newsfirstkannada.com

Breaking News: ಕೆಂಪು ಸಮುದ್ರದಲ್ಲಿ ಯುದ್ಧ.. ಹೌತಿ ಬಂಡುಕೋರರ ಮೇಲೆ ಅಮೆರಿಕ, ಇಂಗ್ಲೆಂಡ್ ಸ್ಟ್ರೈಕ್..!

Share :

Published January 12, 2024 at 8:08am

Update January 12, 2024 at 8:10am

    ಅಂತಾರಾಷ್ಟ್ರೀಯ ಹಡಗುಗಳ ಮೇಲೆ ಹೌತಿ ದಾಳಿ

    ಎಷ್ಟೇ ಎಚ್ಚರಿಕೆ ನೀಡಿದ್ದರೂ ಬುದ್ಧಿ ಕಲಿಯದ ಹೌತಿಗಳು

    ಇರಾನ್ ಬೆಂಬಲಿತ ಹೌತಿಗಳಿಗೆ ಬೈಡನ್ ಎಚ್ಚರಿಕೆ

ಇರಾನ್ ಬೆಂಬಲಿತ ಹೌತಿ (Houthi) ಬಂಡುಕೋರರ ಮೇಲೆ ಅಮೆರಿಕ ಮತ್ತು ಬ್ರಿಟನ್​ ಜಂಟಿಯಾಗಿ ದಾಳಿ ಮಾಡಿ ಎಚ್ಚರಿಕೆ ನೀಡಿವೆ. ಕಳೆದ ವರ್ಷದ ಕೊನೆಯಲ್ಲಿ (ಡಿಸೆಂಬರ್​) ಹೌತಿಗಳು ಕೆಂಪು ಸಮುದ್ರದ (Red Sea) ಮೇಲೆ ಅಂತಾರಾಷ್ಟ್ರೀಯ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ನಂತರ ಅಮೆರಿಕ ಮತ್ತು ಲಂಡನ್ ಸ್ಟ್ರೈಕ್ ಮಾಡಿವೆ.

ದಾಳಿ ಮಾಡಿರುವ ಬಗ್ಗೆ ಯೆಮೆನ್​​ ಕನ್ಫರ್ಮ್ ಮಾಡಿದೆ. ಇನ್ನು, ಅಮೆರಿಕ ಅಧ್ಯಕ್ಷ ಜೋ ಬೈಡನ್ ತಡವಾಗಿ ಹೇಳಿಕೆ ನೀಡಿದ್ದು.. ಅಗತ್ಯವಿದ್ದರೆ ಮುಂದಿನ ಕ್ರಮಗಳನ್ನು ಕೈಗೊಳ್ಳಲು ಹಿಂಜರಿಯಲ್ಲ. ಯುನೈಟೆಡ್ ಸ್ಟೇಟ್ಸ್ ಹಾಗೂ ಪಾಲುದಾರರು (partners) ನಮ್ಮ ಸಿಬ್ಬಂದಿ ಮೇಲಿನ ದಾಳಿಯನ್ನು ಸಹಿಸಲ್ಲ. ಕಡಲಿನ ನ್ಯಾವಿಗೇಷನ್ ಆಫ್ ಫ್ರೀಡಂ ಹಾಳು ಮಾಡಲು ಬಿಡಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಬ್ರಿಟನ್‌ನ ರಕ್ಷಣಾ ಸಚಿವಾಲಯ ಕೂಡ ಹೇಳಿಕೆ ನೀಡಿದ್ದು, ಹೌತಿಗಳು ವ್ಯಾಪಾರಿ ಶಿಪ್ಪಿಂಗ್‌ಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಅಟ್ಯಾಕ್ ಮಾಡಲಾಗಿದೆ ಎಂದಿದೆ.

ಯೆಮೆನ್‌ನ ಹೆಚ್ಚಿನ ಭಾಗವನ್ನು ಹೌತಿಗಳು ನಿಯಂತ್ರಿಸುತ್ತಿದ್ದಾರೆ. ಅಂತೆಯೇ ಕೆಂಪು ಸಮುದ್ರದ ಹಡಗು ಮಾರ್ಗಗಳಲ್ಲಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಮೂಲಕ ಅಂತಾರಾಷ್ಟ್ರೀಯ ಹಡಗುಗಳಿಗೆ ತೊಂದರೆ ನೀಡುತ್ತಿದ್ದಾರೆ. ಹೌತಿಗಳು ಇಲ್ಲಿಯವರೆಗೆ 27 ಹಡಗುಗಳ ಮೇಲೆ ದಾಳಿ ಮಾಡಿದ್ದಾರೆ. ಯುರೋಪ್ ಮತ್ತು ಏಷ್ಯಾ ನಡುವಿನ ಪ್ರಮುಖ ಮಾರ್ಗದಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ ವ್ಯವಹಾರಗಳಿಗೆ ಅಡ್ಡಿಪಡಿಸ್ತಿದ್ದಾರೆ. ಇದನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆ ಮತ್ತು ಇತರೆ ದೇಶಗಳು ಕರೆ ಮಾಡಿ ಎಚ್ಚರಿಕೆ ನೀಡಿದ್ದವು. ಆದರೂ ಹೌತಿಗಳು ತಮ್ಮ ಅಟ್ಟಹಾಸ ನಿಲ್ಲಿಸದ ಹಿನ್ನೆಲೆಯುಲ್ಲಿ ದಾಳಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ಕೆಂಪು ಸಮುದ್ರದಲ್ಲಿ ಯುದ್ಧ.. ಹೌತಿ ಬಂಡುಕೋರರ ಮೇಲೆ ಅಮೆರಿಕ, ಇಂಗ್ಲೆಂಡ್ ಸ್ಟ್ರೈಕ್..!

https://newsfirstlive.com/wp-content/uploads/2024/01/US-3.jpg

Load More