/newsfirstlive-kannada/media/post_attachments/wp-content/uploads/2023/06/weather.jpg)
ಉತ್ತರ ಪ್ರದೇಶದಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಕಳೆದ ಮೂರು ದಿನಗಳಿಂದ ಬಲ್ಲಿಯಾದಲ್ಲಿ 54 ಜನರು ಸಾವನ್ನಪ್ಪಿದ್ದಾರೆ. ಸುಮಾರು 400 ಜನರು ಆಸ್ಪತ್ರೆ ದಾಖಲಾಗಿದ್ದಾರೆ. ಆದರೀಗ ಈ ವಿಚಾರವಾಗಿ ಅಧಿಕಾರಿ ವಿವರಣೆ ನೀಡಿದ್ದು, ಬಿಸಿಲಿನ ತಾಪಮಾನದಿಂದ ಜನರು ಸತ್ತಿಲ್ಲ ಎಂದು ಹೇಳಿದ್ದಾರೆ.
ಜೂನ್ 15ರಂದು 23 ಜನರು ಸಾವನ್ನಪ್ಪಿದರು. ಬಳಿಕ 20 ಜನರು ಮತ್ತು ಜೂನ್ 18 ರಂದು 11 ರೋಗಿಗಳು ಸಾವನ್ನಪ್ಪಿದ್ದಾರೆ. ಪೂರ್ವ ಉತ್ತರ ಪ್ರದೇಶದ ವೈದ್ಯರರೊಬ್ಬರು ಬಿಸಿಲಿನ ತಾಪಮಾನದಿಂದ ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ಆದರೆ ಇದೇ ವಿಚಾರವಾಗಿ ಲಕ್ನೋದ ಹಿರಿಯ ವೈದ್ಯರು ಘಟನೆಯನ್ನು ಪರಿಶೀಲಿಸಲು ಮುಂದಾಗಿದ್ದು, ಬಿಸಿಲಿನ ತಾಪಮಾನದಿಂದ ಜನರು ಸಾವನ್ನಪ್ಪಿಲ್ಲ ಎಂದು ಹೇಳಿದ್ದಾರೆ.
ಹಿರಿಯ ಸರ್ಕಾರಿ ವೈದ್ಯರಾದ ಎ.ಕೆ ಸಿಂಗ್ ಮಾತನಾಡಿದ್ದು, ಪ್ರಾಥಮಿಕವಾಗಿ ಇದು ಶಾಖ ಅಥವಾ ಬಿಸಿಲಿನ ತಾಪಮಾನದಿಂದ ಸಾವು ಕಂಡುಬಂದಿಲ್ಲ. ಏಕೆಂದರೆ ಹತ್ತಿರ ಜಿಲ್ಲೆಗಳಲ್ಲಿ ಇಂತಹ ಘಟನೆಗಳು, ಸಾವು ನೋವು ಸಂಭವಿಸಿಲ್ಲ. ಸಾವಿಗೀಡಾದ ಜನರ ಆರಂಭಿಕ ರೋಗಲಕ್ಷಣಗಳು ಎದೆ ನೋವಿನಿಂದ ಕೂಡಿದ್ದವು ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು, ನೀರಿಗೆ ಸಂಬಂಧಿಸಿ ಸಾವು ಸಂಭವಿಸಿದೆಯೇ ಅಥವಾ ಬೇರೆ ಕಾರಣಗಳಿವೆಯೇ ಎಂದು ತನಿಖೆ ನಡೆಸಲಾಗುವುದು ಎಂದು ವೈದ್ಯರಾದ ಎ.ಕೆ ಸಿಂಗ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ