ಟ್ರಂಪ್‌ಗೆ ಹೆದರಿ ಗರ್ಭಪಾತದ ಮಾತ್ರೆಗಳಿಗೆ ಮುಗಿಬಿದ್ದ ಅಮೆರಿಕಾದ ಯುವತಿಯರು; ಯಾಕೆ ಗೊತ್ತಾ?

author-image
admin
Updated On
ಟ್ರಂಪ್‌ಗೆ ಹೆದರಿ ಗರ್ಭಪಾತದ ಮಾತ್ರೆಗಳಿಗೆ ಮುಗಿಬಿದ್ದ ಅಮೆರಿಕಾದ ಯುವತಿಯರು; ಯಾಕೆ ಗೊತ್ತಾ?
Advertisment
  • ಟ್ರಂಪ್ ಅಧ್ಯಕ್ಷರಾಗಿ ಆಯ್ಕೆ ಆಗುತ್ತಿದ್ದಂತೆ ಯುವತಿಯರಿಗೆ ಭಯ
  • 24 ಗಂಟೆಯಲ್ಲಿ 10 ಸಾವಿರ ಅಬಾರ್ಶನ್ ಮಾತ್ರೆಗಳಿಗೆ ಬೇಡಿಕೆ
  • ಅಬಾರ್ಶನ್ ಬಗ್ಗೆ ಮಾಹಿತಿ ನೀಡುವ ವೆಬ್‌ಸೈಟ್‌ಗಳು ಕ್ರ್ಯಾಶ್‌!

ವಾಷಿಂಗ್ಟನ್‌: ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆ ಆಗುತ್ತಿದ್ದಂತೆ ಯುವತಿಯರು ಭಯಬಿದ್ದಿದ್ದಾರೆ. ಅಷ್ಟೇ ಅಲ್ಲ ಅಬಾರ್ಶನ್ ಮಾತ್ರೆಗಳನ್ನು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಕೇವಲ 24 ಗಂಟೆಯಲ್ಲಿ 10 ಸಾವಿರ ಅಬಾರ್ಶನ್ ಮಾತ್ರೆಗಳಿಗೆ ಬೇಡಿಕೆ ಇಟ್ಟಿದ್ದಾರೆ.

ಟ್ರಂಪ್‌ ಅಧಿಕಾರ ಸ್ವೀಕಾರಕ್ಕೂ ಮುನ್ನ ಅಮೆರಿಕಾದಲ್ಲಿ ಅಬಾರ್ಶನ್ ಮಾತ್ರೆಗಳಿಗೆ ಭಾರೀ ಡಿಮ್ಯಾಂಡ್‌ ಬಂದಿದೆ. ಅಬಾರ್ಶನ್ ಮಾತ್ರೆ ಪೂರೈಸುವ ಏಡ್‌ ಆಕ್ಸೆಸ್ ಕಂಪನಿಗೆ ಜನರು ದಿಢೀರ್ ಬೇಡಿಕೆ ಇಟ್ಟಿದ್ದಾರೆ. ಇದರಿಂದಾಗಿ ಏಡ್ ಆಕ್ಸೆಸ್ ಕಂಪನಿಯ ವೆಬ್ ಸೈಟ್ ಕ್ರ್ಯಾಶ್ ಆಗಿದೆ.

ಇದನ್ನೂ ಓದಿ: 24 ಗಂಟೆಗಳಲ್ಲಿ 6 ಕಾಸ್ಮೆಟಿಕ್ ಸರ್ಜರಿಗೆ ಒಳಗಾದ ಮಹಿಳೆ ದುರಂತ ಅಂತ್ಯ; ಆಗಿದ್ದೇನು? 

ಅಮೆರಿಕಾದಲ್ಲಿ ಅಬಾರ್ಶನ್ ಮಾತ್ರೆಗಳಿಗೆ ನಿತ್ಯ ಬರುತ್ತಿದ್ದ ಬೇಡಿಕೆಗಿಂತ 17 ಪಟ್ಟು ಹೆಚ್ಚಿನ ಬೇಡಿಕೆ ಬಂದಿದೆ. ಅಬಾರ್ಶನ್ ಔಷಧಿಗಳ ಬಗ್ಗೆ ಮಾಹಿತಿ ನೀಡುವ ವೆಬ್‌ಸೈಟ್‌ಗೂ ಹೆಚ್ಚಿನ ಜನರು ಲಾಗಿನ್ ಮಾಡುತ್ತಿದ್ದಾರೆ. ಪ್ಲ್ಯಾನ್ ಸಿ ಎನ್ನುವ ವೆಬ್ ಸೈಟ್‌ಗೆ ಒಂದೇ ದಿನ 82,200 ಮಂದಿ ಲಾಗಿನ್‌ ಆಗಿದ್ದಾರೆ.

publive-image

ಮಾತ್ರೆಗಳ ಡಿಮ್ಯಾಂಡ್‌ಗೆ ಕಾರಣವೇನು?
ಅಮೆರಿಕಾದ ಕೆಲವು ರಾಜ್ಯಗಳಲ್ಲಿ ಸದ್ಯ ಅಬಾರ್ಶನ್ ಕಾನೂನುಬದ್ದವಾದರೆ ಇನ್ನೂ ಕೆಲ ರಾಜ್ಯಗಳಲ್ಲಿ ಅಕ್ರಮವಾಗಿದೆ. ಡೊನಾಲ್ಡ್ ಟ್ರಂಪ್ ಅಮೆರಿಕಾದಲ್ಲಿ ಅಬಾರ್ಶನ್ ವಿರೋಧಿ ಕಾಯ್ದೆ ಜಾರಿಗೆ ತರುವ ಭಯ ಜನರಲ್ಲಿ ಮೂಡಿದೆ. ಹೀಗಾಗಿ ಅಬಾರ್ಶನ್ ಮಾತ್ರೆಗಳಿಗೆ ಯುವತಿಯರು, ಮಹಿಳೆಯರು ಮುಗಿಬಿದ್ದಿದ್ದಾರೆ.

ಅಮೆರಿಕಾದ ರಾಜ್ಯಗಳಲ್ಲಿರುವ ಅಬಾರ್ಶನ್ ಕಾನೂನು ಬದ್ದತೆಯಿಂದ ತಮಗೆ ನೆರವಾಗುತ್ತೆ ಎಂಬ ನಂಬಿಕೆ ಈಗ ಜನರಲ್ಲಿ ಇಲ್ಲ. ಹೀಗಾಗಿ ಅಬಾರ್ಶನ್ ಮಾತ್ರೆ, ಔಷಧಿಯನ್ನು ಜನರು ಮುಗಿಬಿದ್ದು ಖರೀದಿಸಿ ಸ್ಟಾಕ್ ಇಟ್ಟುಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment