/newsfirstlive-kannada/media/post_attachments/wp-content/uploads/2025/04/NASSCOM-LHIF-1.jpg)
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಇವತ್ತು AI ಲೋಕದ ಸಂಗಮವೇ ಆಗಿತ್ತು. ವೈದ್ಯಕೀಯ ಲೋಕದ ದಿಗ್ಗಜರ ಸಮಾಗಮ ಈ ಕಾರ್ಯಕ್ರಮದ ಮೆರುಗನ್ನು ಹೆಚ್ಚು ಮಾಡಿತ್ತು. ಜೊತೆಗೆ ಹೊಸ ಹೊಸ ಗ್ರೌಂಡ್ ಬ್ರೇಕಿಂಗ್ ಟೆಕ್ನಾಲಜಿಯ ಆವಿಷ್ಕಾರಗಳು ನೆರೆದಿದ್ದವರನ್ನು ಮಂತ್ರಮುಗ್ಧರನ್ನಾಗಿಸಿತ್ತು.
ಆಡು ಮುಟ್ಟದ ಸೊಪ್ಪಿಲ್ಲ ಅನ್ನೋ ಗಾದೆ ಮಾತು ನಿಮಗೆ ಗೊತ್ತೇ ಇದೆ. ಆದ್ರೆ ಈಗ ಇದನ್ನು ಬದಲಾಯಿಸಿ, AI ಕಾಲಿಡದ ಕ್ಷೇತ್ರವೇ ಇಲ್ಲ ಅಂತ ಹೇಳಬಹುದು. ಎಲ್ಲಾ ಕಡೆ ಈಗ AIದ್ದೇ ಪಾರುಪತ್ಯ. ಹಾಗೇನೇ ವೈದ್ಯಕೀಯ ಲೋಕದಲ್ಲಿ AI ತಂತ್ರಜ್ಞಾನ ಯಾವ ರೀತಿ ಬದಲಾವಣೆಗಳನ್ನು ತಂದಿದೆ. ಯಾವ ಮಟ್ಟಿಗೆ ವೈದ್ಯಕೀಯ ಲೋಕ ಇದರಿಂದ ಉಪಯೋಗ ಪಡೆದುಕೊಳ್ಳಬಹುದು ಅಂತ ಇವತ್ತು ಒಂದು ಸುದೀರ್ಘವಾದ ಕಾರ್ಯಕ್ರಮ ನಡೀತು. ನ್ಯೂಸ್ ಫಸ್ಟ್ ಚಾನೆಲ್ ಈ ಕಾರ್ಯಕ್ರಮದ ಮೀಡಿಯಾ ಪಾರ್ಟನರ್ ಆಗಿದೆ.
NASSCOMನ ಜೀವ ವಿಜ್ಞಾನ ಮತ್ತು ಆರೋಗ್ಯ ರಕ್ಷಣಾ ನಾವೀನ್ಯತೆ ವೇದಿಕೆ (LHIF)ನ 14ನೇ ಆವೃತ್ತಿಯ AI Disrupt: Transforming Diagnosis, Discovery and Delivery ಕಾರ್ಯಕ್ರಮ. ಬೆಂಗಳೂರಿನ ಲೀಲಾ ಪ್ಯಾಲೇಸ್ನಲ್ಲಿ ನಡೆದ ಈ ಸಮ್ಮಿಟ್ನಲ್ಲಿ ದೇಶ ವಿದೇಶದ ಪ್ರತಿಷ್ಟಿತ ಮೆಡಿಕಲ್ ರಿಸರ್ಚ್ ಹಾಗೂ ಡಯಾಗ್ನೋಸ್ಟಕ್ ಕಂಪನಿಗಳು ಭಾಗಿಯಾಗಿದ್ದವು. ನೋವೋ ನಾರ್ಡೆಸ್ಕ್, ಬ್ಯಾಕ್ಸ್ಟರ್, ಆಮ್ಜೆನ್ನಂತಹ ಪ್ರತಿಷ್ಟಿತ ವಿದೇಶಿ ಕಂಪನಿಗಳು ಇದರಲ್ಲಿ ಪಾಲ್ಗೊಂಡು ಉಪಯುಕ್ತ ಮಾಹಿತಿ ಹಂಚಿಕೊಂಡರು.
LHIF 14ನೇ ಆವೃತ್ತಿಯು ಪ್ರಮುಖವಾಗಿ AI ನೇತೃತ್ವದ ರೋಗನಿರ್ಣಯ ಮತ್ತು AI-ಚಾಲಿತ ವಿತರಣಾ ವ್ಯವಸ್ಥೆಗಳ ಮೂಲಕ ರೋಗಿಗಳ ಆರೈಕೆಯ ಕೇಂದ್ರೀಕೃತವಾಗಿತ್ತು. ಜೊತೆಗೆ ಮೆಡಿಕಲ್ ಸಾಧನಗಳಲ್ಲಿ AI ಪಾತ್ರ, LLMs/VLMs ಪ್ರವೇಶಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು.
ಇದನ್ನೂ ಓದಿ: AI ಕ್ಷೇತ್ರದಲ್ಲಿ ಭರಪೂರ ಉದ್ಯೋಗಗಳು.. ಏನೆಲ್ಲ ಜಾಬ್ ಸೃಷ್ಟಿ ಆಗ್ತಿದೆ..? ದೇಶದ ಟಾಪ್ 7 ಸಂಸ್ಥೆಗಳು..!
ಅಷ್ಟೇ ಅಲ್ಲದೇ ಇಲ್ಲಿ ನಮ್ಮ ದೇಶದ ಗ್ರೌಂಡ್ ಬ್ರೇಕಿಂಗ್ ಟೆಕ್ನಾಲಜಿಯ ಮೂಲಕ ಛಾಪು ಮೂಡಿಸಿದ ಕಂಪನಿಗಳ ಮುಖ್ಯಸ್ಥರು ಕೂಡ ಪಾಲ್ಗೊಂಡು ಈ ಟಾಪಿಕ್ ಬಗ್ಗೆ ಉಪಯುಕ್ತ ಮಾಹಿತಿ ಹಂಚಿಕೊಂಡ್ರು. ಜೊತೆಗೆ ತಮ್ಮ ಆವಿಷ್ಕಾರಗಳ ಬಗ್ಗೆ ಪ್ರಸ್ತುತ ಪಡಿಸಿದ್ರು.
ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ನಾಸ್ಕಾಮ್ನ ಎಂಟರ್ಪ್ರೈಸ್ ಲೀಡ್, ವಾಸುಕಿ ಕಶ್ಯಪ್ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಮಾತನಾಡಿದರು. ಪ್ರತೀ ವರ್ಷದಂತೆ ಈ ವರ್ಷವೂ ನಾಸ್ಕಾಮ್ ತನ್ನ ವಿಶಿಷ್ಟ ಪ್ರಯೋಗದ ಮುಖಾಂತರ ಒಂದು ವಿನೂತನ ಕಾರ್ಯಕ್ರಮವನ್ನು ಯಶಸ್ವಿಯಾಗಿದೆ.
NASSCOMನ ಜೀವ ವಿಜ್ಞಾನ ಮತ್ತು ಆರೋಗ್ಯ ರಕ್ಷಣಾ ನಾವೀನ್ಯತೆ ವೇದಿಕೆ (LHIF)ನ 14ನೇ ಆವೃತ್ತಿಯ AI Disrupt: Transforming Diagnosis, Discovery and Delivery ಕಾರ್ಯಕ್ರಮದಿಂದ ಜನರಿಗೆ AI ವೈದ್ಯಕೀಯ ಲೋಕದಲ್ಲಿ ಮಾಡ್ತಾ ಇರೋ ಮೋಡಿ ಹಾಗೂ ಪರಿಣಾಮಕಾರಿ ಒಳನೋಟಗಳ ಬಗ್ಗೆ ಸಂಪೂರ್ಣ ಮಾಹಿತಿ ಸಿಕ್ಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ