/newsfirstlive-kannada/media/post_attachments/wp-content/uploads/2024/12/mushrooms.jpg)
ಬಾಯಿ ರುಚಿಗೆ ಅದ್ಭುತ ಆಹಾರ ಅಂದರೆ ಅದು ಅಣಬೆ. ಈ ಅಣಬೆ ಆಹಾರದ ರುಚಿಯನ್ನು ಹೆಚ್ಚಿಸುವುದೂ ಅಲ್ಲದೇ, ಆರೋಗ್ಯಕ್ಕೂ ಪ್ರಯೋಜನಕಾರಿ. ಅದಕ್ಕಾಗಿಯೇ ಆಹಾರ ತಜ್ಞರು ಅಣಬೆಯನ್ನು ಪೋಷಕಾಂಶಗಳ ಶಕ್ತಿ ಕೇಂದ್ರ ಎನ್ನುತ್ತಾರೆ. ಆಹಾರದಲ್ಲಿ ಆಗಾಗ ಅಣಬೆ ಸೇವನೆಯಿಂದ ಏನೆಲ್ಲ ಲಾಭ ಇದೆ ಅನ್ನೊದ್ರ ವಿವರ ಇಲ್ಲಿದೆ.
ಸಮೃದ್ಧ ಪೋಷಕಾಂಶ
ಅಣಬೆಯಲ್ಲಿ ಅಗತ್ಯವಾದ ಜೀವಸತ್ವಗಳು ಇರುತ್ತವೆ. ವಿಟಮಿನ್ ಡಿ, ಬಿ-ವಿಟಮಿನ್, ಪೊಟ್ಯಾಸಿಯಮ್‌ನಂತಹ ಖನಿಜಗಳು ಸಮೃದ್ಧವಾಗಿವೆ.
ಅಧಿಕ ರೋಗನಿರೋಧಕ ಶಕ್ತಿ: ಅಣಬೆಗಳು ಬೀಟಾ-ಗ್ಲುಕಾನ್ಸ್ ಒಳಗೊಂಡಿರುತ್ತವೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಣಬೆ ಸೇವನೆಯಿಂದ ಸೋಂಕುಗಳ ವಿರುದ್ಧ ಹೋರಾಡಲು ದೇಹವು ಬಲಗೊಳ್ಳುತ್ತದೆ.
ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೃದ್ರೋಗ ಮತ್ತು ಕ್ಯಾನ್ಸರ್ ನಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಹೃದಯಕ್ಕೆ ಒಳ್ಳೆಯದು
ಅಣಬೆಗಳು ಕೊಲೆಸ್ಟ್ರಾಲ್ ಹೊಂದಿರುವುದಿಲ್ಲ. ಸೋಡಿಯಂ ಕಡಿಮೆ. ಇದು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಪೊಟ್ಯಾಸಿಯಮ್ ಅಂಶವು ಆರೋಗ್ಯಕರ ರಕ್ತದೊತ್ತಡ ಮಟ್ಟ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಕರುಳಿನ ಆರೋಗ್ಯಕ್ಕಾಗಿ
ಅಣಬೆಗಳು ಪ್ರಿಬಯಾಟಿಕ್ಸ್ ಹೊಂದಿರುತ್ತವೆ. ಇದು ಮಾನವ ದೇಹದಲ್ಲಿನ ಉತ್ತಮ ಬ್ಯಾಕ್ಟೀರಿಯಾವನ್ನು ಪೋಷಿಸುತ್ತದೆ. ಇದು ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯ ಉತ್ತೇಜಿಸಲು ಸಹಾಯ ಮಾಡುತ್ತದೆ. ಜೊತೆಗೆ ಸಸ್ಯಾಹಾರಿಗಳಿಗೆ ಅಣಬೆ ಅತ್ಯುತ್ತಮ ಆಹಾರ. ಪ್ರೋಟೀನ್ ಅಧಿಕವಾಗಿರುತ್ತದೆ. ಅದಕ್ಕಾಗಿಯೇ ಅವುಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ.
ದೇಹಕ್ಕೆ ಉಷ್ಣವನ್ನುಂಟು ಮಾಡುತ್ತದೆ. ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ನ್ನು ನಿವಾರಿಸುತ್ತದೆ. ಮೂಳೆಗಳು ಗಟ್ಟಿಯಾಗಿರುತ್ತದೆ. ಲೈಂಗಿಕ ಸಮಸ್ಯೆ ಇದ್ದಲಿ, ವೀರ್ಯಾಣು ಸಂಖ್ಯೆ ಕಡಿಮೆ ಇದ್ದರೆ ಮಶ್ರೂಮ್ ತಿನ್ನೋದು ಉತ್ತಮ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us