/newsfirstlive-kannada/media/post_attachments/wp-content/uploads/2024/11/Donald-Trump-US-Election-2024-2.jpg)
ಅಮೆರಿಕಾ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಗೆಲುವಿನ ನಗೆ ಬೀರಿದ್ದಾರೆ. ಡೊನಾಲ್ಡ್ ಟ್ರಂಪ್ 2ನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಗೆಲುವಿನ ಬಳಿಕ ಟ್ರಂಪ್ ಪತ್ನಿ ಮೆಲಾನಿಯ ಟ್ರಂಪ್, ಟ್ರಂಪ್ ದಾಂಪತ್ಯ ಜೀವನದ ಬಗ್ಗೆ ಎಲ್ಲೆಡೆಯೂ ಚರ್ಚೆಯಾಗುತ್ತಿದೆ.
ಇದನ್ನೂ ಓದಿ: ಭಾರೀ ನಿರೀಕ್ಷೆ ಮೂಡಿಸಿದ್ದ ಕಮಲಾ ಹ್ಯಾರಿಸ್ ಸೋಲು; ಅಸಲಿ ಕಾರಣಗಳೇನು ಗೊತ್ತಾ?
ಡೊನಾಲ್ಡ್ ಟ್ರಂಪ್ ಒಟ್ಟು ಮೂವರನ್ನು ಮದುವೆಯಾಗಿದ್ದಾರೆ. ಟ್ರಂಪ್ ಅವರ ಮೂವರು ಪತ್ನಿಯರು ಕೂಡ ಮಾಡೆಲ್ ಕಮ್ ನಟಿಯರು. ಸದ್ಯ ಈಗಿರುವ ಮೂರನೇ ಹೆಂಡತಿ ಸಹ ಸ್ಲೋವೇನಿಯಾ-ಅಮೆರಿಕನ್ ಮಾಡೆಲ್ ಆಗಿದ್ದಾರೆ.
1946 ಜೂನ್ 14ರಂದು ಜನಿಸಿರುವ ಡೊನಾಲ್ಡ್ ಟ್ರಂಪ್ ತಮ್ಮ 31ನೇ ವಯಸ್ಸಿನಲ್ಲಿ ಅಂದರೆ 1977ರಲ್ಲಿ ಮಾಡೆಲ್ ಇವಾನಾರನ್ನು ಮೊದಲ ಮದುವೆಯಾಗಿದ್ದರು. ಟ್ರಂಪ್ ಮತ್ತು ಇವಾನಾ ಇಬ್ಬರೂ 13 ವರ್ಷ ಜೊತೆಗಿದ್ದು 1990ರಲ್ಲಿ ದೂರವಾದ್ರು.
ಇದಾದ ಬಳಿಕ 1993ರಲ್ಲಿ ಮಾಡೆಲ್, ನಟಿ ಕಮ್ ಸಿಂಗರ್ ಮಾರ್ಲಾ ಮೈಪಲ್ಸ್ ಜೊತೆ ಟ್ರಂಪ್ 2ನೇ ಮದುವೆಯಾಗಿದ್ದರು. 1997ರಲ್ಲಿ ಇಬ್ಬರು ಪರಸ್ಪರ ದೂರವಾದ್ರು. 1999ರಲ್ಲಿನ ಅಧಿಕೃತವಾಗಿ ವಿಚ್ಛೇದನ ಪಡೆದರು.
ಇದಾದ 6 ವರ್ಷಗಳ ಬಳಿಕ ಟ್ರಂಪ್ ಜೀವನಕ್ಕೆ ಎಂಟ್ರಿ ಕೊಟ್ಟಿದ್ದು ಮೆಲಾನಿಯಾ. 2000ರಲ್ಲಿಯೇ ಮೆಲಾನಿಯಾ ಪ್ರೇಮದಲ್ಲಿ ಬಿದ್ದಿದ್ದ ಟ್ರಂಪ್ 5 ವರ್ಷ ಜೊತೆಯಾಗಿ ಓಡಾಡಿ 2005ರಲ್ಲಿ ಟ್ರಂಪ್ ತಮ್ಮ 59ನೇ ವಯಸ್ಸಿನಲ್ಲಿ ಮೆಲಾನಿಯಾರನ್ನು ಮದುವೆಯಾಗುತ್ತಾರೆ. ಇವರಿಬ್ಬರ ನಡುವಿನ 19 ವರ್ಷ ವಯಸ್ಸಿನ ಅಂತರವಿದೆ.
2024ರಲ್ಲಿ ಟ್ರಂಪ್ ಚುನಾವಣೆ ಪ್ರಚಾರದಲ್ಲಿ ಮೆಲಾನಿಯಾ ಗೈರು ಹಾಜರಾತಿ ಬಗ್ಗೆ ಹಲವು ಪ್ರಶ್ನೆಗಳು ಮೂಡಿ ಬಂದಿದ್ದವು. ಅವರಿಬ್ಬರೂ ದೂರವಾಗಿದ್ದಾರೆ ಅಂತ ಹೇಳಲಾಗುತ್ತಿತ್ತು. ಆದರೆ ಟ್ರಂಪ್ ಹತ್ಯೆ ಯತ್ನದ ಬಳಿಕ ಮೆಲಾನಿಯ ತಮ್ಮ ಪತಿ ಟ್ರಂಪ್ಗೆ ಬೆಂಬಲವಾಗಿ ಪೋಸ್ಟ್ ಮಾಡಿದ್ದು ಮಾತ್ರವಲ್ಲ, ಟ್ರಂಪ್ ಜೊತೆಗೆ ಪ್ರಚಾರದಲ್ಲಿ ಕಾಣಿಸಿಕೊಂಡರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ