ಭಾರತದ ಅಳಿಯ.. JD ವ್ಯಾನ್ಸ್ ಪತ್ನಿ ಉಷಾ ಕುರಿತ ಟಾಪ್‌ 5 ಕುತೂಹಲಕಾರಿ ಸಂಗತಿಗಳು ಇಲ್ಲಿವೆ!

author-image
admin
Updated On
ಭಾರತದ ಅಳಿಯ.. JD ವ್ಯಾನ್ಸ್ ಪತ್ನಿ ಉಷಾ ಕುರಿತ ಟಾಪ್‌ 5 ಕುತೂಹಲಕಾರಿ ಸಂಗತಿಗಳು ಇಲ್ಲಿವೆ!
Advertisment
  • 4 ದಿನಗಳ ಮಟ್ಟಿಗೆ ಕುಟುಂಬ ಸಮೇತ ಭಾರತಕ್ಕೆ ಆಗಮನ
  • ಉಷಾ ವ್ಯಾನ್ಸ್ ಅವರ ಪೂರ್ವಜರು ಆಂಧ್ರಪ್ರದೇಶದವರು
  • ಿಮೊದಲ ಬಾರಿಗೆ ಭಾರತಕ್ಕೆ ಆಗಮಿಸಿರುವ ಭಾರತದ ಅಳಿಯ

ನವದೆಹಲಿ: ಅಮೆರಿಕ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಅವರು 4 ದಿನಗಳ ಮಟ್ಟಿಗೆ, ಕುಟುಂಬ ಸಮೇತ ಭಾರತಕ್ಕೆ ಆಗಮಿಸಿದ್ದಾರೆ. ಭಾರತಕ್ಕೆ ಬರುತ್ತಿದ್ದಂತೆ ಅವರ ಮೊದಲ ಭೇಟಿ ಪ್ರಧಾನಿ ನರೇಂದ್ರ ಮೋದಿಯವರನ್ನ ಭೇಟಿಯಾಗುವುದಾಗಿದೆ. ಇಂದು ರಾತ್ರಿ ಜೆ.ಡಿ ವ್ಯಾನ್ಸಿ ಅವರಿಗಾಗಿ ವಿಶೇಷ ಔತಣಕೂಟ ಏರ್ಪಡಿಸಲಾಗಿದೆ. ಈ ವೇಳೆ ಸುಂಕ ಸಮರದ ಮಧ್ಯೆ 2 ರಾಷ್ಟ್ರಗಳ ಮಧ್ಯೆ ದ್ವಿಪಕ್ಷೀಯ ಸಂಬಂಧಗಳ ಕುರಿತು ಉಭಯ ನಾಯಕರು ಮಹತ್ವದ ಚರ್ಚೆ ನಡೆಸುವ ನಿರೀಕ್ಷೆಯಿದೆ.

publive-image

ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಭಾರತದ ಅಳಿಯ. ಜೆಡಿ ಮದುವೆ ಆಗಿರುವುದು ಭಾರತ ಮೂಲದ ಉಷಾ ಎಂಬುವವರನ್ನು. ಇದೇ ಮೊದಲ ಬಾರಿಗೆ ಈ ಕುಟುಂಬ ಭಾರತಕ್ಕೆ ಆಗಮಿಸಿದೆ. ದೆಹಲಿ ಸೇರಿ, ಅನೇಕ ಕಡೆ ಸುತ್ತಾಡುತ್ತಿರುವ ಈ ಜೋಡಿ ಶಾಪಿಂಗ್​, ಮಂದಿರಗಳ ಭೇಟಿಯೂ ಮಾಡಲಿದೆ. ಹಾಗೆ ರಾಜಸ್ಥಾನದ ಜೈಪುರಕ್ಕೆ ತೆರಳುವ ನಿರೀಕ್ಷೆ ಇದೆ.. ಅಲ್ಲಿ ಅವರು ರಾಂಬಾಗ್ ಅರಮನೆಯಲ್ಲಿ ವಿಶ್ರಾಂತಿ ಪಡೆಯುವ ಪ್ಲ್ಯಾನ್​ ಇದೆ. ಈ ಅರಮನೆ ಹಿಂದಿನ ರಾಜಮನೆತನದ ಅತಿಥಿ ಗೃಹವಾಗಿತ್ತು. ಈಗ ಐಷಾರಾಮಿ ಹೋಟೆಲ್ ಆಗಿ ರೂಪಾಂತರಗೊಂಡಿದೆ.

ಇದನ್ನೂ ಓದಿ: ಭಾರತದಲ್ಲಿ ಅಮೆರಿಕ ಉಪಾಧ್ಯಕ್ಷ JD ವ್ಯಾನ್ಸ್‌ ಮಕ್ಕಳ ತುಂಟಾಟ.. ಸ್ಪೆಷಲ್‌ ಫೋಟೋ, ವಿಡಿಯೋ ಇಲ್ಲಿದೆ! 

publive-image

ಎರಡನೇ ದಿನ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಅಮೇರ್ ಕೋಟೆ ಸೇರಿದಂತೆ ಹಲವಾರು ಐತಿಹಾಸಿಕ ಹೆಗ್ಗುರುತುಗಳನ್ನು ಅನ್ವೇಷಿಸುವ ಉದ್ದೇಶವೂ ಇದೆ. ಮಧ್ಯಾಹ್ನದ ನಂತರ, ವ್ಯಾನ್ಸ್ ಜೈಪುರದ ರಾಜಸ್ಥಾನ ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜೆ.ಡಿ ಮಾತನಾಡಲಿದ್ದಾರೆ. ಬುಧವಾರ ಬೆಳಗ್ಗೆ, ಅಮೆರಿಕದ ಉಪಾಧ್ಯಕ್ಷರ ಕುಟುಂಬ ಆಗ್ರಾಗೆ ಪ್ರಯಾಣಿಸಲಿದ್ದು, ಅಲ್ಲಿ ಅವರು ಐತಿಹಾಸಿಕ ತಾಜ್ ಮಹಲ್‌ಗೆ ಭೇಟಿ ಕೊಡಲಿದ್ದಾರೆ.

publive-image

ಉಷಾ ವ್ಯಾನ್ಸ್ ಕುಟುಂಬದ ಬಗ್ಗೆ 5 ಆಸಕ್ತಿಕರ ಸಂಗತಿಗಳು!

1. ಉಷಾ ವ್ಯಾನ್ಸ್ ಅವರ ಪೂರ್ವಜರು ಆಂಧ್ರಪ್ರದೇಶದ ವಡ್ಲೂರು ಮೂಲದವರು. ಉಷಾ ವ್ಯಾನ್ಸ್ 1980ರ ದಶಕದಲ್ಲಿ ಅಮೆರಿಕಾದಲ್ಲಿ ಜನಿಸಿದ್ದರು. ಉಷಾ ಅವರ ಪೋಷಕರು ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ವಲಸೆ ಹೋಗಿದ್ದರು.
2. ಉಷಾ ವ್ಯಾನ್ಸ್.. ಅಮೆರಿಕಾದ ಸ್ಯಾನ್ ಡಿಯಾಗೋದಲ್ಲಿ, ಮೇಲ್ಮಧ್ಯಮ ವರ್ಗದ ಕುಟುಂಬವಾದ, ಚಿಲುಕುರಿ ರಾಧಾಕೃಷ್ಣ ಮತ್ತು ಲಕ್ಷ್ಮಿ ದಂಪತಿಗಳಿಗೆ ಜನಿಸಿದ್ದರು. ಆಳವಾದ ಧಾರ್ಮಿಕತೆ ಇರುವ ಹಿಂದೂ ಕುಟುಂಬ ಇದು.
3. ಉಷಾ ವ್ಯಾನ್ಸ್ ಅವರ ತಂದೆ ಐಐಟಿ ಮದ್ರಾಸ್‌ನಿಂದ ಪದವಿ ಪಡೆದ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದರೆ, ತಾಯಿ ವೃತ್ತಿಯಲ್ಲಿ ಜೀವಶಾಸ್ತ್ರಜ್ಞೆ ಆಗಿದ್ದಾರೆ.
4. ಉಷಾ ವ್ಯಾನ್ಸ್ ತಮ್ಮ ಪತಿ ಜೆ.ಡಿ. ವ್ಯಾನ್ಸ್ ಅವರನ್ನು ಯೇಲ್ ಕಾನೂನು ಶಾಲೆಯಲ್ಲಿ ಓದುತ್ತಿದ್ದಾಗ ಭೇಟಿಯಾಗಿದ್ದರು.
5. ಉಷಾ ಮತ್ತು ಜೆ.ಡಿ. ವ್ಯಾನ್ಸ್ 2014 ರಲ್ಲಿ ವಿವಾಹವಾಗಿದ್ದರು. ಈಗ ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment