಳಿಸಲು ಒಪ್ಪಂದ ಮಾಡಿಕೊಳ್ಳದಿದ್ದರೆ ರಷ್ಯಾದ ಮೇಲೆ ಶೇಕಡ 100 ರಷ್ಟು ಸುಂಕಗಳನ್ನ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಓವಲ್ ಕಚೇರಿಯಲ್ಲಿ ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆರೊಂದಿಗಿನ ಸಭೆಯಲ್ಲಿ ಅವರು ಈ ಎಚ್ಚರಿಕೆಯನ್ನ ನೀಡಿದ್ದಾರೆ.

ತುಂಬಾ ತುಂಬಾ ಅತೃಪ್ತಿಯಾಗಿದೆ. 50 ದಿನಗಳಲ್ಲಿ ನಾವು ಒಪ್ಪಂದ ಮಾಡಿಕೊಳ್ಳದಿದ್ದರೆ, ಸುಮಾರು 100% ರಷ್ಟು ಸುಂಕಗಳನ್ನು ವಿಧಿಸಿದರೆ, ನಾವು ತುಂಬಾ ಕಠಿಣ ಸುಂಕಗಳನ್ನು ವಿಧಿಸುತ್ತೇವೆ-ನ್ಯಾಟೋ ಪ್ರಧಾನ ಕಾರ್ಯದರ್ಶಿ

ಇದನ್ನೂ ಓದಿ: ಸರ್ಕಾರಿ ಕೆಲಸ ಹುಡುಕುತ್ತಿದ್ರೆ ಇಲ್ಲಿದೆ ಸುವರ್ಣಾವಕಾಶ.. 2 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ

publive-image

ಬೆಳವಣಿಗೆಗಳ ನಡುವೆ ಡೊನಾಲ್ಡ್​ ಟ್ರಂಪ್, ಇದೀಗ ಮಹತ್ವದ ಘೋಷಣೆಗಳನ್ನ ಮಾಡಿದ್ದಾರೆ. ಯುದ್ಧ ನಿಲ್ಲಿಸೋ ಮ್ಯಾಟರ್ ಬಿಟ್ಟು, ಯುದ್ಧ ಮಾಡೋದಕ್ಕೆ ಸಾಥ್​ ಕೊಡ್ತಿದ್ದಾರೆ. ಉಕ್ರೇನ್​ಗೆ ಶಸ್ತ್ರಾಸ್ತ್ರ ಪೂರೈಸಲು ಡೊನಾಲ್ಡ್​ ಟ್ರಂಪ್​ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ನ್ಯಾಟೊ ಮೂಲಕ ಉಕ್ರೇನ್​ಗೆ ಹೆಚ್ಚಿನ ಶಸ್ತ್ರಾಸ್ತ್ರ ಪೂರೈಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇದಕ್ಕೆ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ಸಂಸತ ವ್ಯಕ್ತಪಡಿಸಿದ್ದಾರೆ. ನಮ್ಮ ಜನರ ರಕ್ಷಿಸಲು ಬೆಂಬಲ ನೀಡಿರುವ ಟ್ರಂಪ್​ಗೆ ಕೃತಜ್ಞನಾಗಿದ್ದೇನೆ ಎಂದಿದ್ದಾರೆ.

ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಹಾಲ್ ರಾಜೀನಾಮೆ

ಉಕ್ರೇನ್​ನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್‌ನ ನಾಯಕತ್ವದ ತಂಡದಲ್ಲಿ ವ್ಯಾಪಕವಾದ ಬದಲಾವಣೆಯನ್ನ ಪ್ರಸ್ತಾಪಿಸಿ ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಹಾಲ್ ರಾಜೀನಾಮೆ ನೀಡಿದ್ದಾರೆ. ಅದ್ಹೇನೆ ಇರಲಿ, ಬಡಾಯಿ ಬಾಬಾ ಟ್ರಂಪ್​ ನಡೆ ಬಗ್ಗೆ ಭಾರೀ ಚರ್ಚೆಗಳು ಎದ್ದಿದೆ. ಯುದ್ಧ ನಿಲ್ಲಿಸುವವರು, ಯಾಗೆ ಮತ್ತೊಂದು ರಾಷ್ಟ್ರಕ್ಕೆ ಶಸ್ತ್ರಾಸ್ತ್ರ ಸಹಾಯ ಮಾಡ್ತಿದ್ದಾರೆ ಅಂತ ಪ್ರಶ್ನೆಗಳು ಎದ್ದಿವೆ.

ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಗುಡ್​ನ್ಯೂಸ್​​.. 70 ವರ್ಷ ಮೇಲ್ಪಟ್ಟ ಎಲ್ಲರಿಗೂ 5 ಲಕ್ಷ ರೂ ಆರೋಗ್ಯ ವಿಮೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment