/newsfirstlive-kannada/media/post_attachments/wp-content/uploads/2023/06/Cooking-Oil.jpg)
ಆಧುನಿಕ ಜಗತ್ತಿನಲ್ಲಿ ಜೀವನ ಶೈಲಿ ಬದಲಾಗೋದು ಸಹಜ. ಅಚ್ಚರಿ ಎಂದರೆ ಇಲ್ಲಿ ಆರೋಗ್ಯವಂತರು ಸಿಗೋದು ಬಹಳ ಕಷ್ಟ. ಬಹುತೇಕರು ಒಂದಲ್ಲ, ಮತ್ತೊಂದು ಕಾಯಿಲೆಯಿಂದ ಬಳಲುತ್ತಲೇ ಇರುತ್ತಾರೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ವಾಸ ಮಾಡುವವರಿಗೆ ಕ್ಯಾನ್ಸರ್​ ಬರೋದು ಸಾಮಾನ್ಯ ಆಗಿಬಿಟ್ಟಿದೆ. ಇದು ಬಹಳ ಅಪಾಯಕಾರಿ. ಮನುಷ್ಯರ ಜೀವವನ್ನೇ ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರ.
ಇತ್ತೀಚಿನ ದಿನಗಳಲ್ಲಿ ಅನೇಕ ಮಂದಿ ಕ್ಯಾನ್ಸರ್​ಗೆ ಬಲಿಯಾಗುತ್ತಲೇ ಇದ್ದಾರೆ. ಕಾರ್ಸಿನೋಮಾ, ಸಾರ್ಕೋಮಾ ಮತ್ತು ಲ್ಯುಕೇಮಿಯಾದಂತಹ ಕ್ಯಾನ್ಸರ್​ಗಳು ಅನೇಕ ಮಂದಿಯನ್ನು ಬಾದಿಸುತ್ತಿವೆ. ಕಳೆದ ವರ್ಷ ಇಡೀ ಜಗತ್ತಿನಾದ್ಯಂತ 20 ಮಿಲಿಯನ್​ಗೂ ಹೆಚ್ಚು ಕ್ಯಾನ್ಸರ್​ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 10 ಮಿಲಿಯನ್​ಗೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದರೆ ವರದಿಗಳು ಹೇಳುತ್ತಿವೆ.
ಕ್ಯಾನ್ಸರ್​ಗೆ ಕಾರಣವೇನು?
ಸ್ತನ, ಶ್ವಾಸಕೋಶ, ಕೊಲೊರೆಕ್ಟಲ್, ಪ್ರಾಸ್ಟೇಟ್, ಹೊಟ್ಟೆ, ಪಿತ್ತಜನಕಾಂಗ ಸುಮಾರು 20ಕ್ಕೂ ಹೆಚ್ಚು ವಿವಿಧ ಕ್ಯಾನ್ಸರ್​​ಗಳು ಇವೆ. ಇದಕ್ಕೆ ಮುಖ್ಯ ಕಾರಣ ಇಂದಿನ ಜೀವನಶೈಲಿ, ಆಹಾರ ಪದ್ಧತಿ, ಧೂಮಪಾನ ಮತ್ತು ಮದ್ಯಪಾನ. ಇದರ ಮಧ್ಯೆ ಅಡುಗೆ ಮನೆಯಲ್ಲಿ ಬಳಸೋ ವಸ್ತುಗಳು ಕೂಡ ಕ್ಯಾನ್ಸರ್​ ಬರಲು ಕಾರಣ ಎಂಬುದು ಆಘಾತಕಾರಿ ಸುದ್ದಿ.
/newsfirstlive-kannada/media/post_attachments/wp-content/uploads/2024/07/Lung-cancer-1.jpg)
ಏನಿದು ಆಘಾತಕಾರಿ ಸುದ್ದಿ?
ಇತ್ತೀಚೆಗೆ ಬಹುತೇಕರ ಮನೆಯಲ್ಲೂ ಪ್ಲಾಸ್ಟಿಕ್, ನಾನ್ ಸ್ಟಿಕ್, ಅಲ್ಯೂಮಿನಿಯಂ ಪಾತ್ರೆ ಬಳಸಲಾಗುತ್ತಿದೆ. ಇವುಗಳ ಬಳಕೆಯಿಂದಲೇ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಅದರಲ್ಲೂ ನಾನ್ ಸ್ಟಿಕ್ ಪಾತ್ರೆಗಳು ಸೈಲೆಂಟ್ ಕಿಲ್ಲರ್. ನಮ್ಮ ಜೀವವನ್ನೇ ಬಲಿ ಪಡೆಯುತ್ತದೆ ಎನ್ನುತ್ತಾರೆ ವೈದ್ಯರು.
ಆಹಾರ ಅಂಟಿಕೊಳ್ಳದ ಪಾತ್ರೆಗಳನ್ನು ಹಾನಿಕಾರಕ ರಾಸಾಯನಿಕಗಳಿಂದ ತಯಾರಿ ಮಾಡಲಾಗುತ್ತದೆ. ನಾನ್​ಸ್ಟಿಕ್​ ಪಾತ್ರೆಗಳು ಹೀಗೆ ತಯಾರಿ ಮಾಡಲಾಗಿದ್ದು, ಇದು ಕ್ಯಾನ್ಸರ್​​ಗೆ ಮುಖ್ಯ ಕಾರಣ. ಈ ಪಾತ್ರೆಗಳಲ್ಲಿ ಆಹಾರ ತಯಾರಿಸಿ ತಿಂದರೆ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಕೂಡಲೇ ಈ ವಸ್ತುಗಳನ್ನು ಅಡುಗೆ ಮನೆಯಿಂದ ಎಸೆಯಿರಿ ಎಂದಿದ್ದಾರೆ ವೈದ್ಯರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us