newsfirstkannada.com

ಅಕ್ರಮ ಸಾಗಾಟಕ್ಕೆ ಸರ್ಕಾರಿ ವಾಹನ ಬಳಕೆ! 2KG ಬೆಳ್ಳಿ ವಸ್ತು ಮತ್ತು 1.32 ಲಕ್ಷ ರೂಪಾಯಿ ನಗದು ವಶಕ್ಕೆ!

Share :

Published March 20, 2024 at 12:49pm

Update March 20, 2024 at 12:50pm

    ಚುನಾವಣೆಯ ಸಮಯದಲ್ಲಿ ಅಕ್ರಮವಾಗಿ ವಸ್ತುಗಳ ಸಾಗಾಟ

    ಸರ್ಕಾರಿ ವಾಹನ ಬಳಸಿಕೊಂಡು ಹಣ ಹಾಗೂ ಬೆಳ್ಳಿ ವಸ್ತುಗಳನ್ನ ಸಾಗಾಟ

    ವಿಚಾರ ತಿಳಿದು ದಾಳಿ ನಡೆಸಿದ ಚುನಾವಣಾ ಅಧಿಕಾರಿಗಳು, ವಾಹನ ಸಮೇತ ಜಪ್ತಿ

ಗದಗ: ಲೋಕಸಭಾ ಚುನಾವಣೆಯ ಸಮಯದಲ್ಲಿ ಅಕ್ರಮವಾಗಿ ವಸ್ತುಗಳ ಸಾಗಾಟ ಹೆಚ್ಚಾಗಿದೆ. ಇದೀಗ ಸರ್ಕಾರಿ ವಾಹನ ಬಳಸಿಕೊಂಡು ಹಣ ಹಾಗೂ ಬೆಳ್ಳಿ ವಸ್ತುಗಳನ್ನ ಸಾಗಿಸಿ ಸಿಕ್ಕಿಬಿದ್ದ ಘಟನೆ ಮುನ್ನೆಲೆಗೆ ಬಂದಿದೆ. ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಚಿಲಝರಿ ಕ್ರಾಸ್ ಘಟನೆ ಬೆಳಕಿಗೆ ಬಂದಿದೆ.

ಸರ್ಕಾರಿ ವಾಹನದಲ್ಲಿ ಸಾಗಾಟ

ಸಾರಿಗೆ ಸಂಸ್ಥೆಯ ವಾಹನದಲ್ಲಿ ಅಕ್ರಮವಾಗಿ ಹಣ ಹಾಗೂ ಬೆಳ್ಳಿ ವಸ್ತುಗಳನ್ನ ಸಾಗಿಸಲು ಮುಂದಾಗಿದ್ದಾರೆ. ಈ ವಿಚಾರ ತಿಳಿದು ದಾಳಿ ನಡೆಸಿದ ಚುನಾವಣಾ ಅಧಿಕಾರಿಗಳು ವಾಹನ ಚಾಲಕ ಮಹಮ್ಮದ್ ಗೌಸ್ ಸಮೇತ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

2 ಕೆಜಿ ಬೆಳ್ಳಿ ಮತ್ತು 1.32 ಲಕ್ಷ ನಗದು

ಟಾಟಾ ಏಸ್ ವಾಹನದಲ್ಲಿ ಅಕ್ರಮವಾಗಿ ಹಣ, ಬೆಳ್ಳಿ ಸಾಗಿಸುತ್ತಿದ್ದರು. ಸುಮಾರು 2 ಕೆಜಿ ಬೆಳ್ಳಿ ವಸ್ತು ಮತ್ತು 1.32 ಲಕ್ಷ ನಗದು ಸಾಗಿಸಲು ಸಾರಿಗೆ ಸಂಸ್ಥೆಯ ಟಾಟಾ ಏಸ್ ವಾಹನ ಬಳಸಿದ್ದರು. ಹುಬ್ಬಳ್ಳಿಯಿಂದ ಗಜೇಂದ್ರಗಡ ಪಟ್ಟಣಕ್ಕೆ ಬರುತ್ತಿದ್ದಾಗ ಅವರನ್ನು ಹಿಡಿಯಲಾಗಿದೆ.

ಅರೆಸ್ಟ್​ .. ಅರೆಸ್ಟ್​

ಗದಗ ಮೂಲಕ ಗುರುವಂಧನ ದಿಗಂಬರ ಪವಾಸ್ಕರ್ ಮತ್ತು ಚಾಲಕ ಮಹಮ್ಮದ್​ ಗೌಸ್​ ಬೆಳ್ಳಿ ವಸ್ತುಗಳನ್ನ ಗದಗ ನಗರದಿಂದ ಗಜೇಂದ್ರಗಡ ಪಟ್ಟಣಕ್ಕೆ ಸಾಗಿಸುತ್ತಿದ್ದರು. ದಾಖಲೆಗಳು ಇಲ್ಲದೆ ಬೆಳ್ಳಿ ವಸ್ತುಗಳನ್ನು ಸಾಗಿಸುತ್ತಿದ್ದರು. ವಿಚಾರ ತಿಳಿದಂತೆ ಚುನಾವಣಾ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಕ್ರಮ ಸಾಗಾಟಕ್ಕೆ ಸರ್ಕಾರಿ ವಾಹನ ಬಳಕೆ! 2KG ಬೆಳ್ಳಿ ವಸ್ತು ಮತ್ತು 1.32 ಲಕ್ಷ ರೂಪಾಯಿ ನಗದು ವಶಕ್ಕೆ!

https://newsfirstlive.com/wp-content/uploads/2024/03/gadaga.jpg

Load More