/newsfirstlive-kannada/media/post_attachments/wp-content/uploads/2024/12/US-WOMEN-ATE-CAT.jpg)
ಅಮೆರಿಕಾದಲ್ಲಿ 27 ವರ್ಷದ ಯುವತಿಯೊಬ್ಬಳಿಗೆ ಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ನೀಡಿದೆ. ಆಕೆಯ ವಿಚಿತ್ರ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಧೀಶರು ಅಲೆಕ್ಸಿಸ್ ಫೆರೆಲ್ ಎಂಬ ಯುವತಿಯನ್ನು ನೀನು ಇಡೀ ದೇಶಕ್ಕೆ ನಾಚಿಕೆಯನ್ನುಂಟು ಮಾಡುವಂತಹ ಕೆಲಸ ಮಾಡಿದ್ದೀಯ ಎಂದು ಛೀಮಾರಿ ಹಾಕಿದೆ ಅದಕ್ಕೆ ಕಾರಣ ಆ ಮಹಿಳೆ ತಿಂದ ಮಾಂಸಾಹಾರ. ಮಾಂಸಾಹಾರ ತಿಂದಿದ್ದಕ್ಕೆ ಒಂದು ವರ್ಷ ಶಿಕ್ಷೆನಾ ಅಂತ ಗಾಬರಿಯಾಗಬಹುದು. ಆದ್ರೆ ಆ ಮಹಿಳೆ ಕೊಂದು ತಿಂದಿದ್ದು ಬೆಕ್ಕನ್ನು.
ಅಮೆರಿಕಾದ ಈ ಮಾರ್ಜಾಲ ಭಕ್ಷಕಿಯನ್ನು ಪೊಲೀಸರು ಬಂಧಿಸಿ ಕೋರ್ಟ್ ಎದುರು ಹಾಜರು ಪಡಿಸಿದ್ದರು. 27 ವರ್ಷದ ಅಲೆಕ್ಸಿಸ್ ಫೆರೆಲ್ ತನ್ನ ಮನೆಯೆದುರೇ ಒಂದು ಭಯಾನಕ ಕೆಲಸ ಮಾಡಿದ್ದಾಳೆ. ಬೆಕ್ಕುಗಳನ್ನು ಸಾಯಿಸಿ ಅವುಗಳನ್ನು ಬೇಯಿಸಿ ತಿನ್ನುತ್ತಿದ್ದಳು ಎಂಬ ದೂರು ಆಕೆಯ ವಿರುದ್ಧ ಹೋಗಿದೆ. ಕೂಡಲೇ ಆಕೆಯ ಮನೆಗೆ ತೆರಳಿದ ಪೊಲೀಸರ ಬಾಡಿ ಕ್ಯಾಮರಾದಲ್ಲಿ ಆಕೆ ಬೆಕ್ಕಿನ ಮಾಂಸವನ್ನು ತಿನ್ನುತ್ತಿದ್ದದ್ದು ರೆಕಾರ್ಡ್ ಆಗಿದೆ.
ಇದನ್ನೂ ಓದಿ:ಬಾಡಿಗೆಗೆ ಬೇಕಾ ಬಾಯ್ ಫ್ರೆಂಡ್ಸ್.. ದಿನಕ್ಕೆ ₹1700-3400; ಹುಡುಗಿಯರ ಪ್ಲಾನ್‌ಗೆ ಪೋಷಕರು ಶಾಕ್!
ಈ ಪ್ರಕರಣ ಕೋರ್ಟ್ ಮೆಟ್ಟಿಲು ಏರಿದೆ. ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಧೀಶ ಫ್ರ್ಯಾಂಕ್ ಫೋಚೈನೆ ಇದೊಂದು ರಾಷ್ಟ್ರೀಯ ಮುಜುಗರ. ನೀನು ಮಾಡಿದ ಕೃತ್ಯ ಇಡೀ ದೇಶವನ್ನೇ ಮುಜುಗರಕ್ಕೆ ಈಡು ಮಾಡಿದೆ. ಅದೆಲ್ಲದಕ್ಕಿಂತ ಹೆಚ್ಚಾಗಿ ನಿನಗೆ ನೀನೇ ಮುಜುಗರಪಡುವಂತಹ ಕೃತ್ಯ ಎಸಗಿದ್ದೀಯಾ ಅಂತ ಛೀಮಾರಿ ಹಾಕಿ ಆಕೆಗೆ ಒಂದು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ.
ಆಕೆ ಬೆಕ್ಕನ್ನು ಕೊಂದು ತಿಂದಿರುವ ವಿಚಾರಕ್ಕೆ ಬೇಸರ ವ್ಯಕ್ತಪಡಿಸಿದ ನ್ಯಾಯಾಧೀಶರು ನೀನು ಇಡೀ ಸಮುದಾಯಕ್ಕೆ ಅಪಾಯಕಾರಿ. ಯಾರೂ ಕೂಡ ಯಾವುದೇ ಪ್ರಾಣಿಗೆ ಈ ರೀತಿಯಾಗಿ ಮಾಡಲು ಸಾಧ್ಯವಾ? ಆ ಪ್ರಾಣಿ ಅಕ್ಷರಶಃ ಮಗುವಿನಂತಹದ್ದು. ನಾನು ಹೇಳುತ್ತಿರುವ ಮಾತು ನಿನಗೆ ಅರ್ಥವಾಗುತ್ತೊ ಇಲ್ಲವೋ ಗೊತ್ತಿಲ್ಲ. ನನಗಾದ ಬೇಸರವನ್ನು ನಾನಿಲ್ಲಿ ವ್ಯಕ್ತಪಡಿಸಲು ಆಗುತ್ತಿಲ್ಲ. ನನಗೆ ಅಕ್ಷರಶಃ ಶಾಕ್ ಉಂಟಾಗಿದೆ ಎಂದು ಹೇಳಿದ್ದಾರೆ.
ಇನ್ನು ಈ ಮಹಿಳೆಯ ಹಿನ್ನೆಲೆಯನ್ನು ಕೆಣಕಿದ ಪೊಲೀಸರಿಗೆ ಇನ್ನೂ ಬೆಚ್ಚಿ ಬೀಳಿಸುವ ಮಾಹಿತಿ ಸಿಕ್ಕಿದೆ. ಕಳ್ಳತನ, ಮಕ್ಕಳಿಗೆ ಅಪಾಯವನ್ನುಂಟು ಮಾಡುವ ಕೃತ್ಯದಲ್ಲಿ ಈಕೆ ತೊಡಗಿರುವ ಬಗ್ಗೆಯೂ ಮಾಹಿತಿ ಇದೆ. ಅದು ಮಾತ್ರವಲ್ಲ ಈಕೆ ಆಗಾಗ ಮಾದಕ ದ್ರವ್ಯ ಹಾಗೂ ಮದ್ಯಸೇವನೆಯನ್ನು ಮಾಡಿ ಈ ರೀತಿಯಾಗಿ ಬೆಕ್ಕುಗಳನ್ನು ಕದ್ದು ಅವುಗಳನ್ನು ಕೊಂದು ತಿನ್ನುತ್ತಿದ್ದಳು ಎಂಬ ಮಾಹಿತಿಯೂ ಕೂಡ ಆಚೆ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ